ವಿಷಯಕ್ಕೆ ಹೋಗು

ಪುಟ:ಇಂದ್ರವಜ್ರ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

15

ಇವರೊಳಗೆ ಕಾಳಿದಾಸನಹೆಸರನ್ನರಿಯದವರಾರು? ಶಾಕುಂತಲ,ವಿಕ್ರಮೋವ್ರಶೀಯ, ಮಾಲವಿಕಾಗ್ನಿ ಮಿತ್ರಗಳೆಂಬ ನಾಟಕರತ್ನಗಳನ್ನೂ, ರಘುವಂಶ, ಕುಮಾರಸಂಭವ, ಮೇಘಸಂದೇಶಗಳೆಂಬ ಮಹಾ ಕಾವ್ಯಗಳನ್ನೂ ವಿರಚಿಸಿ, ಜಗದ್ವಿಖ್ಯಾತನಾದೀ ಕವಿಗೆ ಸಮನೆಲ್ಲಿರುವನು? ಆತನ ಕೀರ್ತಿಯು ಚಂದ್ರಸೂರ್ಯರಂತೆ ಚಿರಸ್ಥಾಯಿಯಾಗಿರುವುದು.

ವರಾಹ ಮಿಹಿರಾಚಾರ್ಯರು ಜ್ಯೋತಿಷ್ಠರು. ಇ ವರು ಕ್ರಿ.ಶ. ೫೦೫ ರಿಂದ ೫೮೭ ರವರೆಗೆ ಇದ್ದರೆಂದು ಒಂದು ಮತ.ಇವರು ಉಜ್ಜಯಿನಿಯಬಳಿ ಒಂದು ಖ ಗೋಳದರ್ಶನ ಶಾಲೆಯನ್ನು ಕಲ್ಪಿಸಿ,ಅದರಿಂದ ಗ್ರಹಗಳ ಸ್ಥಿತಿ ಚಲನೆಗಳನ್ನು ಗೊತ್ತು ಮಾಡುತಲಿದ್ದರು, ಇವರೇ ಬಹುಶಃ ಉಜ್ಜಯಿನಿಯ ಬಳಿ ಅಂಗಾರಕೇಶ್ವರನ ದೇ ವಾಲಯವನ್ನು ಕಟ್ಟಿಸಿರಬಹುದು. ಇವರು 'ಪಂಚ ಸಿದ್ದಾಂತ ವೆಂಬ ಗ್ರಂಥವನ್ನು ಬರೆದಿರುವರು.

ವರರುಚಿಯು ವ್ಯಾಕರಣ ಶಾಸ್ತ್ರ ಪಾರಂಗತನು, ಈತನು ಪ್ರಾಕೃತಭಾಷೆಗಳನ್ನು ಕ್ರಮವಾಗಿ ವಿಂಗಡಸಿ , ಅವುಗಳ ವ್ಯಾಕರಣವನ್ನು ಬರೆದಿರುವನು

ಅಮರಸಿಂಹನ ಹೆಸರು ಈ ದೇಶದಲ್ಲಿ ಆ ಬಾಲವೃದ್ದ ರಿಗೂ ಪರಿಚಿತವಾಗಿದೆ. ಈತನ 'ಅಮರ', 'ಅಮರಕೋಶ' ಅಥವಾ 'ನಾಮಲಿಂಗಾನುಶಾಸನ' ವೆಂಬ ನಿಘಂಟು ಎಲ್ಲರಿಂದಲೂ, ಎಲ್ಲ ಕಾಲಗಳಲ್ಲಿಯೂ ಆದ