ಈ ಪುಟವನ್ನು ಪ್ರಕಟಿಸಲಾಗಿದೆ
೮
ಜನಪದ ಕಥೆಗಳು
ಅದರಿಂದ ಮಾವನಿಗೂ ಹಿಡಿಸಲಾರದಷ್ಟು ಹಿಗ್ಗು. ಸೊಸೆಯು ತಾನು ಗಳಿಸಿಕೊಂಡು ತಂದ ಆಸ್ತಿಯನ್ನೆಲ್ಲ ಮಾವನಿಗೆ ಒಪ್ಪಿಸಿದಳು.
"ಮಗನಗಳಿಕೆಯೆಲ್ಲಿ ಎಂದು ಮಾವ ಕೇಳಿದಾಗ-? ಇದೋ, ಈ ಅರಿವೆ ಗಂಟಿನಲ್ಲಿದೆ. ಎಂದು ಒಪ್ಪಿಸಿದಳು. ಅದನ್ನು ಸಡಗರದಿಂದ ಬಿಚ್ಚಿ ನೋಡಿದಾಗ—ಬೋಳಿಸಿ ತೆಗೆದ ತಲೆಯ ಹಾಗೂ ಗಡ್ಡದ ಕೂದಲು! ಅದರ ಕಥೆಯನ್ನೆಲ್ಲ ಸೊಸೆಯ ಬಾಯಿಂದ ಕೇಳಿ, ಮಗನ ಬಾಳು ಸೊಸೆಯ ಜಾಣತನದಿಂದ ಸುಖಕರವಾಗುವುದರಲ್ಲಿ ಸಂದೇಹವಿಲ್ಲವೆಂದು ಬಗೆದು, ಇನ್ನು ತಾನು ನಿಶ್ಚಿಂತೆಯಿಂದ ಸಾಯುವೆನೆಂದು ಸೊಸೆಗೂ ಮಗನಿಗೂ ಹೇಳಿದನು ಆ ಮುದುಕ.
•