ಪುಟ:ಉನ್ಮಾದಿನಿ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಖಗೇಂದ್ರನಾಥನು ವಿನೀತಭಾವದಿಂದ, ೧೮ ಏನು ಪ್ರತಿಜ್ಞೆಯೋ ಅಪ್ಪನೆಯ ಗಲಿ” ಎಂದನು. ರಾಮಗೋಪಾಲನು ಸ್ವಲ್ಪ ಹೊತ್ತು ಚಿತ್ರಿಸಿ, 1 ನಿನು ಬದುಕಿರುವವರೆಗು ನೀನು ಈ ವಿವಾಹವಿಚಾರವನ್ನು ಏಕಾಂತವಾಗಿಡಬೇಕು, ಈ ವಿವಾಹವಾದಮೇಲೆ ನೀನು ನನ್ನ ಮನೆಗೆ ನಾನು ಬದುಕಿರುವವರೆಗೂ ಬಾರದಿರಬೇಕು. ನನ್ನ ಮರಣಾನಂ ತರ ಈ ಮದುವೆಯಾದ ವಿಚಾರವನ್ನು ಬಹಿರಂಗಪಡಿಸಿ, ನಾನು ಇರಿಸಿಹೋಗುವ ಆಸ್ತಿಯನ್ನು ನೀವು ಗಂಡಹೆಂಡಿರಿಬ್ಬರೂ ಅನುಭವಿಸಬೇಕು. ಈಗ ಮದುವೆಯಾದ ಮೇಲೆ ಅಲಹಾಬಾದಿಗೆ ಹೋಗಿ, ಅಲ್ಲಿ ನನ್ನ ಸಂಬಂಧರಾದವರೊಬ್ಬರ ಮನೆಯಲ್ಲಿರ ಬೇಕು, ನಿನಗೆ ಬೇಕಾಗುವ ವೆಚ್ಚಗಳಿಗೆಲ್ಲಾ ನಾನು ಹಣವನ್ನು ಕಳುಹಿಸುತ್ತಲಿರು ಬೆನು, ಅಲ್ಲಿ ಕಾಲೇಜಿನಲ್ಲಿ ಓದಬೇಕು. ಇದಕ್ಕೆ ನೀನೊಪ್ಪುವಿಯೋ ಹೇಳು ? ಎಂದನು. ಖಗೇಂದ್ರನು ಪುನಃ ವಿನೀತಭಾವದಿಂದ, 14 ತಾವು ಹೇಗೆ ಅಪ್ಪಣೆ ಮಾಡು ಪರೋ, ಹಾಗೆ ಮಾಡುವುದಕ್ಕೆ ಸಿದ್ಧನಾಗಿರುವೆನು ” ಎಂದು ಹೇಳಿದನು, ರಾಮಗೋಪಾಲ :-ಒಳ್ಳೆಯದು, ಈಗ ನೀನು ಹೋಗಬಹುದು.” ಖಗೇಂದ್ರನಾಥನು ಹೊರಟುಹೋದ ಮೇಲೆ, ತರ್ಕಾಲಂಕಾರ ಮಹಾಶಯರು, « ಹಾಗಾದರೆ ನಾಳೆ ವಿವಾಹಕ್ಕೆ ಬಹಳ ಒಳ್ಳೆಯ ದಿನವಾಗಿರುವುದು. ಎರಡು ಪ್ರಹ ರದ ಮೇಲೆ ಲಗ್ನ ಎಡಬಹುದು. ಪ್ರಸ್ತಕ್ಕೆ ಎಲ್ಲಾ ಸಿದ್ಧ ಮಾಡಿಡಬಹುದು' ಎಂದರು. ರಾಮಗೋಪಾಲ :-«« ಇನ್ನೊಂದು ಮಾತು ಹೇಳುವುದಿರುವುದು, ಪ್ರಸ್ತವ ನನ್ನ ಮನೆಯಲ್ಲಿ ನಡೆಯಕೂಡದು. ಎಲ್ಲಾ ಸಿದ್ದ ಪಡಿಸಿಡುವೆನು, ಬೇಕಾದ ಹಣ ಕಾಸೆಲ್ಲಾ ತಮ್ಮ ವಶಕ್ಕೆ ಕೊಡುವೆನು. ಸಂಪ್ರದಾನಕಾರ್ಯವು ತಮ್ಮ ಕಾಳಿಯ ದೇವಸ್ಥಾನದಲ್ಲಿ ನಡೆಯಬೇಕು, ಈ ಕಾರ್ಯವನ್ನು ಸಾಧ್ಯವಾದ ಮಟ್ಟಿಗೂ ಏಕಾಂತ ವಾಗಿ ನಡೆಯಿಸಿಬಿಡಬೇಕೆಂಬುದು ನನ್ನ ಇಷ್ಟ.” ತರ್ಕಾಲಂಕಾರ ಮಹಾಶಯರು ಹಾಗೆಯೇ ಸ್ವಲ್ಪ ಯೋಚಿಸಿ ಬಹಳ ಆಹ್ವಾನ ದಿಂದ, « ಅದು ಬಹಳ ಸರಿಯಾದುದು. ಅದರ ವಿಚಾರದಲ್ಲಿ ನೀನು ಚಿಂತಿಸಬೇಕಾದ ಆವಶ್ಯಕವಿಲ್ಲ. ನಾನು ಎಲ್ಲವನ್ನೂ ಸಿದ್ಧ ಪಡಿಸುವೆನು” ಎಂದು ಹೇಳಿದರು. ಮಾರನೆಯ ದಿನ ರಾತ್ರಿ ಎರಡನೆಯ ಪ್ರಹರದಲ್ಲಿ ಶಾಮವುರಗಾಮದಲ್ಲಿ ರೇವತೀನದಿಯ ತೀರದಲ್ಲಿದ್ದ ಕಾಳಿಯ ದೇವಸ್ಥಾನದಲ್ಲಿ ಅತ್ಯಂತ ಏಕಾಂತವಾಗಿ ಈ