ಪುಟ:ಉನ್ಮಾದಿನಿ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೊದಲನೆಯ ಪರಿಚ್ಛೇದ ವಿವಾಹಕಾರ್ಯವು ನಡೆದುಹೋಯಿತು. ಪಾತ್ರನಾದ ಖಗೇಂದ್ರನಾಥನು ತಾನು ಮೆಚ್ಚಿದ್ದ ಪಾತ್ರಿಯಾದ ದುರ್ಗಾವತಿಯೊಡನೆ ಪರಿಣಯಸೂತ್ರದಿಂದ ಆಬದ್ಧನಾದನು, ಅದುಕಾರಣ ಆವನ ಆನಂದಕ್ಕೆ ಪಾರವಿರಲಿಲ್ಲ. ಪಾತ್ರಿಯಾದ ದುರ್ಗಾವತಿಯ ಆ ಸಣ್ಣ ಹೃದಯದಲ್ಲಿ ಹಿಡಿಯಲಾರದಷ್ಟು ಆನಂದವುಂಟಾಯಿತು. ಪಾತ್ರನು ಅವಳಿಗೆ ವಿಶೇಷ ಪರಿಚಿತನಾಗಿ ಬಾಲ್ಯ ಸ್ನೇಹಿತನಾಗಿದ್ದನು, ಇಬ್ಬರಿಗೂ ಪರಸ್ಪರ ಗಾಢಪ್ರಣಯ ವಿತ್ತೋ ಇಲ್ಲವೋ, ಅದನ್ನು ಈ ಹಿಂದೂ ವಿವಾಹದಲ್ಲಿ ಅನುಸಂಧಾನಮಾಡುವುದು ನಮಗೆ ಅವಶ್ಯವಿಲ್ಲ. ಆದರೆ ವಿವಾಹಕ್ಕೆ ಪೂರ್ವವೇ ಇಬ್ಬರೂ ಪರಸ್ಪರ ಒಂದು ಪ್ರಕಾರವಾಗಿ ಪ್ರೀತಿಸುತ್ತಲಿದ್ದರೆಂದು ನಾವು ಖಂಡಿತವಾಗಿ ಹೇಳಬಲ್ಲೆವು. ಕನ್ಯಯ ಕರ್ತನಾದ ರಾಮಗೋಪಾಲನೂ ಆನಂದದಿಂದ ಅಧೀರನಾದನು, ಬಹಳ ದಿವಸಗಳ ಅವನ ಆಶೆಯು ಈ ದಿನ ಕೈಗೂಡಿತು, ಪುರೋಹಿತ ತರ್ಕಾಲಂಕಾರ ಮಹಾಶಯರು ಈ ದಿನ ಆನಂದದಿಂದ ಉಲ್ಲಸಿತರಾಗಿದ್ದರು. ಏಕೆಂದರೆ, ಈ ವಿವಾಹದಿಂದ ಅವರಿಗೆ ಆಶಾತೀತ ಅರ್ಥಲಾಭ ಉಂಟಾಯಿತು. ಆದರೆ ಈ ಆಖ್ಯಾಯಿಕೆಯ ನಾಯಕನಾಯಕಿ ಯರ ಮದುವೆಯ ಸಲುವಾಗಿ, ನಮ್ಮ ಪಾಠ ಕಮಹಾಶಯರ ಆನಂದವನ್ನು ಹೇಗೆ ವೃದ್ಧಿಗೊಳಿಸಬೇಕೊ, ಅದನ್ನು ಕುರಿತು ನಾವು ಏನೂ ಸ್ಥಿರಮಾಡಲಾರದವರಾಗಿರು ವೆವು, ಯಾವ ಮದುವೆಯಲ್ಲಿ ಗೋಧಿಸಲ್ಪಶಾಸ್ತ್ರ, ಒಂದಕ್ಕಿಶಾಸ್ತ್ರ, ದೇವರನ್ನು ತರು ವುದು, ದಿಬ್ಬಣದವರ ಒಡ್ಡಣೆ ಮುಂತಾದವು ಇಲ್ಲವೋ, ಅಂತಹ ಮದುವೆಯ ಪಾಠಕರ ಮನೋಮತವಲ್ಲ ಎಂಬುದು ಖಂಡಿತ ಹೇಳಬಲ್ಲೆವು, ಓಲಗ, ಬಾಜಾ ಬಜಂತರಿ, ಮೇಳಿತಾಳ, ಇಂಗ್ಲೀಷು ಬಾಂಡು ಇವುಗಳ ಮಾತು ಹಾಗಿರಲಿಮುಹೂರ್ತಕಾಲದಲ್ಲಿ ಆನಂದಸೂಚಕವಾದ ಒಂದು ಘಟಾಶಬ್ದವು ಕೂಡ ಇಲ್ಲದ ಮದುವೆಯು ಪಾಠಕಮಹಾಶಯರಿಗೆ ಮದುವೆಯಾಗಿ ಗಣ್ಯವಾಗಲಾರದು. ಯಾವ ವಿವಾಹದಲ್ಲಿ ಕಾಶೀಯಾತ್ರೆ ಇಲ್ಲವೋ, ನಾಗವಲಿ ಮೆರವಣಿಗೆ ಇಲ್ಲವೋ, ಅಂತಹ ವಿವಾಹವನ್ನು ಕುರಿತು ಅನೇಕರು ಜರೆದಾಡುವರೆಂದು ನಾವು ಖಂಡಿತವಾಗಿ ಹೇಳ ಬಲ್ಲೆವು. ಈ ಪ್ರಕಾರ ನಡೆದ ವಿವಾಹ ಮಹೋತ್ಸವವನ್ನು ಕುರಿತು ನಾವು ಮತ್ತೇನು ತಾನೇ ವರ್ಣಿಸಲಾಸವು ? ಶುಭಮುಹೂರ್ತದಲ್ಲಿಯೋ ಅಥವಾ ಅಶುಭಮುಹೂರ್ತ ದಲ್ಲಿಯೋ, ಮಾರನೆಯ ದಿನ ಗಭೀರರಾತ್ರಿಯಾವದೋ ಒಂದು ಮುಹೂರ್ತದಲ್ಲಿ ಆ ಕರಾಳಮೂರ್ತಿ ಕಾಳಿಕಾದೇವಿಯ ಸಮಕ್ಷಮದಲ್ಲಿ, ಈ ಮದುವೆಯು ಅತ್ಯಂತ ಏಕಾಂತವಾಗಿ ನಡೆದುಹೋಯಿತು,