ಪುಟ:ಉನ್ಮಾದಿನಿ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎರಡನೆಯ ಪರಿಚ್ಛೇದ ಅವಳು ಬಹಳ ಅಜ್ಞಾಶೀಲೆ, ತಂದೆಯ ಇದಿರಿಗೂ ಅವಳು ತಲೆಯೆತ್ತಿ ಮಾತನಾಡಳು, ಬ್ರಹ್ಮ ತಾವಲಂಬಿಯಾದ ತಂದೆಯ ಸಂಗತ ಕಲಿಕತ್ತೆಗೆ ಬರುವುದಕ್ಕೆ ಅವಳಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಆದರೆ ಆಗ ಅವಳು ಆ ಮಾತನ್ನು ಬಾಯಿಬಿಟ್ಟು ಹೇಳಬ ಆಳಾಗಿದ್ದಳೆ ? ಮತ್ತು ಅವಳ ವಾಣವು ಯಾರಿಗೋಸ್ಕರ ಸರ್ವದಾ ತುಡಿದು ಸಂಕಟ ಪಡುತ್ತಲಿತ್ತೊ, ಆತನು ಈ ದುಃಖದ ಸಮಯದಲ್ಲಿ ಎಲ್ಲಿಗೆ ಹೋದನು ? ಎದೆ ಸೀಳಿ ಹೋದರೂ ಆ ಮಾತು ಅವಳ ಬಾಯಿಯಿಂದ ಹೊರಡದು, ದುರ್ಗಪತಿಯು ಮನ ಸ್ಸಿನಲ್ಲಿ, ತನ್ನ ದೊಡ್ಡಪ್ಪನು ಸ ಸಮಾಚಾರವನ್ನು ಕೇಳಿದ ಕೂಡಲೆ, ಖಗೇಂದ್ರ ನಾಥನು ಬಂದು ಸಮಸ್ತ ಭಾರವನ್ನೂ ವಹಿಸಿಕೊಳ್ಳುವನೆಂದು ತಿಳಿದಿದ್ದಳು. ದುರ್ಗಾ ವತಿಯು ಅಲಹಾಬಾದಿಗೆ ಎಷ್ಟು ದಿನಗಳೊಳಗೆ ಸಮಾಚಾರವು ಮುಟ್ಟುವುದೋ ಎಂದು ಯೋಚನೆಯಲ್ಲಿದ್ದಳು. ಅಲ್ಲಿಗೆ ಸಮಾಚಾರವನ್ನು ಯಾರೂ ಬರೆದು ಕಳುಹಿಸ ಲಿಲ್ಲ ವೆಂಬುದು ಅವಳ ಮನಸ್ಸಿಗೆ ಹತ್ತಲಿಲ್ಲ. ತರ್ಕಾಲಂಕಾರ ಮಹಾಶಯರು ಗ್ರಾಮದಲ್ಲಿಲ್ಲ ವೆಂಬುದೂ ಅವಳಿಗೆ ತಿಳಿಯದು. ಅವಳ ಸ್ವಭಾವಕ್ಕನುಗುಣವಾಗಿ ಏನೊಂದೂ ಮಾತನಾಡದೆ, ಅಳತ್ತಳುತಂದೆಯೊಡನೆ ಹೊರಟು ಕಲಿಕತ್ತೆಗೆ ಬಂದಳು. ಹೊರಡುವಾಗ ಗ್ರಾಮದಲ್ಲಿದ್ದ ಅವಳ ಸಮವಯಸ್ಕರಾದ ಗೆಳತಿಯರು ಅವಳನ್ನು ನೋಡುವುದಕ್ಕೆ ಬಂದಿದ್ದರು, ಆಗ ಅವಳ ಬಹಳ ಅತ್ತಳು, ಅಳುವು ದಕ್ಕೆ ಅವಳಿಗೆ ಅನೇಕ ಕಾರಣಗಳಿದ್ದುವು. ಮೊದಲನೆಯದು, ತಂದೆಗೆ ಸಮಾನನಾದ ದೊಡ್ಡಪ್ಪನು ಸತ್ತು ಹೋದನು. ಅನಂತರ; ಆಜೀವನವೂ ಯಾವ ಮನೆಯಲ್ಲಿ ಪ್ರತಿ ಪಾಲಿತಳಾಗಿದ್ದಳೊ, ಆ ಶೈಶವಾಸ್ಥೆಯಿಂದ ಯಾರು ತನ್ನ ಸಂಗಾತಿಗಳಾಗಿ ದ್ದರೋ, ಯಾವ ದಾಸದಾಸಿಯರನ್ನು ತಿಲಾರ್ಧಕಾಲವಾದರೂ ನೋಡದಿದ್ದರೆ ಸುಮ್ಮನೆ ಇರಳೋ, ಅಂತಹವರ ಮೇಲಿನ ಮಮತೆ ಯನ್ನೆಲ್ಲಾ ತೊರೆದು ಬೇರೆ ಹೊಸ ಸ್ಥಳಕ್ಕೆ ಹೋಗಬೇಕಾಗಿ ಬಂದಿತು, ಎಲ್ಲರೂ ದುರ್ಗಾವತಿಯ ತಾತ್ಕಾಲಿಕ ಅಳುವಿಗೆ ಇದೆಲ್ಲಾ ಕಾರಣಗಳೆಂದು ಊಹಿಸಿಕೊಂಡು, ಅವಳ ದುಃಖದಲ್ಲಿ ದುಃಖಿತರಾಗಿ ಕಣ್ಣೀರು ಬಿಟ್ಟರು. ಆ ಸಮಯದಲ್ಲಿ ಅವಳ ಆ ಅಳುವಿಗೆ ಮುಖ್ಯವಾದ ಕಾರಣ ವನ್ನು ಯಾರೂ ಊಹಿಸಲಾರದೆ ಹೋದರು. ದುರ್ಗಾವತಿಯು ಕಲಿಕತ್ತೆಗೆ ಬಂದಳು. ಒಂದುಕಡೆ ನೋಡಿದರೆ, ಹುಡುಗಿಯು ಬಹಳ ಕಾಲದ ಮೇಲೆ ತೌರುಮನೆಗೆ ಬಂದು, ತಾಯಿ ತಂದೆಗಳು ಸೋದರಸೋದರಿ ಯರು ಇವರೊಂದಿಗೆ ಸೇರಿದಹಾಗಿರುವುದು. ಮತ್ತೊಂದು ಕಡೆ ನೋಡಿದರೆ, ಒಬ್ಬ ಹಿಂದಜಾತಿಯ ಹುಡುಗಿಯು ಸಂಪೂರ್ಣ ಅಪರಿಚಿತವಾದ ಬ್ರಹ್ಜಾತಿಯವರ