ಪುಟ:ಉನ್ಮಾದಿನಿ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಣಳ್ಳನೆಯ ಪರಿಚ್ಛೇದ hwwwwwwwwwwwwwwwwwwwwwwwwwwwwwwwwwwwwwwwwwwwwww ಸಗೇಂದ್ರ :- ಅಂತಹ ಲಕ್ಷಣಗಳು ಕಂಡುಬಂದುದಾವುದು--ವಿವರ ವಾಗಿ ಹೇಳು, ” ಜ್ಯೋತಿ :- ಮೊದಲು, ಆ ವಿವಾಹವಾದ ರಾತ್ರಿ ನನ್ನ ಸಂಗಡ ಏಸನ ಮಾತನಾಗಲಿಲ್ಲ. ರಾತ್ರಿಯೆಲ್ಲಾ ಎಷ್ಟೇ ಪ್ರಯತ್ನ ಪಟ್ಟೆನು ; ಆದರೂ ಅವಳು ಬಾಯಿಯಿಂದ ಒಂದು ಮಾತು ಕೂಡ ಹೊರಡಲಿಲ್ಲ. ಮರುದಿನ ಬೆಳಗ್ಗೆ ಎದ್ದು ಮೂಡಲಗಿ, ವಿನೋದಿನಿಯ ಕಣ್ಣುಗಳು ರಕ್ತವರ್ಣವಾಗಿದ್ದುವು. ಆಗ ಬಾಯಿ ಯಲ್ಲಿ ಮಾತಿಲ್ಲ. ಆದರೆ ಆ ವಿಶಾಲವಾದ, ರಕ್ತದ ಹಾಗೆ ಕೆಂಪೇರಿದ್ದ ಕಣ್ಣುಗಳಿಂದ ನನ್ನನ್ನು ದೃಷ್ಟಿಸಿ ನೋಡಿದಳು. ಅವಳ ಆ ನೋಟವನ್ನು ನೋಡಿ ಆಗ ನನಗೆ ಮೈ ರಕ್ತವೆಲ್ಲಾ ಒಣಗಿಹೋಗುತ್ತ ಬಂತು, ಪಿಶಾಚಿ, ಭೂತ ಎಂಬುದನ್ನು ನಾನು ನಂಬು ಇದಿಲ್ಲ. ಅದರ ನಂಬುಗೆ ನನಗೆ ಇಲ್ಲ. ಆದರೆ ನಮ್ಮ ಮನೆಯಲ್ಲಿ ಕೆಲಸ ಮಾಡುವ ಧದಿಯು ವಿನೋದಿನಿಗೆ ನಿಜವಾಗಿಯೂ ಭೂತ ಹಿಡಿದಿದೆ ” ಎಂದು ಹೇಳಿದಳು, ನಾನದನ್ನು ನಂಬದೆ ಆ ರಾತ್ರಿಯೂ ನಾವು ಏಕಶಯ್ಕೆಯಲ್ಲಿ ಮಲಗಿದ್ದೆವು. ರಾತ್ರಿ ಯಲ್ಲಾ ವಿನೋದಿನಿಗೆ ನಿದ್ದೆಯಿಲ್ಲ, ಹಾಸಿಗೆಯ ಮೇಲೆ ನಿಲ್ಲಲಾರದೆ ಹೊರಳಾಡಿ ಹೋದಳು. ಸ್ವಲ್ಪವೂ ಕಣ್ಣು ಮುಚ್ಚಲಿಲ್ಲ. ನಾನು ಅವಳ ಮೈ ಮುಟ್ಟಿ ನೋಡಿದೆನು, ಮೈ ಬೆಂಕಿಯಾಗಿ ಸುಡುತ್ತಲಿತ್ತು, ಎಳ್ಳು ಹಾಕಿದರೆ ಸಿಡಿಯುವ ಹಾಗಿತ್ತು. ಅತ್ಯಂತ ಜ್ವರವೆಂದು ತಿಳಿದರು. ಕೈಯಿಂದ ಹಾಗೆಯೇ ಅವಳ ಮೈ ಸವರಿದೆನು. ನಾಲೈ ದು ನಿಮಿಷದೊಳಗೆ ಆ ಮೈ ಬೆಂಕಿಯು ಕ್ರಮವಾಗಿ ಕಡಿಮೆಯಾಗುತ್ತಾ ಬಂದು, ಕಡೆಗೆ ಮೈಯೆಲ್ಲಾ ಆಲಿಕಲ್ಲು ಮುಟ್ಟಿದಹಾಗೆ ತಣ್ಣಗಾಗಿ ಹೋಯಿತು. ನಾನು ರಾತ್ರಿ ಯೆಲ್ಲಾ ಪರೀಕ್ಷಿಸಿ ನೋಡಿದೆನು, ನಾನು ಅವಳ ಮೈ ಮೇಲೆ ಕೈಯಿಟ್ಟರೆ ಕೂಡಲೆ ಮೈಯೆಲ್ಲಾ ಆಲಿಕಲ್ಲಿನಹಾಗೆ ತಣ್ಣಗಾಗುವುದು, ಕೈ ತೆಗೆದುಬಿಟ್ಟರೆ ಕ್ರಮವಾಗಿ ಮೈಯಲ್ಲಿ ಉಷ್ಣ ವೇರುವುದು ; ಹೀಗಾಗುತ್ತಲಿತ್ತು. ನಾನು ಸ್ವಲ್ಪ ಹೆಚ್ಚಾಗಿ ಕೈಯಿ ಟ್ಟು ಕೊಂಡಿದ್ದರೆ ನಿಜವಾಗಿಯೂ ಅವಳು ಕೊಲ್ಲಾಗಿ + (ಒಮ್ಮಿಂದೊಮ್ಮೆ ಕ್ಷೀಣಿ ಸಿಹೋಗಿ) ಅವಳ ಮೃತ್ಯುವುಂಟಾಗುತ್ತಲಿತ್ತು. ಬೆಳಗ್ಗೆ ಎದ್ದು ನೋಡಿದೆವು. ಕಣ್ಣು ಅಷ್ಟು ಕೆಂಪಾಗಿರಲಿಲ್ಲ ; ರಕ್ತದಾಶವಿರಲಿಲ್ಲ. ಶರೀರದಲ್ಲಿಯ ರಕ್ತವೆಲ್ಲಾ ಶೋಷಿಸಿ ಹೋಗಿತ್ತು. ಮೈಯೆಲ್ಲಾ ಹಲ್ಲಿಯಹಾಗೆ ಬೆಳಗಿ ಹೋಗಿತ್ತು. ಅವಳು ನಿಶ್ಯಕ್ತಿಯಾ rರುವುದನ್ನು ನೋಡಿ, ನನಗೆ ಬಹಳ ಭಯವುಂಟಾಯಿತು, ನಿನ್ನನ್ನು ಕರೆಯಿಸಬೇಕೆಂ ದಿದ್ದೆನು. ಆದರೆ ನಮ್ಮ ಮನೆಯ ಪರಿಚಾರಿಕೆಯ ಕಂಗಸುಗೆ ಏನು ಗೊತ್ತಾಯಿತೋ

  • ( !!!•18 ¢,