ಪುಟ:ಉನ್ಮಾದಿನಿ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಪ್ರಕಾಶನು ಕೂಡಲೆ, ct ನಾನು ನಿಮ್ಮನ್ನು ಅದನ್ನೇ ಕೇಳಿಕೊಳ್ಳಬೇ ಕೆಂದಿದ್ದೆನು, ಬೇಕಾದರೆ, ಈಗಲೇ ನೋಡಬಹುದು ” ಎಂದನು, ತರ್ಕಾಲಂಕಾರ : ಅವಳನ್ನು ಎಲ್ಲಿ ಇರಿಸಿರುವಿರಿ ? !! ಜ್ಯೋತಿಪ್ರಕಾಶ :: ಮನೆಯಲ್ಲಿ ಬೀಗ ಹಾಕಿ ಕೂಡಿಹಾಕಿಡುವುದು ಸರಿ ಯಲ್ಲ ವೆಂದು ಡಾಕ್ಟರನು ಹೇಳಿದ ಕಾರಣ, ಅವಳನ್ನು ನಮ್ಮ ಮನೆಯ ಹಿಂದೆ ಇರುವ ತೋಟದಲ್ಲಿ ಬಿಟ್ಟಿದ್ದೇವೆ. ತೋಟಕ್ಕೆ ಸುತ್ತಲೂ ಮನೆಗಳಿರುವುದರಿಂದ, ಅವಳು ಮತ್ತೆಲ್ಲಿಯೂ ಹೋಗುವುದಕ್ಕೆ ಮಾರ್ಗವಿಲ್ಲ, ಆ ತೋಟಕ್ಕೆ ಹೋದರೆ ಅವ ಳನ್ನು ನೋಡಬಹುದು, !! ೩ಗೇಂದ್ರನಾಥನು ಕೂಡಲೇ ಎದ್ದು ನಿಂತನು. ಅವನೊಂದಿಗೆ ತರ್ಕಾಲಂಕಾರ ಮಹಾಶಯನು ಎದ್ದನು. ಈ ಸಮಯದಲ್ಲಿ ನವೀನಗೋಪಾಲನು ಅಲ್ಲಿಗೆ ಬಂದನು ; ಬಂದು ಜ್ಯೋತಿಪ್ರಕಾಶನ ಬಾಯಿಯಿಂದ ನಡೆದಿದ್ದ ಮಾತುಕಥೆಗಳನ್ನೆಲ್ಲಾ ಕೇಳಿದನು, ಜ್ಯೋತಿಪ್ರಕಾಶನು ದುರ್ಗಾವತಿಯನ್ನು ಪರಿತ್ಯಾಗ ಮಾಡಲು ಸಮ್ಮತವುಳ್ಳವನಾಗಿ ರುವ ಸಂಗತಿಯನ್ನು ತಿಳಿದು ಸಂತುಷ್ಟನಾದನು. ಆದರೆ ಮಗಳು ಕಡೆಗೆ ತನ್ನ ಕೈಬಿಟ್ಟು ಹೋಗುವಳೆಂದು ಚಿಂತಿತನಾದನು, ಈ ಸಮಯದಲ್ಲಿ ದುರ್ಗಾವತಿಯನ್ನು ನೋಡ ಬೇಕೆಂಬ ಮತು ಬಂತು. ನನಗೋಪಾಲನು ಅದಕ್ಕೆ ಒಪ್ಪಲಿಲ್ಲ. ಆದರೆ ಜ್ಯೋತಿ ಪ್ರಕಾಶನು, ನೋಡಿದರೆ ಒಳ್ಳೆಯದಾಗುವುದೆಂದು ಹೇಳಿದಮೇಲೆ ನವೀನಗೋಪಾ ಲನು ಪುನಃ ಆಕ್ಷೇಪಿಸಲಾರದೆ ಸುಮ್ಮನಿದ್ದನು. ಅನಂತರ ನಾಲ್ಕು ಮಂದಿಯ ತೋಟಕ್ಕೆ ಹೋದರು. ಅಲ್ಲಿ ಹೋಗಿ ನೋಡ ಲಾಗಿ, ಉನ್ಮಾದಿನಿಯು ವನದೇವಿಯ ಹಾಗೆ ಅಲಂಕೃತಳಾಗಿ ತಿರುಗಾಡುತ್ತಲಿದ್ದಳು. ಹೂವೆಲ್ಲಾ ಮಾಲೆಯಾಗಿ ಕಟ್ಟಿ ಧರಿಸಿಕೊಂಡಿದ್ದಳು. ಈ ದಿನ ಉನ್ಮಾದಿನಿಯು ಹೂವಿನ ಅಂಗಿ ತೊಟ್ಟಿದ್ದ ಹಾಗೆ ಮೈಯೆಲ್ಲಾ ಹೂವಿನಿಂದ ಮುಚ್ಚಿ ಹೋಗಿತ್ತು. ಕಂಠ ದಲ್ಲಿ ಹೂವಿನ ಹಾರ-ಶಿರದಲ್ಲಿ ಹೂವಿನ ಕಿರೀಟ-ಮೈಯೆಲ್ಲಾ ಹೂವಿನಿಂದ ಅಲಂ ಕಾರ, ಉನ್ಮಾದಿನಿಯು ತನ್ನ ಮನಸ್ಸಿಗೆ ಬಂದಹಾಗೆ ಹಾಡುವಳು-ಕುಣಿದಾಡು ವಳು-ಅಲ್ಲಲ್ಲಿ ಹೂವನ್ನೆತ್ತುವಳು. ಖಗೇಂದ್ರನಾಥನು ರೆಪ್ಪೆಹಾಕದೆ ನೋಡಲಾರಂಭಿಸಿದನು ನೋಡುತ್ತಿದ್ದ ಹಾಗೆ ಅವನ ಕಣ್ಣು ಅಶ್ರುಧರಕಾಂತವಾಯಿತು. ಉನ್ಮಾದಿನಿಗೆ ಅತ್ತಕಡೆ ದೃಷ್ಟಿಯಿರ ಲಿಲ್ಲ. ಅವಳು ಆನಂದದಿಂದ ತನ್ನ ಇಷ್ಟ ಬಂದ ಕಡೆ ತಿರುಗಾಡುತ್ತಲಿದ್ದಳು.