ಪುಟ:ಉಮರನ ಒಸಗೆ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪

ದೊಳಗೆ ಅನೇಕ ಸಂಸ್ಥಾನಗಳಿದ್ದುವಲ್ಲದೆ, ಅವುಗಳ ರಾಜರುಗಳಲ್ಲಿ ಪರಸ್ಪರ ವೈರಗಳೂ, ಅವರ ಅಣ್ಣತಮ್ಮಂದಿರುಗಳಲ್ಲಿ ಜಗಳಗಳೂ, ಅವರವರ ಪರಿವಾರಗಳಲ್ಲಿ ಒಳಸಂಚು ಪಿತೂರಿಗಳೂ ನಡೆಯುತ್ತಿರಲಾಗಿ, ಈ ಅವ್ಯವಸ್ಥೆಯ ಕಳವಳವು ದೇಶವನ್ನಾವರಿಸಿತ್ತು.

ಈ ಮೂರು ಬಗೆಯ ಸಂದರ್ಭಗಳ ಗುರುತುಗಳು ಉಮರನ ಕೃತಿಯಲ್ಲಿ, ಸರಸ ವಿದ್ಯಾಭಿಮಾನ, ಜೀವನ ತಮ್ಮ ವಿಚಾರವ್ಯಾಕುಲ, ರಾಜ್ಯ ವೈಭವ ಜುಗುಪ್ಸೆ--ಇವುಗಳ ಸೂಚನೆಗಳ ರೂಪದಲ್ಲಿ ಕಾಣಬರುತ್ತವೆ. ಅದು ಜನ ಮನೋಭಾವದ ವ್ಯತ್ಯಾಸ ಕಾಲದಲ್ಲಿ ಹುಟ್ಟಿದ ಕಾವ್ಯ.

ಉಮರನು ವಿಸ್ತಾರವಾಗಿ ದೇಶಾಟನೆ ಮಾಡಿದ್ದನು; ಅರೇಬಿಯಾ, ಸಿರಿಯಾ, ಮೆಸೊಪೊಟೇಮಿಯಾ ದೇಶಗಳ ರಾಜಾಸ್ಥಾನಗಳನ್ನ ಪಂಡಿತ ಮಂಡಲಿಗಳನ್ನೂ ನೋಡಿದ್ದನು ; ಮಹಮ್ಮದೀಯರ ಪ್ರಸಿದ್ಧ ಪುಣ್ಯ ಸ್ಥಲವಾದ "ಮೆಕ್ಕಾ" ಕ್ಷೇತ್ರಕ್ಕೂ ಯಾತ್ರೆ ಮಾಡಿದ್ದನು. ಆದರೆ ಆತನು ನಿಜವಾದ ಭಕ್ತಿಯಿಂದ ಅಲ್ಲಿಗೆ ಹೋಗಿದ್ದನೋ, ನೋಟ ನೋಡುವ ಕುತೂಹಲದಿಂದ ಮಾತ್ರವೇ ಹೋಗಿದ್ದನೋ, ಅಥವಾ ತನ್ನ ಕಾವ್ಯದಲ್ಲಿ ಸಂಪ್ರದಾಯನಿಷ್ಠರನ್ನು ಕುರಿತ ಆಕ್ಷೇಪಣೆಯಿದ್ದ ಕಾರಣ, ಅವರು ತನ್ನ ಮೇಲೆ ನಾಸ್ತಿಕನೆಂಬ ದೂರನ್ನು ಹೊರಿಸಿ ಶಿಕ್ಷೆ ಮಾಡಿಸಿಯಾರೆಂಬ ಭೀತಿಯಿಂದ, ಆ ಅಪವಾದವನ್ನು ತಳ್ಳುವುದಕ್ಕಾಗಿ ಯಾತ್ರಿಕನಂತೆ ನಟಿಸಿ ಅಲ್ಲಿಗೆ ಹೋಗಿದ್ದನೋ ಎಂಬ ವಿಚಾರವು ಚರ್ಚಾಸ್ಪದವಾಗಿದೆ.

ಉಮರನ ಮತವಿಷಯದ ಅಭಿಪ್ರಾಯಗಳು ಆತನ ಸಮಾಜದ ಪೂರ್ವಾಚಾರ ಪಂಡಿತರಿಗೆ ಅಸಮ್ಮತಗಳಾಗಿದ್ದುವೆಂಬುದೇನೋ ಖಂಡಿತ. ಆತನ ಕಾವ್ಯವನ್ನು ಅವರು ಚಾರ್ವಾಕ ಕೃತಿಯೆಂದು