ಪುಟ:ಉಮರನ ಒಸಗೆ.djvu/೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಫಿಟ್ಸ್-ಜೆರಲ್ಡ್

ಆಂಗ್ಲ ಪ್ರಪಂಚಕ್ಕೆ ಉಮರ ರಸಾಯನವನ್ನು ದೊರಕಿಸಿ ಕೊಟ್ಟವನು ಎಡ್ವರ್ಡ್ ಫಿಟ್ಸ್-ಜೆರಲ್ಸ್ ಎಂಬ ವಿದ್ವತ್ಕವಿ.

ಈತನು ಕ್ರಿಸ್ತ ವರ್ಷ ೧೮೦೯ರ ಮಾರ್ಚಿ ೩೧ರಲ್ಲಿ ಹುಟ್ಟಿ ೧೮೮೩ರ ಜೂನ್ ೧೪ರಲ್ಲಿ ಮೃತನಾದನು.

ಇಂಗ್ಲೆಂಡಿನ ಸಫಕ್ ಜಿಲ್ಲೆಯ ಒಂದು ಗ್ರಾಮವು ಈತನ ಜನ್ಮಸ್ಥಲ. ಈತನ ತಂದೆ ಜಮೀನ್‌ದಾರ. ಆತನ ಮಕ್ಕಳೆಂಟು ಮಂದಿಯಲ್ಲಿ ಏಳನೆಯವನು ಎಡ್ವರ್ಡ್ ಫಿಟ್ಸ್-ಜೆರಲ್ಡ್. ಇವನು ಐದು ವರ್ಷದವನಾಗಿರುವಾಗ ಇವರ ತಂದೆ ಪ್ಯಾರಿಸ್ ನಗರದಲ್ಲಿ ಒಂದು ಮನೆ ಮಾಡಿ, ಪ್ರತಿವರ್ಷವೂ ಕೆಲವು ತಿಂಗಳುಗಳ ಕಾಲ ಸಂಸಾರ ಸಹಿತವಾಗಿ ಅಲ್ಲಿರುತ್ತಿದ್ದನು. ಹನ್ನೆರಡನೆಯ ವರ್ಷದಲ್ಲಿ ಫಿಟ್ಸ್-ಜೆರಲ್ಡ್‌ನಿಗೆ ಪಾಠಶಾಲಾ ಪ್ರವೇಶವಾಯಿತು. ಹದಿನೇಳನೆಯ ವರ್ಷದಲ್ಲಿ ಅವನು ಪ್ರಸಿದ್ದವಾದ ಕೇಂಬ್ರಿಡ್ಜ್ ಪಟ್ಟಣದ ವಿಶ್ವವಿದ್ಯಾಪೀಠವನ್ನು ಆಶ್ರಯಿಸಿ, ನಾಲ್ಕು ವರ್ಷಗಳ ತರುವಾಯ (೧೮೩೦) ಅಲ್ಲಿಯ ಪಟ್ಟ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದನು. ಮೊದಲಿನಿಂದಲೂ ಅವನಿಗೆ ಕಾವ್ಯಪಾಠದಲ್ಲಿ ಅನನ್ಯವಾದ ಅಭಿರುಚಿ. ಮೊದಲಿನಿಂದಲೂ ಅವನಿಗೆ ಏಕಾಕಿಯಾಗಿದ್ದುಕೊಂಡು ದೊಡ್ಡ ಭಾವನೆಗಳಲ್ಲಿ ಮಗ್ನನಾಗಿರುವುದು ಅಭ್ಯಾಸ. ವಿಶ್ವವಿದ್ಯಾಲಯದಲ್ಲಿಯೂ ಪಾಠಶಾಲೆಯಲ್ಲಿಯೂ ಆತನ ಸಹಾಧ್ಯಾಯಗಳಾಗಿದ್ದವರಲ್ಲಿ ಅನೇಕರು ಕಾಲಕ್ರಮದಲ್ಲಿ ಪ್ರಸಿದ್ಧಿಗೆ ಬಂದರು. ಅವರ ಪೈಕಿ ಅನೇಕರು ಆತನಿಗೆ ಆಗಿನಿಂದಲೂ ಸ್ನೇಹಿತರಾಗಿದ್ದರು. ಇಂಥವರಲ್ಲಿ ಮೊದಲು ಗಣ್ಯರಾಗತಕ್ಕವರು ಮಹಾಕವಿಯಾದ ಲಾರ್ಡ್ ಟೆನ್ನಿಸನ್ ಮತ್ತು ಮಹಾಕಾದಂಬರೀ ಕರ್ತನಾದ ಥ್ಯಾಕರೆ. ಆ ಕಾಲದ ಪ್ರಖ್ಯಾತ