ವಿಷಯಕ್ಕೆ ಹೋಗು

ಪುಟ:ಉಮರನ ಒಸಗೆ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೮

ಗದ್ಯ ಕವಿಯಾದ ಕಾರ್ಲೈಲನೂ ಫಿಟ್ಸ್ ಜೆರಲ್ಡಿನ ಮಿತ್ರವರ್ಗಕ್ಕೆ ಸೇರಿದ್ದನು.

⁠ವಿದ್ಯಾರ್ಜನೆ ಮುಗಿದ ಬಳಿಕ ಫಿಟ್ಸ್-ಜೆರಲ್ಡನು ಯಾವ ಉದ್ಯೋಗಕ್ಕೂ ಕೈಹಚ್ಚಲಿಲ್ಲ. ದ್ರವ್ಯದ ಮೇಲೆಯೂ ಪ್ರತಿಷ್ಠೆಯ ಮೇಲೆಯೂ ಆತನ ಮನಸ್ಸು ಹೋಗಲೊಪ್ಪಲಿಲ್ಲ. ಪಿತ್ರಾರ್ಜಿತ ವಾದ ಜಮೀನಿನ ಮೇಲೆ ನೆಲಸಿ,-ಉಮರನಂತೆ-ಅಲ್ಲಿಯ ಆಡಂಬರವಿಲ್ಲದ ಸಾಮಾನ್ಯ ಸುಖದಿಂದ ಸಂತೃಪ್ತನಾಗಿ, ಕಾವ್ಯೋ ಪಾಸನೆಯಲ್ಲಿ ಕಾಲಕ್ಷೇಪಮಾಡಬೇಕೆಂಬುದೇ ಆತನಿಗೆ ಸಹಜ ವಾದ ಆಶೆಯಾಗಿತ್ತು. ಶಾಂತವಾದ ಹಸಿರುಗಾವಲು, ಕೋಮಲ ವಾದ ಹೂಗಳ ತೋಟ, ಮೃದುವಾದ ಪಕ್ಷಿ ಕೂಜಿತ, ಗುಣಾ ಢ್ಯರೂ ಸರಸಿಗಳೂ ಆದ ನಾಲೈದು ಮಂದಿ ಆಪ್ತಸ್ನೇಹಿತರ ಪ್ರೇಮ, ಕೆಲವು ಸದ್ಯಂಥಗಳಲ್ಲಿ ಅಭಿನಿವೇಶ-ಇವಿಷ್ಟಕ್ಕಿಂತ ಹೆಚ್ಚಿನದಾವುದೂ ಜೀವಿತ ಸೌಖ್ಯಕ್ಕೆ ಬೇಕಾಗಿಲ್ಲವೆಂದು ಆತನು ಮೊದಲಿನಿಂದಲೂ ಭಾವಿಸಿದ್ದನು.

⁠ನಲವತ್ತೇಳನೆಯ ವರ್ಷದಲ್ಲಿ ಆತನು ಮದುವೆ ಮಾಡಿ ಕೊಂಡನು. ಕೈಹಿಡಿದಾಕೆಯು ಆತನಲ್ಲಿ ಪ್ರೀತಿ ಗೌರವಗಳುಳ್ಳವ ಳಾಗಿದ್ದಳು. ಆದರೆ ಜೀವಿತ ಚರ್ಯೆಯ ವಿವರಗಳ ವಿಷಯದಲ್ಲಿ ಆಕೆಯ ಸ್ವಭಾವವು ಬೇರೆ ಬಗೆಯದಾಗಿತ್ತು. ಜನರಲ್ಲಿ ವಿಶೇಷ ವಾಗಿ ಹೋಗೊಣ ಬರೋಣ, ಸಮಾಜದಲ್ಲಿ ಗಣ್ಯತೆಯನ್ನು ಅಪೇಕ್ಷಿಸೋಣ, ನೆರೆಹೊರೆಯವರ ನಡೆನುಡಿಗಳನ್ನೂ ಉಡುಪು ತೊಡುಪುಗಳನ್ನೂ ಪ್ರಮಾಣವಾಗಿಟ್ಟುಕೊಂಡು ಅದಕ್ಕೆ ಕಟ್ಟು ಬಿದ್ದಿರೋಣ ಈ ತೆರನಾದುದು ಆಕೆಯ ಮನೋವೃತ್ತಿ, ಜನದ ಗೊಂದಲವನ್ನು ದೂರದಲ್ಲಿ ಬಿಟ್ಟಿರೋಣ, ಯಾವ ಬಗೆಯಲ್ಲೂ ಹೆರರ ಬಾಯಿಗೆ ಸಿಕ್ಕದೆ ಇರೋಣ, ತನ್ನ ಅಂತರಂಗದಲ್ಲಿ ವಿಚಾರ ಮಾಡಿ ಅಲ್ಲಿ ಉಚಿತತೋರಿದಂತೆ ನಡೆದುಕೊಳ್ಳೋಣ ಈ ತೆರ ನಾದುದು ಆತನ ಮನೋವೃತ್ತಿ, ಒಂದುಕಡೆ ಸಂಪ್ರದಾಯ