ಪುಟ:ಉಮರನ ಒಸಗೆ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯

ದಾಸ್ಯ, ಇನ್ನೊಂದು ಕಡೆ ಸ್ವಾತಂತ್ರ್ಯ ಪ್ರೀತಿ. ಇವೆರಡೂ ಒಂದ ಕ್ಕೊಂದು ಒಗ್ಗುವುದು ಕಷ್ಟವೆಂದು ಕೆಲವು ತಿಂಗಳುಗಳಲ್ಲಿಯೇ ಆ ದಂಪತಿಗಳ ಅನುಭವಕ್ಕೆ ಬಂದಿತು. ಹೇಗಾದರೂ ತಮ್ಮ ಸ್ವಭಾವ ಗಳನ್ನು ತಿದ್ದಿಕೊಂಡು ಪರಸ್ಪರ ಸಹ್ಯವಾಗಬೇಕೆಂದು ಅವರಿಬ್ಬರೂ ಅನೇಕ ಪ್ರಯತ್ನಗಳನ್ನು ಮಾಡಿ ನೋಡಿದರು. ತಮ್ಮ ವಾಸಸ್ಥಲ ವನ್ನು ಬದಲಾಯಿಸಿದರು ; ಉಭಯರಿಗೂ ಸ್ನೇಹಿತರಾಗಿದ್ದವರ ಸಹಾಯವನ್ನು ಬೇಡಿದರು. ಆದರೂ ಮನಸ್ಸಿಗೆ ಮುಜುಗರ ವನ್ನುಂಟುಮಾಡುವ ಸಂದರ್ಭಗಳು ತಪ್ಪಲಿಲ್ಲ. ಕಡೆಗೆ ಅವರು ಬೇರೆಯಾಗಿರುವುದೇ ಲೇಸೆಂದು ನಿಶ್ಚಯಿಸಿ ಪ್ರತ್ಯೇಕವಾದರು. ಮತ್ತೆ ಅವರು ಸೇರಲೇ ಇಲ್ಲ. ಆದರೂ ಅವರ ಅನ್ನೋನ್ಯ ವಿಶ್ವಾ ಸವು ಎಂದಿನಂತೆ ಇತ್ತು. ಕಾಗದಗಳ ಮೂಲಕವೂ ಮಿತ್ರರ ಮೂಲಕವೂ ಅವರು ಪರಸ್ಪರ ಸಮಾಚಾರಗಳನ್ನು ತಿಳಿದು ಕೊಳ್ಳುತ್ತಿದ್ದರು.

⁠ಫಿಟ್ಸ್-ಜೆರಲ್ಡನು ಏಕಾಂತ ಸೇವಿ, ಒಬ್ಬಂಟಿಗನಾಗಿ ಗದ್ದೆ ತೋಟ ಕಾಡುಗಳಲ್ಲಿ ಸಂಚಾರ ಮಾಡುವುದು, ಇಷ್ಟವಾದಾಗ ಪರಿಚಿತರಾದ ಹಳ್ಳಿಯ ಜನರೊಡನೆ ಮಿತವಾಗಿ ಮಾತನಾಡು ವುದು, ಸಮುದ್ರದಲ್ಲಿ ತಾನೇ ದೋಣಿ ನಡಿಸಿಕೊಂಡು ಹೋಗು ವುದು, ಸುತ್ತಮುತ್ತಲಿನ ಸೃಷ್ಟಿ ಸೌಂದರ್ಯವನ್ನು ನೋಡುತ್ತ ಕಾಲನಿಯಮವಿಲ್ಲದೆ ಮನದಿಂದ ಕುಳಿತಿರುವುದು, ಮನಸ್ಸು ಬಂದಾಗ ಓದುವುದು, ಎಂದೋ ಒಂದು ದಿನ ತಾನಾಗಿ ಪ್ರವೃತ್ತಿ ಯುಂಟಾದಾಗ ಬರೆಯುವುದು,-ಇವೆ ಫಿಟ್ಸ್-ಜೆರನ ಉಳಿದ ಚರಿತ್ರೆಯ ಮುಖ್ಯ ಸಂಗತಿಗಳು. ಆತನು ಮಾಂಸಾಹಾರವನ್ನು ವರ್ಜಿಸಿದ್ದನು ; ಉಡುಪಿನ ವಿಷಯದಲ್ಲಿಯ ಉದಾಸೀನನಾ ಗಿದ್ದನು. ಎಲ್ಲ ಬಾಹ್ಯ ನಿರ್ಬಂಧಗಳನ್ನೂ ಸಾಧ್ಯವಾದಷ್ಟು ಮಟ್ಟಿಗೆ ತೊರೆದು, ಆತ್ಮಾರಾಮನಾಗಿ ಬಾಳಿದ ಕವಿ ಆತನು. ⁠ಆತನ ಗ್ರಂಥ ರಚನೆಯನ್ನು ಕುರಿತು ಹೇಳುವುದಕ್ಕೆ ಮುಂಚೆ ನಾವು ಗಮನಕ್ಕೆ ತಂದುಕೊಳ್ಳಬೇಕಾದ ಅಂಶವೊಂದಿದೆ.