ಪುಟ:ಉಮರನ ಒಸಗೆ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯

ಕ್ಷಣಿಕತೆಯನ್ನು ಮರೆತವನಲ್ಲ ; ಮನುಷ್ಯ ಜೀವಿತದ ವ್ಯತ್ಯಾಸಗಳನ್ನು ಕಾಣದವನಲ್ಲ; ವಿಶ್ವ ತತ್ತ್ವವನ್ನರಿಯಬೇಕೆಂಬ ಕುತೂಹಲ ವಿಲ್ಲದವನಲ್ಲ. ಇವುಗಳನ್ನೆಲ್ಲ ಅವನು ಅನುಭವಿಸಿ ದುಃಖ ಪಟ್ಟಿದ್ದಾನೆ. “ ಅಳಬೇಡ ; ನಗು"–– ಎಂದು ಅವನು ಹೇಳಿದರೂ, ಆ ಮಾತು ಹೊರಡುವುದು ಕೇಕೆ ಹಾಕುವ ಬಾಯಿಂದಲ್ಲ ; ಮರುಕದ ದನಿಯಿಂದ, ಭಯದಲ್ಲಿಯೂ ಶೋಕದಲ್ಲಿ ಇರುವಾಗ ನಾವೆಲ್ಲರೂ ಒಬ್ಬರೊಬ್ಬರಿಗೆ–– ಅದರಲ್ಲಿಯ ಹಿರಿಯರು ಕಿರಿಯರಿಗೆ ಹಾಗೆಯೇ ಹೇಳಿಕೊಳ್ಳುತ್ತೇವೆ. ಹಾಗೆ ಹೇಳತಕ್ಕನರಿಲ್ಲದಿದ್ದರೆ ಬದುಕು ಮುಂದಕ್ಕೆ ಸಾಗುವುದು ಹೇಗೆ? : ಎಷ್ಟೋ ಇವೆ.

ಈ ಒಂದು ಭಾವವನ್ನು ಸೂಚಿಸುವುದೇ ಉಮರನ ಆಶಯವೆಂದು ನನಗೆ ತೋರುತ್ತದೆ. ಜಗತ್ತಿನ ಮರ್ಮವೇನೆಂಬುದನ್ನು ಸೃಷ್ಟಿಕರ್ತನೇ ಬಚ್ಚಿಟ್ಟಿದ್ದಾನೆ ; ಅದನ್ನೆಷ್ಟು ಹುಡುಕಿದರೂ ಅದು ದೊರೆಯುವಂತಿಲ್ಲ ; ಅದಕ್ಕಾಗಿ ಶ್ರಮಪಟ್ಟವರೆಲ್ಲರೂ ಇನ್ನೂ ಕಾಣದವರಂತೆ ಕಾದಾಡುತ್ತಿದ್ದಾರೆ ; ಲೋಕದ ಏರ್ಪಾಟುಗಳಲ್ಲಿಯ ನಮ್ಮ ಕೈಯಿಂದ ತಿದ್ದಲಾಗದ ಹೆಚ್ಚು ಕಡಮೆಗಳು ಇವುಗಳನ್ನು ನೆನೆ ನೆನೆದು ಕೊರಗುತ್ತಾ ಆಯುಷ್ಯವನ್ನು ಕಳೆದುಬಿಡೋಣವೆ, ಅಥವಾ ಸಾಧ್ಯವಾದಷ್ಟು ಸಮಾಧಾನವನ್ನು ತಂದುಕೊಂಡು, ಇರುವುದನ್ನೇ ಈಶ್ವರ ಪ್ರಸಾದವೆಂದು ಭುಜಿಸಿ ಸಂತೋಷಪಡೋಣವೆ? ಎರಡನೆಯದೇ ಮೇಲಾದ ದಾರಿಯೆಂಬುದು ಉಮರನ ಮತ. ಆತನು ಅಪೇಕ್ಷಿಸುವುದು ಹೆಚ್ಚಿನ ಐಶ್ವರ್ಯವನ್ನಲ್ಲ. ಜನದ ಸಂದಣಿಯಿಲ್ಲದ ಒಂದು ನೆರಳಿನ ತಾವು ; ಪ್ರಾಣಾಧಾರವಾಗಿ ಸ್ವಲ್ಪ ಆಹಾರ ; ಬೇಸರವನ್ನು ಹೋಗಲಾಡಿಸಿ ಮನಸ್ಸಿನ ಉಲ್ಲಾಸವನ್ನು ಹೆಚ್ಚು ಮಾಡಲು ಎಲ್ಲರಿಗೂ ಸುಲಭವಾಗಿ ಸಿಕ್ಕುವ ದ್ರಾಕ್ಷಾರಸದ ಒಂದೆರಡು ಗುಟುಕು ; ಕೆಲವು ಸದ್ಗ್ರಂಥಗಳು; ಒಂದಿಷ್ಟು