ಪುಟ:ಉಮರನ ಒಸಗೆ.djvu/೪೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ

ಉಮರನ ಒಸಗೆ


ಪುಣ್ಯಗಳನಾರ್ಜಿಸಿದೆವೆಂಬ ಘನ ಚರಿತರುಂ
ಪತಿತರೆನ್ನಂತೆನಿಪ್ಪಲ್ಪ ಜಂತುಗಳುಂ
ಮಣ್ಣಹರದೊಂದೆ ತೆರದಲಿ ಬಳಿಕ ಜನರಾರು
ಮಾ ಗೋರಿಗಳ ತೆರೆಯರವರ ದರ್ಶನಕೆ. ೧೪

ಹಾ! ಪ್ರಿಯಳೆ, ಬಾ; ಇಂದಿನಿಂ ಹಿಂದಿನಳಲುಗಳ
ಮುಂದಿನಳುಕುಗಳ ತೊಲಗಿಸುವ ಬಟ್ಟಲನು
ತುಂಬಿ ನೀಡೆನಗೀಗ; "ನಾಳೆ"ಯೆಂಬೆಯೊ?–ನಾಳೆ
ಸೇರುವೆನು ನೂರ್ಕೋಟಿ ನಿನ್ನೆಗಳ ಜೊತೆಗೆ ೧೫

ಮಣ್ಣಿನೊಳಗಕಟ! ನಾನಿಳಿಯುವಂದಿನ ಮುನ್ನ
ಇನ್ನುಮುಳಿದಿಹ ದಿನವ ಬರಿದೆ ನೀಗುವುದೇಂ
ಮಣ್ಣೋಳಗೆ ಮಣ್ಣಾಗಿ ನನ್ನೊಡನೆ ಬೆರೆವುದೇಂ
ಮಧು ಗೀತ ಸತಿ ಗತಿಗಳೊಂದನರಿಯದೆಯೆ ? ೧೬