ಈ ಪುಟವನ್ನು ಪ್ರಕಟಿಸಲಾಗಿದೆ
ಉಮರನ ಒಸಗೆ
೩೯
೧೭
ಇಂದಿಗೆಂದಾಯಾಸಪಡುವಂಗವಂತಿರದೆ
ನಾಳೆಯಿನ್ನೇನೆಂದು ಕೇಳ್ವಂಗಮಿಂತು
ಕತ್ತಲೆಯ ಗೋಪುರದ ಗುರು ಸಾರ್ವನ್ : "ಎಲೆ ಮರುಳೆ !
ಇರದು ಸೊಗಮಿತ್ರ ನಿನಗಿರದದತ್ತಾನುಂ."
೧೮
ಪಂಡಿತರು ಶಾಸ್ತ್ರಿಗಳು ಸೂಕ್ಷ ಚತುರತೆಯಿಂದ
ಚರ್ಚಿಸಿಹರುಭಯಲೋಕಗಳ ಮರುಮಗಳ ;
ಅವರ ಪಾಡೇನಾಯ್ತು? ಉಳಿದರಂತವರೆಲ್ಲ,
ಮಣ್ಣು ಬಾಯನು ಮುಚ್ಚೆ, ಸೋತು ಮಲಗಿದರು.
೧೯
ಮುದಿ ಉಮ್ಮರನ ಕೂಡೆ ನಡೆ ; ಪಂಡಿತರನ್ನೆಲ್ಲ
ವಾದಿಸಲು ಬಿಡು ; ದಿಟವಿದೊಂದಿಹುದು ಕೇಳು:
ಬಾಳು ಅಳಿವುದೆ ದಿಟವು ; ಮಿಕ್ಕೆಲ್ಲ ಸಟೆಯೆ ಸರಿ;
ಒಮ್ಮೆ ಅರಳಿದ ಹೂವು ಬಾಡುವುದೆ ದಿಟವು.