ಪುಟ:ಉಮರನ ಒಸಗೆ.djvu/೪೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ

ಉಮರನ ಒಸಗೆ ೪೧


ಇಷ್ಟ ಪೂರ್ತಿಯನರಿತ ಮೊಗದಸಕವದೆ ನಾಕ ;
ಕಷ್ಟವೆಂದಳುವವನ ನೆಳಲದುವೆ ನರಕ.
ಕತ್ತಲೆಯಿನಿತ್ಯವೆಲ್ಲರು ಹೊರಟು ಬಂದಿಹೆವು :
ಅತ್ತಲೇ ಸೇರುವೆವು ಮಗುಳಿತ್ತಣಿಂದೆ. ೨೨

ಈ ಜಗದಿ ನಾನಿಹುದದೇತಕೋ ತಿಳಿಯದಿರಹೆ
ನೆಲ್ಲಿಂದ ಬಂದೆನೆಲ್ಲಿಗೆ ಪೋಪೆನೆನುತ
ಬಗೆದು ಪೇಳ್ವವರಿಲ್ಲ; ಬರಿಯ ಮಾತಿಂದೇನು !
ಮಳೆಯವೋಲಿಳಿದಿಹೆನು; ಹಬೆಯುವೋಲ್ ಪರಿವೆಂ. ೨೩

ಬಿದಿಯೆನ್ನ ಕೇಳದೆಯೆ, ಎತ್ತಣಿಂದಲೋ ಬರಿಸಿ,
ಮತ್ತೆನ್ನ ಕೇಳದತ್ತಲಿಗೋ ಕಳಿಪುವುದೆ?
ಹಾ! ಒಂದು ಬಟ್ಟಲನು ತಾರಿಲ್ಲಿ ಮತ್ತೊಂದ
ನದರೊಳೀ ದುರುಳತೆಯ ನೆನಪ ಮುಳುಗಿಪೆನು. ೨೪