ಈ ಪುಟವನ್ನು ಪ್ರಕಟಿಸಲಾಗಿದೆ
ಉಮರನ ಒಸಗೆ
೪೩
೨೮
ಇಂತೊರೆದ ಕುಡಿಕೆ ತಾಂ ಪಿಂತೊಂದು ಜನ್ಮದಲಿ
ಉಸಿರಿಡುತ ಕೂರ್ವೆಯಿಂ ಬಾಳ್ದುದಿರಬಹುದು ;
ಎನ್ನ ತುಟಿ ಸೋಂಕಿದಾ ತಣ್ಪುಳ್ಳ ನುಣ್ದುಟಿಯ
ದೆನಿಸು ಮುತ್ತು ಕೊಟ್ಟು, ಎನಿಸ ಕೊಂಡಿತ್ತೋ!
೨೯
ಈ ಗುಲಾಬಿಯ ಕೆಂಚದೆತ್ತಣದೋ! ಇದರ ಬೇ
ರೀಂಟಿತೇಂ ಚಲುವೆಯೋರ್ವಳ ರಕುತ ಕಣವ ?
ಈ ನದಿಯನಪ್ಪಿರುವ ಪಸುರೋ! ಪಿಂತಿತ್ತಳೆದ
ಬಿರಯಿಯೋರ್ವನ ತಲೆಯ ಪಾಗಿದಕೆ ಬೇರೇಂ?
೩೦
ಆಹ! ಅಂತಿರಬಹುದು. ಈ ಮಣ್ಣು ಹೊದ್ದಿಕೆಯೊ
ಳೆನಿಬರೋ ಹುದುಗಿಹರು ನಮಗೆಡೆಯ ಬಿಟ್ಟು;
ಅವರಂತೆ ನಾವಿಂದು ತಿರೆಯತಣವನುಂಡು,
ಮರೆಯಾಗಿ ಬಳಿಕಿದನು ಕಿರಿಯರ್ಗೆ ಬಿಡುವ೦.