ಪುಟ:ಉಲ್ಲಾಸಿನಿ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಲಾಸಿನಿ. ರವಯು ದುಃಖದ್ರೇಕದಿಂದ ಮೈಮರೆತು ಓಡಿ ನಿಮಿಷಾರ್ಧದಲ್ಲಿ ರಣ ರಂಗವನ್ನು ಸೇರಿದಳು, ಸತ್ಯವತೋಗ್ರರು ಸಮಪರಾಕ್ರಮಿಗಳಾದುದ ರಿಂದ ಬಹಳ ಹೊತ್ತು ಸೋಲು ಗೆಲುವು ತಿಳಿಯದಂತೆ ಹೋರಾಡಿದರು. ಕಡೆಗೆ ಸತ್ಯವ್ರತನು ಮಾಡಿದ ಅನೃತ ಪ್ರಮಾಣದ ಪಾಪವೂ ಸುಶೀಲನ ಹರಿಕೆಯನ್ನು ಸಲಿಸದೆ ಬಿಡಬೇಕೆಂದಿರುವ ಅಪರಾಧವೂ ಉಗ್ರನಿಗೆ ಸ್ವಲ್ಪ ಸಹಾಯುಮಾಡಿತಂಬಂತೆ ಆಗಿ ಸವ್ರತೋಗ್ರರ ಪರಾಕ್ರಮವನ್ನು ತೂಕ ಮಾಡುವ ತಾನಿನ ದಂಡಿಗೆಯು ಉಗ್ರನಕಡೆಗೆ ವಾಲಿತು, ಸತ್ಯವ್ರತನು ಲಘ ಪರಾಕ್ರಮಿಯಾದನು, ಉಗ್ರನ ಬಾಣವರ್ಷವು ಅವನನ್ನು ವರ್ಣಿ ಗೊಳಿಸಿತು. ಬಿಲ್ಲನ್ನು ಎಡಗೈಯಲ್ಲಿಯು ಕಿವಿಯವರೆಗೂ ಸೆಳೆದ ಹದೆ ಯನ್ನೂ ಹೂಡಿದ ಬಾಣವನ್ನೂ ಬಲಗೈಯಲ್ಲಿಯ ಧರಿಸಿದವನು ಹಾಗೆಯೇ ನೆಲಕ್ಕೆ ಬಿದ್ದನು, ಸೇನಾ ಜನರು ಅನಾಥರಾಗಿ ದಿಕ್ಕು ದಿಕ್ಕಿಗೂ ಓಡಿದರು, ರಮಣಿಯು ಸಧೃವತನ ದೇಹವನ್ನು ನಿತಿರಾತ್ರಿಯಲ್ಲಿ ಸಾಯು ತಿರುವ ಮತ್ತು ಸತ್ತಿರುವ ಸಾವಿರಾರು ಯೋಧರರಾಶಿಯಲ್ಲಿ ಹುಡುಕಿ ರಥದ ಇರಸಿಯ ಕೆಳಗೆ ಬಿದ್ದಿರುವವನನ್ನು ಪಾತಿವ್ರತ್ಯದ ಸಹಾಯದಿಂದ ಕಂಡು ಹಿಡಿದು ಅಪ್ಪಿಕೊಂಡು ಹೃದಯವು ಬಡೆಯುವಷ್ಟು ವ್ಯಸನದಿಂದ, “ಅಯ್ಯೋ ! ಈ ಹಡಿದ ಬಾಣವನ್ನು ಪ್ರಯೋಗಿಸುವುದರೊಳಗೆ ಇಂತಹ ಅವಸ್ಥೆಯು ಬರಬಹುದೆ ? ಎಂದು ಪ್ರಳಾಪಿಸುತ್ತ ಸವ್ರತನು ತನಗೆ ಕೊಟ್ಟಿದ್ದ ಉಂಗುರವನ್ನು ತೆಗೆದು ಅವನ ಕೈಯಲ್ಲಿದ್ದ ಉಂಗುರದ ಜೊತೆಯಲ್ಲಿಟ್ಟು ಅಯ್ಯೋ ! ರಸವೇ ಪ್ರೇಮರಸವು ಬತ್ತಿಹೋಗಿ ಶೋಕಾಗ್ನಿಯೇ ನನ್ನ ಪಾ ಲಿಗೆ ಉಳಿಯಿತು ಎಂದಳು, ಅಲ್ಪಮತಿಗೂ ಸಮಾಚಾರ ತಲಪಿತು, ಅವ ೪ಗೆ ಹೋಗಿ ನೋಡಬೇಕೆಂದು ಮನಸ್ಸಿನಲ್ಲಿ ಇಲ್ಲದಿದ್ದಾಗ ಲೋಕದ ಆಕ್ಷೇಪಣೆಗೆ ಗುರಿಯಾಗಲಾರದೆ ಊರಿಂದೀಚೆಗೆ ಬಂದು, ಸತ್ಯವ್ರತನನ್ನು ಹುಡುಕಿ ಸಿಕ್ಕದೆ ರವರೆಯ ರೋದನಸ್ಸರದ ಬಲದಿಂದ ಅಲ್ಲಿಗೆ ಬಂದು,