ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

— 4 —

ಆಯ್ದುಕೊಳ್ಳು ಎಂದು ಮುದಿಹೃದಯನಾದ ತಂದೆಯು ಅಪ್ಪಣೆ ಕೊಟ್ಟನು. ದುರ್ಗಾವತಿಯು ನಿರುತ್ತರಳಾದಳು, ತಿಳಿಯದಂತೆ ಜಗುಳಿ ಬಿದ್ದ ಅಶ್ರುಜಲವು ಹೂಮಾಲೆಯಲ್ಲಿ ಹಿಮಬಿಂದುವಿನಂತೆ ಮಾತ್ರವಿದ್ದು ತೊಲಗಿ, ಕರ್ಕಶವಾದ ಭೂಮಿಗೆ ಬಿದ್ದು ಆರಿಹೋಯಿತು. ಸ್ವಯಂವರದ ಮಂಗಲಮುಹೂರ್ತವು ತಪ್ಪಿ ಹೋಗುವುದೆಂದು ಚಂದೇಲನು 'ದುರ್ಗಾವತಿಯನ್ನು ತವಕಿಸಿದನು. ಅವಳ ಮುಕುಳಿತವಾದ ಮನಸ್ಸಿನಲ್ಲಿ ಆ ಮಾತು ಇಳಿಯಲಿಲ್ಲ. ಅವಳು ಅಧೋವದನಳಾಗಿ ಕಣ್ಣೆತ್ತದೆ ಮುಂದೆ ಮುಂದೆ ಹೆಜ್ಜೆಯನ್ನಿಟ್ಟಳು. ಅವಳ ಹೃದಯಕಮಲವನ್ನು ವಿಕಸಿಸುವ ಬಾಲಸರ್ಯನು ಇನ್ನೂ ಪೂರ್ವ ಶಿಖರವನ್ನು ಹತ್ತಿರಲಿಲ್ಲ. ದಳಪತಿ ಶಹನು ಸೈನ್ಯವನ್ನು ಸೇರಿಸಿ, ದುರ್ಗದ ಹಿಂದುಗಡೆಯಲ್ಲಿ ನಿಲ್ಲಿಸಿ, ವಿವಾಹಮಂಟಪವನ್ನು ಅಲಂಕರಿಸುವುದಕ್ಕೆ ಕಾಲವಿಳಂಬವಾಯಿತು. ಕನ್ನೆಯ ಈ ಅವಸ್ಥೆಯನ್ನು ನೋಡಿ ಆಮಂತ್ರಿತ ರಾಜಪುತ್ರರೆಲ್ಲರೂ ಆಶ್ಚರ್ಯಗೊಂಡರು. ಕೈಕಟ್ಟಿದ೦ತಾದ ಕನೈಯು ಏನು ಮಾಡ ಬೇಕೆಂಬುದು ಮುಂಗಾಣದೆ, ನೆಟ್ಟ ನೆ ಮಂಟಪದ ಬಹಿರ್ದ್ವಾರಕ್ಕೆ ಸರಿಯಾಗಿ ನಡೆದಳು. ಎರಡು ಕಡೆಗಳಲ್ಲಿ ಕುಳಿತುಕೊಂಡ ಅತಿಥಿಗಳೆಲ್ಲ ಕೊರಳುಗಳನ್ನು ನೀಡುತ್ತ ಹೊರಬಾಗಿಲಿನ ಕಡೆಗೆ ತಮ್ಮ ದೃಷ್ಟಿಯನ್ನು ಚಾಚಿದರು. ರಾಜಾಂಗಣದಲ್ಲಿ ಆನೆಯನ್ನು ಹತ್ತಿ ಒಬ್ಬ ಯೋಧನು ಬರುತ್ತಿದ್ದನು.ಅವರು ನೋಡುವಷ್ಟರಲ್ಲಿ ಯೋಧನು ಆನೆಯಿಂದ ಇಳಿದು ಮಂಟಪವನ್ನು ಪ್ರವೇಶಿಸಲಿಕ್ಕಿದ್ದನು. ದೂರದಿಂದ ಹಾರಿಬರುವ ಗಂಡು ಕಪೋತವನ್ನು ವಿರಹಿಣಿಯಾದ ಹೆಣ್ಣು ಕಪೋತನು ದೃಷ್ಟಿಸಿ, ಗರಿಗಳನ್ನು ಬಿಚ್ಚಿ, ಹಾರಿ ಹೋಗಿ ಅದರ ಬಳಿ ಸಂದು ಅದರ ರೆಕ್ಕೆಗಳಲ್ಲಿ ಒಗ್ಗೂಡುವಂತೆ, ತನ್ನ ಪ್ರಾಣವಲ್ಲಭನಾದ ದಳಪತಿ ಶಹನು ಸ್ವಯಂವರ ಮಂಟಪದಲ್ಲಿ ಪದಾರ್ಪಣ ಮಾಡುತ್ತಲೇ ಪುಳುಕಿತಳಾದ ದುರ್ಗಾವತಿಯು ಓಡಿಹೋಗಿ ಕುಸುಮಮಾಲೆಯನ್ನು ಅವನ ಕಂಠದಲ್ಲಿ ಇಟ್ಟು, ಅವನ ನಾನುಭಾಗವನ್ನು ಅವಲಂಬಿಸಿ ನಿಂತುಬಿಟ್ಟಳು. ಭಗ್ನ ಮನೋರಥನಾದ ಚಂದೇಲನು ತನ್ನ ಮಗಳ ನಡತೆಯನ್ನು ನೋಡಿ ಅವಾಕ್ಕಾದನು. ಮನ ಪೂರ್ವಕವಾಗಿ ಮಗಳನ್ನು ಅಳಿಯನಿಗೆ ಕೊಡುವುದಕ್ಕೆ