ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 6 -

ಅವಿಚ್ಛಿನ್ನವಾದ ಸುಖವು ಐಹಿಕ ಮನುಷ್ಯನ ಪಾಲಿಗೆ ಬರುವುದಿಲ್ಲ. ದುರ್ಗಾವತಿಯ ರಾಜ್ಯ ರಕ್ಷಣ ಸುಖವನ್ನು ಅನುಭವಿಸುವ ಅದೃಷ್ಟವು ಪ್ರಜೆಗಳಿಗೆ ಇದ್ದಿಲ್ಲ. ಅವಳ ದೇಶೋನ್ನತಿಯ ಸಮಾಚಾರವನ್ನು ಕೇಳಿ ಅಸೂಯೆಗೊಂಡವರಲ್ಲಿ ಅನೇಕರು ಇದ್ದರು. ಇಂತಹವರಲ್ಲಿ ಅಸೂಫ್‌ಖಾನನು ಒಬ್ಬನು. ಅಸೂಫ್‌‌ಖಾನನು ಗಥಾಮಂಡಲದ ಬಳಿಯಲ್ಲಿರುವ ಮಾಳವ ದೇಶದ ಸುಭೇದಾರನಾಗಿದ್ದನು. ಸ್ತ್ರೀಪಾಲಿತವಾದ ಸಂಸ್ಥಾನವನ್ನು ಆಕ್ರಮಿಸುವುದಕ್ಕಾಗಿ ಇದೇ ಅವಕಾಶವೆಂದು ಅವನು ರಾಜಾಧಿರಾಜನಾದ ಅಕ್ಬರಿಗೆ ಬರೆದು ಕಳುಹಿಸಿದನು. ಅಕ್ಬರು ಪರರಾಜ್ಯ ಆಕಾಂಕ್ಷಿತನಾಗಿದ್ದರೂ ಶತ್ರುಗಳಲ್ಲಿ ಕೂಡ ಸದ್ಗುಣವನ್ನು ಪರಿಗ್ರಹಿಸಿ ಸನ್ಮಾನಿಸುತ್ತಿದ್ದನು. ಅಬಲೆಯಾದ ದುರ್ಗಾವತಿಯನ್ನೂ ಬಾಲಕನಾದ ವೀರನರೇಂದ್ರನನ್ನೂ ನೋಯಿಸುವುದು ಅಕ್ಬರಿನ ಆರ್ಯ ಮನಸ್ಸಿಗೆ ಒಪ್ಪಿಗೆಯಾಗಲಿಲ್ಲ. ಆದರೆ ಗಢಾಮಂಡಲವು ರಕ್ತಪಾತವಿಲ್ಲದೆ ತನಗೆ ಶರಣು ಬರಬೇಕೆಂದು ತನ್ನ ಅಂತರ್ಯದಲ್ಲಿ ಆಶಿಸಿದ್ದನು. ಅಸೋಫಖಾನನು ಪುನಃ ಪುನಃ ಈ ವಿಷಯವನ್ನು ಅಕ್ಬರಿನ ಕಿವಿಗೆ ಒತ್ತಿ ಒತ್ತಿ, ಕೊನೆಗೆ ಗಢಾಮಂಡಲದ ಮೇಲೆ ದಳವನ್ನು ನಡೆಯಿಸಬಹುದೆಂದು ಅವನ ಅಪ್ಪಣೆಯನ್ನು ಹೊಂದಿದನು.

ಅಸೋಫ್ ಖಾನನು ಅಸಂಖ್ಯಾತ ಸೇನೆಯೊಡನೆ ಪುರದ್ವಾರದಲ್ಲಿ ಬಂದಿಳಿದನು. ನಗರದಲ್ಲಿ ಕೋಲಾಹಲವು ಎದ್ದಿತು. ಅರಮನೆಯಲ್ಲಿ ಎಲ್ಲರೂ ದಿಗಿಲು ಬಿದ್ದರು. ಕೂಡಲೇ ದುರ್ಗಾವತಿಯು ಅರಮನೆಯನ್ನು ಬಿಟ್ಟು ಕೆಳಕ್ಕೆ ಬಂದಳು. ಸಂಸ್ಥಾನದ ಮುಖ್ಯಾಧಿಕಾರಿಗಳನ್ನು ಕರೆಯಿಸಿ ದುರ್ಗಾವತಿಯು ಹೀಗೆಂದಳು:-- ನೀವು ಬುದ್ಧಿಸಂಪನ್ನರು; ರಣನೈಪುಣ್ಯಶೀಲರು. ನಾನು ಎಷ್ಟಾದರೂ ಹೆ೦ಗಸು; ಅರಮನೆಯನ್ನು ಬಿಟ್ಟವಳಲ್ಲ. ನಮ್ಮೆಲ್ಲರಿಗೆ ಬಂದೊದಗಿದ ಆಪತ್ತು ದುಸ್ಸಹವಾಗಿದೆ. ನಿರಪರಾಧಿಗಳಾದ ನಮ್ಮನ್ನು ಕೊಂದು, ನಮ್ಮ ಸದ್ಧರ್ಮವನ್ನು ಹಾಳು ಮಾಡಿ, ನಮ್ಮ ರಾಜ್ಯವನ್ನು ಆಕ್ರಮಿಸಬೇಕೆಂಬ ಈ ಮ್ಲೇಚ್ಛರ ನಡತೆಯು ನಿಮಗೆ ಯುಕ್ತ ತೋರುವುದೆ? ಇದಕ್ಕಿಂತಲೂ ದುಃಖಕರವಾದ ಸಂಗತಿಯುಂಟೆ? ಮನಸ್ವಿಯಾಗಿ ರಾಜ ಪುತ್ರರನ್ನು ಈ ಧರ್ಮಾಂಧರಾದ