ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 15 -

ರಾಜ್ಯಗಳು ಸ್ವಾತಂತ್ರ್ಯಸುಖವನ್ನು ಅನುಭವಿಸುತ್ತಲಿದ್ದುವು. ಸ್ವತಂತ್ರ ರಾಜ್ಯಗಳಲ್ಲಿ ಭಾವಿ ಮಹಾರಾಷ್ಟಸಾಮ್ರಾಜ್ಯದ ಅಂಕುರ ಸ್ವರೂಪವಾದ ಚಿಕ್ಕದೊಂದು ರಾಜ್ಯವಿತ್ತು. ದೇವಗಿರಿ ಎಂಬುದು ಇದರ ರಾಜಧಾನಿಯಾಗಿತ್ತು; ರಾಮದೇವ ಎಂಬವನು ರಾಜನಾಗಿದ್ದನು. ಈ ಮರಾಟಿ ರಾಜ್ಯವನ್ನು ಕುರಿತು ಜೀಯೂದ್ದೀನ್ ಬಾರ್ನಿ ಎಂಬ ತುರುಷ್ಕ ಇತಿಹಾಸಕಾರನು ಹೀಗೆಂದು ಬರೆದಿರುವನು- “ಈ ಮೊದಲು ಇಲ್ಲಿನ ಜನರು ಮುಸಲ್ಮಾನರನ್ನು ಕುರಿತು ಕೇಳಿರಲಿಲ್ಲ. ಮುಸಲ್ಮಾನ್ ಸೈನ್ಯವು ಇದಕ್ಕಿಂತ ಮೊದಲು ಮಹಾರಾಷ್ಟ್ರ ರಾಜ್ಯದಲ್ಲಿ ಪದಾರ್ಪಣ ಮಾಡಿರಲಿಲ್ಲ. ದೇವಗಿರಿ ನಗರವು ಚಿನ್ನ ಬೆಳ್ಳಿ ಮೊದಲಾದ ಅಮೂಲ್ಯ ವಸ್ತುಗಳಿಗೆ ಅವರು ಮನೆಯಾಗಿತ್ತು. ಈ ವರ್ಣನೆಯು ಆ ರಾಜ್ಯಕ್ಕೆ ಮಾತ್ರವೇ ಸಲ್ಲುತ್ತಿರಲಿಲ್ಲ. ವಿದೇಶಿಯರು ಭಾರತಭೂಮಿಯಲ್ಲಿ ಕಾಲಿಡುವ ಮೊದಲು ಹಿಂದುಸ್ಥಾನದ ಸ್ಥಿತಿಯನ್ನು ಪ್ರತಿ ಒಬ್ಬ ಇತಿಹಾಸಕಾರನು ಇಂತಹ ಮಾತುಗಳಲ್ಲಿಯೇ ವರ್ಣಿಸಿರುವನು. ಈ ಧನವೇ ವಿದೇಶಿಯರ ಮತ್ಸರದೃಷ್ಟಿಗೆ ಬಿದ್ದುದರಿ೦ದ, ದಿಲ್ಲಿಯ ಅಂದಿನ ಚಕ್ರವರ್ತಿಯಾದ ಜಲಾಲ್ ವುದ್ದೀನ್ ಖಿಲ್ಜಿಯ ಅಳಿಯನಾದ ಅಲ್ಲಾವುದ್ದೀನ್ ಖಿಲ್ಜಿಯು ಮಹಾ ಸೈನ್ಯದೊಡನೆ ಕ್ರಿ. ಶಕೆಯ ೧೨೯೪ರಲ್ಲಿ ದಖ್ಖಣಕ್ಕೆ ದಂಡೆತ್ತಿ ಹೋದನು. ಅಲ್ಲಾವುದ್ದೀನನು ಮಹಾಸೈನ್ಯದೊಡನೆ ದೇವಗಿರಿಯನ್ನು ಎರಡು ಸಲ ಮುತ್ತಿಗೆ ಹಾಕಿ ಹತಾಶನಾಗಿ, ಮೂರನೆಯ ಸಲ ಅದರ ಕೋಟೆಯ ಬಾಗಿಲಲ್ಲಿ ಕುಳಿತುಕೊಂಡಿದ್ದು, ಪ್ರಕೃತದಲ್ಲಿ ಜಾರುವಂತಿದ್ದನು.

ರಾಮದೇವ ರಾಜನಿಗೆ ಬಲಗೈ ಯಂತಿದ್ದು ಯುದ್ಧದಲ್ಲಿಯೂ ರಾಜ್ಯ ವಿಸ್ತರಣದಲ್ಲಿಯೂ ಅವನಿಗೆ ಸಹಾಯ ಮಾಡಿದ್ದ ಸರದಾರನೊಬ್ಬನು ಈ ಮುತ್ತಿಗೆಯ ಕಾಲದಲ್ಲಿ ಮಡಿದು ಹೋದನು. ಈ ಸರದಾರನು ತನ್ನ ಪುತ್ರೀರತ್ನ ವಾದ ವೀರಮತಿಯ ವಿವಾಹಕ್ಕೆ ಎಲ್ಲವನ್ನು ಸಿದ್ಧಪಡಿಸಿದ್ದನು. ವೀರಮತಿಯು ಕಾಳಿಕಾದೇವಸ್ಥಾನದ ಬಳಿಯಲ್ಲಿ ಯಾರೊಡನೆ ಮಾತನಾಡಿದಳೊ ಆ ಯುವಕನು ತನ್ನ ಪ್ರಾಣೇಶ್ವರನೆಂದು ಆರಿಸಲ್ಪಟ್ಟಿದ್ದನು. ಕೃಷ್ಣರಾಜನು ತನ್ನ ಅಳಿಯನಾಗುವುದು ವೀರಮತಿಯ ತಂದೆಗೆ ಏನು ಕಾರಣದಿಂದಲೋ ಮೊದಲು ಯೋಗ್ಯವಾಗಿ ತೋರಲಿಲ್ಲ. ಕೊನೆಗೆ ಮಗಳ