ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 80 -

ಮಹಡಿಯ ಮೆಟ್ಟಿಲು ಹತ್ತಿ ಯಾರೋ ಬರುವ ಸದ್ದು ಕೇಳಿಸಿತು. ಶೈಲಿನಿಯು ಯುವಕನೊಡ ಮೆಲ್ಲನೆ ಏನನ್ನೂ ಹೇಳಿಬಿಟ್ಟಳು, “ನವಮಿ.. ರಾತ್ರಿ..... ಶಿಬಿರದ..... ಬಳಿಯಲ್ಲಿ” ಎಂಬ ಮೊದಲಿನ ಶಬ್ದಗಳು ಮಾತ್ರ ಯುವಕನ ಕಿವಿಯಲ್ಲಿ ಇಳಿದುವು. ಯುವಕನು ಮನಸ್ಸಿನಲ್ಲಿ ಸಂಪೂರ್ಣವಾದ ಅರ್ಥವನ್ನು ಮಾಡಿ, ವೃಕ್ಷದಿಂದ ಕೆಳಕ್ಕೆ ಇಳಿಯಲು ಸಿದ್ಧನಾದನು. ಪುನಃ ಶೈಲಿಸಿಯ ಪ್ರಫುಲ್ಲಿತವಾದ ಮುಖಸಂದರ್ಶನವನ್ನು ಮಾಡಲೆಳಸಿ, “ನನ್ನನ್ನೇ” ಎಂದು ಒತ್ತಿ ಹೇಳಿದನು.

ಶೈಲಿನಿಯು ಮನಸ್ಸಿನಲ್ಲಿಯೇ “ವರಿಸುವೆನು” ಎಂದು ಅಂದುಕೊಂಡಳು. ತತ್‌ಕ್ಷಣದಲ್ಲಿ ಉಪ್ಪರಿಗೆಯ ಬಾಗಿಲನ್ನು ತೆರೆದು ಯಾರೋ ಒಬ್ಬನು ಒಳಕ್ಕೆ ಬಂದನು. ಬಂದವನು ಶೈಲಿನಿಯ ತಂದೆ; ರಾಠೋರ್ ಸಂಸ್ಥಾನದ ರಾಜನಾದ ರಾಜಸಿಂಹನು.

ಈ ಕಥಾ ಕಾಲದಲ್ಲಿ ಅವರಂಗಜೇಬನು ಢಿಲ್ಲಿಯ ಸಮ್ರಾಟನಾಗಿದ್ದನು. "ಅವರಂಗಜೇಬನ ಕಠೋರ ಶಾಸನದಿಂದ ಭಾರತವರ್ಷದಲ್ಲಿ ಸರ್ವತ್ರ ಭೀತಿಯೂ ಆತಂಕವೂ ಪಸರಿಸಿದ್ದುವು.” ಅವನ ಕ್ರೂರವಾದ ಅಧಿಕಾರ ಜಂಝೂನಿಲನಿಂದ ಪ್ರಚಲಿತವಾದ ಭಾರತಸಾಗರದ ಜಲದಲ್ಲಿ ರಾಜಪುತ್ರರ ಸ್ವಾತಂತ್ರ್ಯವು ಮುಳುಗಿ ಹೋಗುತ್ತಲಿತ್ತು. ಸ್ವಾಧೀನತೆಯ ಪ್ರಧಾನಭಕ್ತನಾದ, ಅಂಬರಸಂಸ್ಥಾನದ ಅಧಿಪತಿಯಾದ ಜಯಸಿಂಹನು ಇಲ್ಲಿಯ ಸಿಂಹಾಸನದ ಬಳಿಯಲ್ಲಿ ಬದ್ಧಹಸ್ತನಾಗಿ ನಿಲ್ಲಲು ಒಡಂಬಟ್ಟನು! ಮಾರವಾಡದ ಯಶವಂತಸಿಂಹನಿಗೂ ರಾಠೋರದ ರಾಜಸಿಂಹನಿಗೂ ಭೇದವನ್ನು ತಂದಿಕ್ಕಿ, ಇಬ್ಬರನ್ನೂ ಅವರಂಗಜೇಬನು ತನ್ನ ಸಿಂಹಾಸನಕ್ಕೆ ಅಲಂಕಾರಕಲಶಗಳನ್ನಾಗಿ ಮಾಡಿದನು. ಉತ್ತರ ಹಿಂದುಸ್ಥಾನದಲ್ಲಿ ಸಿಕ್ ಜನರು ತಮ್ಮನ್ನು ಬಂಧಿಸಿದ ಶೃಂಖಲಗಳನ್ನು ಕಳಚುವುದಕ್ಕೆ ಹುರಿದುಂಬಿ ಒಟ್ಟುಗೂಡುತ್ತಲಿದ್ದರು. ದಖ್ಖಣದಲ್ಲಿ ಸ್ವತಂತ್ರವಾಗಿದ್ದ ಗೊಲ್ಕೊಂಡ ಮತ್ತು ಬಿಜಾಪುರ ಸಂಸ್ಥಾನಗಳು ಕ್ಷೀಣವಾಗಿ ಅಸ್ತಮಿಸುವಂತಿದ್ದುವು. ಲೋಕೈಕವೀರನಾದ ಶಿವಾಜಿಯು, ಮಹಾರಾಷ್ಟ್ರ ಸಾಮ್ರಾಜ್ಯವನ್ನು ಕಟ್ಟುವುದಕ್ಕೆ ಹಿಂದುಗಳನ್ನು ಏಕತ್ರವಾಗಿ ಮಾಡಲು ಪ್ರಯತ್ನಿಸುತ್ತಿದ್ದನು. ಅವನ ಪ್ರಯತ್ನಗಳಿಂದ ಮೊಗಲ ಸಾಮ್ರಾಜ್ಯದ ಕೀಲು ಸಡಿಲಾಗುತ್ತಾ ಬಂದಿತು. ಭೂಕಂಪನದಿಂದ