ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 32 -

ಹಠಾತ್ತಾಗಿ ಬೀಳದಂತೆ ಅವನ ಮಗನಾದ ರಾಮಸಿಂಹನನ್ನು ಬಂಧಿಯಾಗಿ ಇಟ್ಟಿದ್ದನು. ಇಂತಹನನ್ನು ತನ್ನ ಪ್ರತಿದ್ವಂದ್ವಿಯಾದ ಶಿವಾಜಿಯೊಡನೆ ಒಳಸಂಚು ನಡೆಯಿಸುವುದು ಸಂಭವನೀಯವೆಂದು ತಿಳಿದು, ಸಮ್ರಾಟನು ಅವನ ಕೈಗೆ ವಿಶೇಷ ಅಧಿಕಾರವನ್ನು ಹಚ್ಚುತ್ತಿರಲಿಲ್ಲ; ಮಾತ್ರವಲ್ಲ, ರಾಠೋರ್ ಸಂಸ್ಥಾನಾಧಿಪತಿಯಾದ ರಾಜಸಿಂಹನು ಇಂತಹ ಕಾರ್ಯಗಳಲ್ಲಿ ತನಗೆ ಅನುಕೂಲವೆಂದು ಸಮ್ರಾಟನು ತಿಳಿಯಲು ಅನೇಕ ಕಾರಣಗಳಿದ್ದುವು. ಹಾಗೂ ರಾಜಸಿಂಹನು ತನಗೆ ಅವರಂಗಜೀಬನೇ ಆಶ್ರಯದಾತಾರನೆಂದು ನಂಬಿ, ಅವನ ಮೇಲೆ ಶೃದ್ಧಾಭಕ್ತಿಗಳನ್ನಿಟ್ಟಿದ್ದನು. ಹೆಚ್ಚೇಕೆ? ರಾಜಸಿಂಹನು ತನ್ನ ಮಗಳಾದ ಶೈಲಿನಿಯನ್ನು ಕಾರಣಾಂತರಗಳಿಂದ ಸಮ್ರಾಟನ ಶ್ರೀಮಂತ ಪುತ್ರನಾದ ಮು- ಆಜಮ್ ನಿಗೆ (ಭಾವೀ ಶಹ ಆಲಮ್) ಕೊಡಲು ಉದ್ಯುಕ್ತನಾಗಿದ್ದನು. ಶಿವಾಜಿಯು, ತನ್ನನ್ನು ಇದಿರುಗೊಳ್ಳುವುದಕ್ಕೆ ಸಮ್ರಾಟನು ತಾನೇ ಬಾರದೆ ತೋರಿಸಿದ ಅನಾದರವನ್ನು ನೋಡದೆ ಹೋಗಲಿಲ್ಲ. ಅನಾದರಭಾವಕ್ಕೆ ಪ್ರತಿಕಾರಮಾಡಲು ಅದು ಸಮಯವಲ್ಲವೆಂಬುದನ್ನೂ ಆತನು ಮರೆತಿರಲಿಲ್ಲ.

ಶಿವಾಜಿಯು ಅವರಂಗಜೀಬನ ಸಂದರ್ಶನಕ್ಕೆ ಹೋಗಲು ನಿಶ್ಚಯಿಸಿದ ಮೊದಲಿನ ದಿವಸದ ರಾತ್ರಿಯಲ್ಲಿ ಪೂರ್ವೋಕ್ತ ಸಲ್ಲಾಪವು ನಡೆಯಿತು. ರಾಜಸಿಂಹನು ಮಹಡಿಯ ಮೆಟ್ಟನ್ನು ಹತ್ತಿ ಶೈಲಿನಿಯ ಕೊಟ್ಟಡಿಯನ್ನು ಪ್ರವೇಶಿಸಿದನು. ರಾಜಸಿಂಹನು ಪಕ್ಕದಲ್ಲಿದ್ದ ಆಸನವನ್ನು ತೆಗೆದುಕೊಂಡನು. ಶೈಲಿನಿಯು ತಂದೆಯ ಸಮ್ಮುಖದಲ್ಲಿ ವಿನೀತಭಾವದಿಂದ ನಿಂತಳು. ಸ್ವಲ್ಪ ಹೊತ್ತು ಇಬ್ಬರೂ ಮಾತೆತ್ತಲಿಲ್ಲ. ಸಿಂಹನು ಎತ್ತಿದ ಹುಬ್ಬುಗಳಿಂದ "ಮಗು! ಶೈಲಿ! ರಾಜಕಾರ್ಯದಿಂದ ನಿನ್ನೊಡನೆ ಹಲವು ದಿನಗಳಿಂದ ಮಾತನಾಡಲು ಬಿಡುವಾಗಲಿಲ್ಲ. ಪಿತೃ ಭಕ್ತಿಯು ನಿನ್ನ ಹೃದಯದಲ್ಲಿ ಇರುವುದಾದರೆ, ಎರಡು ಬುದ್ಧಿವಾದಗಳನ್ನು ಹೇಳಬೇಕೆಂದಿರುವೆನು” ಎಂದನು.

ಶೈಲಿನಿ:- “ಅಪ್ಪಾ! ಮಗಳು ತಂದೆಯ ಮಾತನ್ನು ಸಲ್ಲಿಸಬೇಕಾದಲ್ಲಿ ನಾನು ನಿನ್ನ ಅನುಜ್ಞೆಯನ್ನು ಮನ್ನಿಸದೆ ಇರಲಾರೆನು.”

ರಾಜಸಿಂಹನು ಮೆಲ್ಲನೆ ನಗುತ್ತ, “ಪುಟ್ಟಮ್ಮಣ್ಣಿ! ನಾನು