ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 33 -

ಮುದುಕನಾದೆನು, ನನಗೆ ೬೫ ವರ್ಷ ತುಂಬಿತು. ಇನ್ನು ಹೆಚ್ಚು ಕಾಲ ಬದುಕಲಾರೆನು. ಪ್ರಬುದ್ಧಳಾದ ನೀನು ಸುಖವಂತಳಾಗಿದ್ದರೆ ನನ್ನ ಮುಪ್ಪನ್ನು ನಿಶ್ಚಿಂತೆಯಿಂದ ಕಳೆಯುವೆನು.”

ಶೈಲಿನಿ:- ಮುಪ್ಪಿನಲ್ಲಿ ನಿನಗೆ ಯಾವುದೊಂದೂ ಚಿಂತೆ ಬಾರದೆ ಇರಲಿ ಎಂದು ನಾನು ದೇವರೊಡನೆ ಪ್ರಾರ್ಥಿಸುವೆನು. ನಿನ್ನ ವೃದ್ಧಾಪ್ಯವು ಸಂತೋಷಮಯವಾಗುವಂತೆ ಆತನು ಕರುಣಿಸಲಿ!”

ರಾಜಸಿಂಹ:- ನೀನು ಮೊಗಲ್ ಸಾಮ್ರಾಜ್ಯದ ರಾಣಿಯಾಗುವುದರಿಂದ ಉಂಟಾಗುವಷ್ಟು ಸಂತೋಷವನ್ನು ನನಗೆ ವೃದ್ಧಾಪ್ಯದಲ್ಲಿ ಮತ್ತಾವುದೂ ಕೊಡಲಾರದು.”

ಶೈಲಿನಿ:- ಅಪ್ಪಾ! ನನಗೆ ರಾಣಿಯಾಗುವಷ್ಟು ಬೇಸರವು ಬೇರೊಂದಿಲ್ಲವೆಂದು ನಾನು ಮೊದಲೇ ನಿನಗೆ ತಿಳಿಸಿರುವೆನಷ್ಟೆ.”

ರಾಜಸಿಂಹ:- ನೀನು ಅಂದು ವಿಚಾರಮಾಡಿರಲಿಲ್ಲ, ನೀನು ವಿಚಾರ ಮಾಡಬೇಕೆಂದು ಸಾಕಷ್ಟು ಅವಕಾಶಕೊಟ್ಟೆನು.”

ಶೈಲಿನಿ:- “ವಿಚಾರ ಮಾಡಿದಷ್ಟಕ್ಕೆ ರಾಜಪತ್ನಿ ಯಾಗುವುದಕ್ಕಿಂತಲೂ ಬಡವನ ತೊತ್ತಾಗುವುದು ಲೇಸೆಂದು ದೃಢವಾಗುವುದು.”

ರಾಜಸಂಹನು ಸ್ವಲ್ಪ ಬೆಚ್ಚನಾಗಿ “ಶೈಲಿನಿ! ಸಾಮ್ರಾಜ್ಯದ ಚಕ್ರವರ್ತಿನಿ ಎನ್ನಿಸಿಕೊಳ್ಳುವುದಕ್ಕಿಂತಲೂ ಅಧಿಕವಾದ ಶ್ರೇಯಸ್ಸು ನಿನಗೆ ಮತ್ತೊಂದಿರುವದೇ? ಚಕ್ರವರ್ತಿಯ ಮಾವನೆನ್ನಿಸಿಕೊಳ್ಳುವುದಕ್ಕಿಂತಲೂ, ವಿಶೇಷವಾದ ಬಹುಮಾನವು ನನಗೆ ಬೇರೊಂದುಂಟೆ? ರಾಜಕುಲದವರೆಂದು ಹೇಳಿಸಿಕೊಳ್ಳುವುದಕ್ಕಿಂತಲೂ ಅಧಿಕ ತರವಾದ ಕೀರ್ತಿಯೂ ಗೌರವವೂ ನಮ್ಮ ವಂಶಕ್ಕೆ ಯಾವುವು? ನೀನು ಆಡಿದ್ದೇ ನ್ಯಾಯ; ನೀನು ಮಾಡಿದ್ದೇ ಧರ್ಮ. ಹೀಗಿರಲು ಸಾಮಾನ್ಯ ಪುರುಷರಿಗೆ ನಿನ್ನ ಕೈಕೊಟ್ಟು ನಮ್ಮ ಕುಲಕ್ಕೆ ಕಳಂಕವನ್ನು ತಂದಿಕ್ಕ ಬೇಡ, ಕಂಡೆಯಾ?” ಎಂದನು.

ಶೈಲಿನಿಯು ಉದ್ರೇಕದಿಂದ “ಅಪ್ಪಾ! ನೀನೆನ್ನುವ ದುರ್ಗತಿಗೆ ಈ ದೇಹವು ಇಳಿಯುವ ಮೊದಲೇ ಅದರಿಂದ ಪ್ರಾಣವು ಹಾರಿಹೋಗಲಿ! ಅಕ್ಬರನಿಗೆ ಹೆಣ್ಣು ಕೊಟ್ಟ ರಾಜಪುತ್ರರಿಗೆ ಯಾವ ಗೌರವವು ಹೆಚ್ಚಿತು? ರಾಜಾಮಾನಸಿಂಹನ ಮಗಳು ಕೇಳಿಮನ ಪತ್ನಿಯಾಗಿ ಯಾವ ಪ್ರಖ್ಯಾತಿಯನ್ನು