ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 35 -

ನಿಶ್ಚಯಮಾಡಿಕೊಂಡು ಹೋದನು. ಕೋಪಾನಲದಿಂದ ದಗ್ಧವಾದ ಅವನ ಮನಸ್ಸು ಶೈಲಿನಿಯ “ಇಚ್ಛಿತ ವರ"ನನ್ನು ಸರಿಯಾಗಿ ಕಂಡುಹಿಡಿಯಲಾರದೆ ಹೋಯಿತು.

ಕಿ. ಶಕೆಯ ೧೬೬೬ನೆಯ ವರ್ಷದ ಡಿಲ್ಲಿಯು ಪ್ರಾಚೀನ ಹಿಂದೂ ರಾಜರ ಡಿಲ್ಲಿಯಾಗಿರಲಿಲ್ಲ. ಅದರ ಹೆಸರು ಬೇರೆಯಾದಂತೆ, ಅದರ ಪೂರ್ವ ಸ್ಥಿತಿಯು ಪರಿವರ್ತಿತವಾಗಿತ್ತು. ಅದು ಶಹಜಹಾನ್ಬಾದ್ ಎಂದು ಪ್ರಖ್ಯಾತಿಗೊಂಡಿತ್ತು. ಮೊಗಲ್ ಚಕ್ರೇಶ್ವರನಾದ ಶಹಾಜಹಾನನು ಪ್ರಾಚೀನ ಡಿಲ್ಲಿಯನ್ನು ಕೆಡವಿ, ತನ್ನ ಹೆಸರಿನ ಮಹಾನಗರವನ್ನು ಯಮುನಾ ನದಿಯ ತೀರದಲ್ಲಿ ಕಟ್ಟಿಸಿದನು. ಕಟ್ಟುವುದಕ್ಕೆ ೯ ವರ್ಷ ಹಿಡಿಯಿತು; ೬೦ ಲಕ್ಷ ರೂಪಾಯಿ ತಗಲಿತು. ನಗರದ ಸುತ್ತಲು ಸಾ೦ದ್ರವಾದ ತರುವನಗಳು; ಅಲ್ಲಲ್ಲಿ ಶಾಲಿ ಸಮೃದ್ಧವಾದ ಹೊಲಗದ್ದೆಗಳು. ಕಲ್ಲಿನ ಪ್ರಾಕಾರವೊಂದು ನಗರವನ್ನು ವೇಷ್ಟಿಸಿತ್ತು- ೭ ಮೈಲು ಸುತ್ತಳತೆಯ ಭದ್ರವಾದ ಮಂಡಲಾಕಾರವಾದ ಪ್ರಕಾರ. ಪಾಕಾರದ ಹೊರಗಡೆಯಲ್ಲಿ ಇಕ್ಕಟ್ಟಾದ ಬೀದಿಗಳು ನೆಲವನ್ನು ಸೀಳಿ ಹೋಗಿದ್ದವು. ಇವುಗಳ ಇಕ್ಕಡೆಗಳಲ್ಲಿ ಮನಸಬ್ಧಾರರ ಮಂದಿರಗಳು, ಉಮ್ರಾಗಳ ಮಹಡಿಗಳು; ರಾಜಾನುಚರರ ಗೃಹಗಳು. ಸ್ವಲ್ಪ ದೂರದಲ್ಲಿ ರಾಜಭಟರ ಗೂಡಾರಗಳು; ಮುಂದೆ ಮುಂದೆ ವರ್ತಕರ ಅಂಗಡಿಗಳು, ವಾಣಿಜ್ಯ ಶಾಲೆಗಳು; ಅಲ್ಲಲ್ಲಿ ಬಡಬಗ್ಗರ ಹುಲ್ಲು ಗುಡಿಸಲುಗಳು. ಇವುಗಳನ್ನು ಬಿಟ್ಟು ಮಹಾರಾಷ್ಟ್ರ ಶಿಬಿರವು ಪ್ರತ್ಯೇಕವಾದ ಒಂದು ಸ್ಥಳದಲ್ಲಿ ಇಳಿದಿತ್ತು.

ಹಿಂದೆ ಹೇಳಿದ ಘಟನಾವಳಿಯು ನಡೆದ ಮರುದಿನ ಶಿವಾಜಿಯು ಅವರಂಗಜೀಬನ ಸಂದರ್ಶನಕ್ಕೆ ಹೋಗಲು ಸಿದ್ಧನಾಗಿದ್ದನು. ರಾಜಸಿಂಹನು ಬಾದಶಹನ ಆಜ್ಞಾನುಸಾರವಾಗಿ ಶಿವಾಜಿಯನ್ನೂ ಅವನ ಪರಿ ಜನರನ್ನೂ ಕರೆದುಕೊಂಡು ಹೋಗುವುದಕ್ಕೆ ಮಹಾಸಂಭ್ರಮದೊಡನೆ ಸನ್ನದ್ಧನಾಗಿ ಬಂದನು. ಬಾದಶಹನ ಶ್ರೀಮಂತಪುತ್ರನಾದ ಮುಅಜಮನೂ ರಾಜಸಿಂಹನೊಡನೆ ಬಂದಿದ್ದನು. ರಾಜಸಿಂಹನು ಶಿಬಿರವನ್ನು ಪ್ರವೇಶಿಸಿದನು. ಶಿವಾಜಿಯು ಒಳಕ್ಕೆ ಹೋಗಿ ತನ್ನ 'ಗರ್ಭಧಾರಿಣಿಯಾದ ಜೀಜಾಬಾಯಿಯನ್ನೂ ದೀಕ್ಷಾ ಗುರುವಾದ ರಾಮದಾಸನನ್ನೂ' ಸ್ಮರಿಸಿ ಹೊರಕ್ಕೆ