ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 37 -

ವೂಮ್ರಾಗಳು, ವೇಶ್ಯಾಸ್ತ್ರೀಯರು, ವೈದ್ಯರು, ವಂದಿಪುತ್ರರು, ವಸ್ತ್ರಕಾರರು ಮೊದಲಾದ ಸಕಲ ವರ್ಣಾಶ್ರಮದವರು ಚೌಕದಿಂದ ಕೆಳಕ್ಕೆ ಇಳಿದು ಜನ ಸಂದೋಹದೊಡನೆ ತೆರಳಿದರು. ಶಿವಾಜಿಯು ಅವರಂಗಜೀಬನ ರಾಜಮಂದಿರದ ಬಳಿಯಲ್ಲಿ ಬಂದು ಮುಟ್ಟಿದನು. ಜನಗಳ ನೂಕಾಟವು ಅಧಿಕವಾಯಿತು. ಇದರಿ೦ದಲೋ ಅಥವಾ ಇನ್ಯಾವ ಕಾರಣದಿಂದಲೂ ಶಿವಾಜಿಯ ಗಜವು ಸೊಕ್ಕೇರಿ ಜನಗಳನ್ನೆಲ್ಲಾ ಹಾನಿಮಾಡುವಂತಿತ್ತು. ಶಿವಾಜಿಯು ಗಜಯೋಧನಿಗೆ ತಕ್ಕುದಾದ ಚಾತುರ್ಯದಿಂದ ಅದನ್ನು ಸಮಾಧಾನಗೊಳಿಸಿ ಕೆಳಕ್ಕೆ ಇಳಿದನು. ಆದರೂ ಗೌರವಾರ್ಥದ ತೋಪುಗಳು ಹಾರಲಿಲ್ಲ. ಶಿವಾಜಿಯ ಮುಖವನ್ನೆತ್ತಿ ಮೇಲೆ ನೋಡಿದನು. ರಾಜದ್ವಾರದ ಬಳಿಯಲ್ಲಿ ಶಿಲಾಗಜಗಳ ಮೇಲೆ ಅಕ್ಬರನು ಇರಿಸಿದ ಪುತ್ತ ಮತ್ತು ಜಯಮಲ್ಲ ಎಂಬ ರಾಜಪುತ್ರವೀರರ ಪ್ರತಿಮೆಗಳನ್ನು ದೃಷ್ಟಿಸಿದನು. ಮನಸ್ಸಿನ ಖಿನ್ನತೆಯು ಇಮ್ಮಡಿಸಿದಂತಾಯಿತು. ಪ್ರತಿಮೆಗಳ ಮೇಲಿಂದ ದೃಷ್ಟಿಯನ್ನು ಹಿಂತೆಗೆಯಲಾರದೆ ಶಿವಾಜಿಯು ತಾನೂ ಪ್ರತಿಮೆಯಂತೆ ನಿಂತುದನ್ನು ಕಂಡು, ರಾಜಸಿಂಹನು ಮುಆಜಮ್ ನೊಡನೆ ಶಿವಾಜಿಯ ಬಳಿಗೆ ಬಂದನು.

ರಾಜಸಿಂಹ:- "ಮುಂದೆ ದಯಮಾಡಬೇಕು."

ಶಿವಾಜಿಯು ಉಚ್ಚಸ್ವರದಿಂದ “ಬಾದಶಹರು ಇನ್ನೂ ಬರಲಿಲ್ಲವೇಕೆ?” ಎಂದು ಕೇಳಿದನು.

ರಾಜಸಿಂಹನು “ಬಾದಶಹರ ಪಕ್ಷವಾಗಿ ಯುವರಾಜರು ಬಂದಿರುವರು” ಎಂದು ಹೇಳಿ ಮುಅಜಮನನ್ನು ತೋರಿಸಿ, ಕೈಕೊಟ್ಟು ಶಿವಾಜಿಯನ್ನು ಸನ್ಮಾನಪೂರ್ವಕವಾಗಿ ಚಾಂದಿ ರಸ್ತೆಗೆ (ಬೆಳ್ಳಿಯ ಬೀದಿಗೆ) ಕರೆದು ತಂದನು.

ರಸ್ತೆಯ ಉಭಯ ಪಾರ್ಶ್ವಗಳಲ್ಲಿ ಜರತಾರಿನ ವಸ್ತ್ರ ಶಾಲೆಗಳು, ರೇಶ್ಮೆಬಟ್ಟೆಯ ಅಂಗಡಿಗಳು, ಆಯುಧಶಾಲೆಗಳು, ಮದ್ದುಗುಂಡನ್ನು ತಯಾರಿಸುವ ಆಲಯಗಳು ತೋರಿಬಂದುವು. ಶಿವಾಜಿಯು ಸಾದಚಾರಿಯಾಗಿ ಮುಂದು ಗಡೆಯಲ್ಲಿದ್ದ ರಾಜಾಂಗಣವನ್ನು ಸೇರಿದನು.