ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 39 -

ಶಿವಾಜಿಯು ಆಸ್ಥಾನಮಂದಿರದಲ್ಲಿ ಪದಾರ್ಪಣ ಮಾಡಿದನು. ಒಮ್ಮೆ ತಟಸ್ಥನಾಗಿ ನಿಂತು “ಅಮ್ ಖಾಸ್ ಖಾನೆಯ” ಸೌಭಾಗ್ಯ ಸೌರಂಭವನ್ನು ನೋಡಿದನು; ನೋಡಿ ಸಾಮಾನ್ಯರಂತೆ ಶಿವಾಜಿಯು ಬೆರಗಾಗಲಿಲ್ಲ. ಮೊಗಲ್ ಮಹತ್ವವನ್ನು ಹಿಂದೂ ಅಲ್ಪತೆಯ ಮೇಲೆ ಒತ್ತಿಬಿಡಬೇಕೆಂದು ಅವರಂಗಜೇಬನು ಮನಸ್ವಿಯಾಗಿ ಇದನ್ನೆಲ್ಲಾ ಮಾಡಿರುವನು ಎಂದು ಶಿವಾಜಿಯು ಕೂಡಲೇ ತಿಳಿದುಬಿಟ್ಟನು. ಶಿವಾಜಿಯ ದೃಷ್ಟಿಗಳು ಸುವರ್ಣ ವೇದಿಕೆಯ ಮೇಲಿದ್ದ ರಜಪೂತರ ಕಡೆಗೆ ಚಲಿಸಿದುವು. ಅಷ್ಟರಲ್ಲಿ ರಾಜಸಿಂಹನು ಹತ್ತಿರಕ್ಕೆ ಬಂದು “ರಾಜರೇ! ಇಲ್ಲಿಂದ ಮುಂದರಿಸಬೇಕಾದರೆ ಬಾದಶಹರಿಗೆ ನೆಲವನ್ನು ಮುಟ್ಟಿ ಮೂರು ಸಲ ಸಲಾಂ ಮಾಡುವುದು ಪದ್ಧತಿಯಾಗಿದೆ. ಎಂದನು. ಶಿವಾಜಿಯು ತಿರುಗಿ ನೋಡಿದನು. ಬಳಿಕ ಉಚ್ಛಸ್ವರದಿಂದ “ಇಷ್ಟು ನಮ್ಮಿಂದಾಗಲಾರದು; ಈ ಜನ್ಮದಲ್ಲಿ ಯಾವ ಮುಸಲ್ಮಾನನಿಗೂ ಹೀಗೆ ನಮಸ್ಕಾರ ಮಾಡಿಲ್ಲ. ಮುಂದೆಯೂ ಮಾಡಲಾರೆವು” ಎಂದನು.

ರಾಜಸಿಂಹನು ವ್ಯಗ್ರನಾಗಿ ಕಳವಳದಿಂದ, “ಇದೊಂದು ಕಠಿನ ಸಮಸ್ಯೆಯಾಗಿದೆಯಲ್ಲ! ಸಮ್ರಾಜರು ಕೋಪಿಸಿಕೊಂಡರೆ, ಕಾರ್ಯವು ಕೆಡುವುದು' ಎಂದನು.

ಶಿವಾಜಿಯು ತನ್ನ ಎಡಕ್ಕೆ ಇದ್ದ ರಾಜಪುತ್ರರನ್ನು ನೋಡಿ “ಇವರೆಲ್ಲರು ಅದೇ ಪ್ರಕಾರವಾಗಿ ಮಾಡಿ, ತಮ್ಮ ಆಸನವನ್ನು ಏರಿದರೇ?” ಎಂದು ಕೇಳಿದನು.

ರಾಜಸಿಂಹನು ಬಾದಶಹನ ಕಡೆಗೆ ನೋಡುತ್ತ, ಶಿವಾಜಿಯೊಡನೆ, “ಹಾಗೆ ಮಾಡದೆ ಮುಂದರಿಸಕೂಡದು” ಎಂದನು. ಅವರಂಗಜೀಬನು ಪಕ್ಕದಲ್ಲಿದ್ದ ರಾಜಪುತ್ರರೊಡನೆ ಏನನ್ನೂ ಮಾತಾಡುತ್ತಿದ್ದನು.

ಶಿವಾಜಿಯು ಸ್ವಲ್ಪ ಹೊತ್ತು ಮನಸ್ಸಿನಲ್ಲಿಯೇ ಚಿ೦ತಿಸಿದನು. ರಾಜಸಿಂಹನೊಡನೆ “ಈ ಮಾತು ಮನ್ನಿಸಬೇಕಾಗುವುದು. ಇಲ್ಲವಾದರೆ ಕೆಲಸವು ಕೆಟ್ಟು ಹೋಗುವುದೆಂಬುದು ನಿಜ” ಎಂದನು.

ಶಿವಾಜಿಯು ಮುಂದೆ ಬಂದು ಮರು ಸಲ ಸಲಾಂ ಮಾಡಿದನು; ಆದರೆ ನೆಲವನ್ನು ಮುಟ್ಟಿ ಕೈಮುಗಿಯಲಿಲ್ಲ. ಅವರಂಗಜೀಬನು ಅದನ್ನು ಓರೆಗಣ್ಣಿನಿಂದ ನೋಡದೆ ಹೋಗಲಿಲ್ಲ. ರಾಜಸಿಂಹನು ತುಟಿಯೊಳಗೆ