ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 40 -

ನಗುವಂತಿದ್ದನು. ಶಿವಾಜಿಗೆ ಆಸನವನ್ನು ಮೊದಲೆ ಒದಗಿಸಿದ್ದರೂ ಭಾದಶಹನು ರಾಜಸಿಂಹನೊಡನೆ “ರಾಜರು ಕುಳಿತುಕೊಳ್ಳುವುದಕ್ಕೆ ಎಲ್ಲಿ ಆಸನವನ್ನು ಮಾಡಿರುವೆ?” ಎಂದು ಕೇಳಿದನು.

ರಾಜಸಿಂಹನು ಶಿವಾಜಿಗೆ ಕೈಕೊಟ್ಟು ಬಾದಶಹನ ಬಲಗಡೆಯಲ್ಲಿದ್ದ ಸುವರ್ಣ ವೇದಿಕೆಯ ಮೂಲೆಯಲ್ಲಿ ಕುಳ್ಳಿರಿಸಿದನು. ಶಿವಾಜಿಯು ಫಕ್ಕನೆ ಅಸನದಿಂದ ಕೆಳಕ್ಕೆ ದುಮುಕಿ, “ನಮ್ಮ ಬಲಗಡೆಯಲ್ಲಿ ಇರುವವರು ಯಾರು?” ಎಂದು ಗಂಭೀರಧ್ವನಿಯಿಂದ ಕೇಳಿದನು.

ಬಲಗಡೆಯಯಿದ್ದ ರಜಪೂತ ಸರದಾರರೂ ಉಮ್ರಾಗಳೂ ಸಂದಿಗ್ಧ ಮಾನಸರಾಗಿ ನೋಡಿದರು. ಆದರೂ ಬಾದಶಹನು ಶಾಂತಚಿತ್ತನಾಗಿ ನೋಡುತ್ತಿದ್ದನು.

ಶಿವಾಜಿಯ ಪ್ರಶ್ನೆಗೆ ಉತ್ತರವಾಗಿ ರಾಜಸಿಂಹನು ತಮ್ಮ ಬಲಗಡೆಯಲ್ಲಿದ್ದವರು “ಮಾರವಾಡ ಸಂಸ್ಥಾನಾಧಿಪರಾದ ಯಶವಂತ ಸಿ೦ಹರು.” ಎಂದು ಹುಸಿನಗುವಿನಿಂದ ಹೇಳಿದನು.

ಇದನ್ನು ಕೇಳಿದನೊ ಇಲ್ಲವೊ ಶಿವಾಜಿಯು ಕಿಡಿಕಿಡಿಯಾಗಿ ಉರಿದನು. ಅವಮಾನಶೂಲವನ್ನು ಮೈಯ್ಯೊಳಗೆ ತಿವಿದು ತಿರುಪಿದಂತೆ ಅವನು ಉದ್ರೇಕಿತನಾದನು. ಆದರೂ ಅವಮಾನ್ಯಜನ್ಯವಾದ ಕೋಪವನ್ನಾಗಲಿ ವ್ಯಧೆಯನ್ನಾಗಲಿ ಅವನು ತೊರಿಸಲಿಲ್ಲ. ಶಿವಾಜಿಯು ಗಂಭೀರ ಸ್ವರದಿಂದ ಯಶವಂತಸಿಂಹನ ಸಹಪಂಙ್ತಿಯಲ್ಲಿ ಕುಳಿತುಕೊಳ್ಳಲು ನಮ್ಮ ಯೋಗ್ಯತೆಯು ಎಂತಹದು? ಸ್ವದೇಶವತ್ಸಲರಾದ, ಸ್ವಾತಂತ್ರ್ಯಪರಾಯಣರಾದ, ಸ್ವಧರ್ಮ ರಕ್ಷಕರಾದವರು ಯಾರಾದರೂ ಈ ಆಸ್ಥಾನದಲ್ಲಿ ಇದ್ದರೆ, ಆ ಬಡಪಾಪಿಗಳೊಡನೆ ಕೈಕಟ್ಟಿ ನಿಲ್ಲಲು ಯೋಗ್ಯರಲ್ಲದೆ, ಮೊಗಲ್ ಸಂಸ್ಥಾನದ ಜಹಗೀರುದಾರರೆಂಬ ದೊಡ್ಡ ದೊಡ್ಡ ಬಿರುದನ್ನು ತಾಳಿರುವ ಮಹಾ ರಜಪೂತರ ಬಳಿ ಸೇರುವುದಕ್ಕೆ ನಮ್ಮಲ್ಲಿ ಯೋಗ್ಯತೆ ಉಂಟೇ? ಯಶವಂತಸಿಂಹ ಮೊದಲಾದವರೊಳಗೆ ನಾವು ಒಬ್ಬರೆಂದು ತಿಳಿದಿರಬಹುದು. ಬಾದಶಹರು ಎಲ್ಲರಿಗೂ ಮಾನಮರ್ಯಾದೆಗಳನ್ನು ಕೊಟ್ಟರು. ಪ್ರತಿಯಾಗಿ ಹಿಂದುಗಳು ತಮ್ಮ ರಾಜಮರ್ಯಾದೆಗಳನ್ನು ಬಾದಶಹರಿಗೆ ಬಿಟ್ಟುಕೊಟ್ಟರು. ಈ ಗೌರವವು ಚಿತ್ತೂರಿನ ರಾಣಾವಿಗೂ ಮಹಾರಾಷ್ಟ್ರದ ಶಿವಾಜಿಗೂ ಬರಲಿಲ್ಲ. ಅಂತಹ