ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 41 -

ಗೌರವದ ಅಪೇಕ್ಷೆ ಇದ್ದಲ್ಲಿ ನಾವು ಈ ಯಶವಂತಸಿಂಹ, ರಾಮಸಿಂಹ, ಮೊದಲಾದವರೊಡನೆ ಕುಳಿತುಕೊಳ್ಳುವೆವು ಅಲ್ಲದೆ, ಪ್ರಕೃತದಲ್ಲಿ ಅಂತಹ ಬಹುಮಾನವನ್ನು ಆಶಿಸುವುದಿಲ್ಲ" ಎಂದನು.

ಬಾದಶಹನ ಪಕ್ಕದಲ್ಲಿದ್ದ ರಜಪೂತರೆಲ್ಲರೂ ಅಧೋವದನರಾದರು. ರಾಜಸಿಂಹನು ಮಾತನಾಡಲಾರೆವೆ ಮೋರೆ ತಗ್ಗಿಸಿ ನಿಂತನು. ಬಾದಶಹನು ಶಿವಾಜಿ ಆಡಿದ ಭಾಷೆಯ ಜ್ಞಾನಶೂನ್ಯನಾದರೂ, ಸಂದರ್ಭಾನುಸಾರದಿ೦ದ ಅದರ ಅರ್ಥವನ್ನು ತಿಳಿದು ರಾಜಸಿಂಹನೊಡನ “ಇದೇನು ಸಂಗತಿ” ಎಂದು ಕೇಳಿದನು.

ರಾಜಸಿಂಹನ ನತಶಿರಸ್ಕನಾಗಿ “ವನಸಿ೦ಹವು ಬೋನಿನಲ್ಲಿ ಸಿಕ್ಕಿ ಕೊಂಡಿದೆ” ಎಂದನು.

ಅವರಂಗಜೀಬನು ನಗುತ್ತ, “ಅದಕ್ಕೋಸ್ಕರ ಬೊಬ್ಬಿಡುತ್ತಿದೆಯೇ? ವನ್ಯಸ್ಥಿತಿಯಲ್ಲಿದ್ದಾಗ ಮೃಗಗಳನ್ನು ನೋಡುವುದು ಸರಿಯಲ್ಲ” ಎಂದನು.

ರಾಜಸಿಂಹನು “ಮೃಗವನ್ನು ಈಗ ನಾನು ಏನು ಮಾಡಲಿ?” ಎಂದು ಮೆಲ್ಲನೆ ಕೇಳಿದನು.

ಅವರಂಗಜೀಬ:- “ಅದನ್ನು ಕೊಂಡುಹೋಗಿ ಶಾಂತವಾದ ಬಳಿಕ ಮರಳಿ ತರಬಹುದಷ್ಟೆ.”

ಈ ಸಂದರ್ಭದಲ್ಲಿ ಶಿವಾಜಿಯು ಅಲ್ಲಿ ನಿಲ್ಲಲಾರದೆ “ಆಮ್ ಖಾಸ್ ಖಾನೆಯಿಂದ ಹಿಂದೆರಳಿದ್ದನು. ಬಾದಶಹನಿಗೆ ನಮಸ್ಕಾರಮಾಡದೆ, ರಾಜಪುತ್ರರನ್ನು ಕಣ್ಣೆತ್ತಿ ನೋಡದೆ, ಅವನು ಹೋಗಿಬಿಟ್ಟನು. ಶಿವಾಜಿಯು ಅಕಸ್ಮಾತ್ತಾಗಿ ಅಲಕ್ಷವಾಗಿ ಅಸ್ಥಾನವನ್ನು ಬಿಟ್ಟು ಹೋದುದನ್ನು ನೋಡುತ್ತಲೇ, ಅವರಂಗಜೀಬನ ಕೋಪಕ್ಕೆ ಪಾರವಿರಲಿಲ್ಲ. ಆದರೂ ಸ್ಥಿರಚಿತ್ರನಾಗಿದ್ದು, ಮೌನವಾಗಿದ್ದು ತನ್ನ ಮುಖಮುದ್ರೆಯನ್ನು ಬೇರೆ ಮಾಡಲಿಲ್ಲ, ಶಿವಾಜಿಯು ಹೋದ ಬಳಿಕ ಅವನ ಪರಿಜನರು ಅವನ ಹಿಂದೆಯೇ ನಡೆದು ಬಿಟ್ಟರು. ಅವರಂಗಜೀಬನು ರಾಜಸಿಂಹನ್ನು ಕರೆದು, “ಹೋದವರು ಎಲ್ಲಿ ತಾನೇ ಇಳಿಯುವರು?” ಎಂದು ಕೇಳಿದನು.

ರಾಜಸಿಂಹ:- “ಖಾವಂದರ ಅಪ್ಪಣೆಯಂತೆ ಅವರಿಗೋಸ್ಕರ

4