ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 42 -

ಕೋಟೆಯ ಒಳಗೆ ಮೊದಲೇ ಸಜ್ಜುಗೊಳಿಸಿದ್ದ “ದಿಲ್ಖುಷ್” ಮಂದಿರದಲ್ಲಿ ಇಳಿಸುವೆನು.”

ಅವರಂಗಜೀಬನು “ಹಾಗಾದರೆ ನಡೆ! ನಡೆ! ವಿಳಂಬಿಸಬೇಡ! ಶಿವಾಜಿಯನ್ನು ಅಲ್ಲಿ ಇಳಿಸಿದ ಬಳಿಕ ನಮ್ಮನ್ನು ನೋಡಲು ನೀನು ಅರಮನೆಗೆ ಬರಬೇಕಾಗುವುದು. ರಾಜಕಾರ್ಯಗೌರವವು ಹೆಚ್ಚಿದೆ” ಎಂದು ಹೇಳಿ ಸುಮ್ಮನಾದನು.

ಶಿವಾಜಿಯು ಪೂರ್ವದ ಇಂದ್ರಪ್ರಸ್ತದ ಸೌಭಾಗ್ಯವನ್ನೆಲ್ಲಾ ನೋಡುತ್ತ ಆರ್ಯಪುತ್ರರ ಆಸ್ಥಾನದಲ್ಲಿ ಮೊಗಲರು ಸ್ಟೇಚ್ಛೆಯಿಂದ ರಾಜದಂಡವನ್ನು ಪರಿಪಾಲಿಸುವುದನ್ನು ಯೋಚಿಸುತ್ತ, ರಾಜಪುತ್ರರಿಗೂ ಹಿಂದುಗಳಿಗೂ ತಗಲಿದ ಹೀನಾವಸ್ಥೆಯನ್ನು ಕುರಿತು ದುಃಖಿಸುತ್ತ ಮೆಲ್ಲಮೆಲ್ಲನೆ ಹೋಗುತಿದ್ದನು. ರಾಜಸಿಂಹನು ತನ್ನ ಸಮೀಪಸ್ಥನಾದುದನ್ನು ನೋಡಿ ಶಿವಾಜಿಯು “ಬಾದಶಹನು ಎಂತಹನು? ನಮ್ಮನ್ನೂ ಯಶವಂತಸಿಂಹನನ್ನೂ ಒಂದು ಮಾಡಿದನಲ್ಲ!” ಎಂದು ಕೇಳಿದನು.

ರಾಮಸಿಂಹನು "ಅರಮನೆಯಲ್ಲಿದ್ದಾಗ ಅಲ್ಲಿನ ಪದ್ಧತಿಗನುಸಾರವಾಗಿ ನಡೆಯದೆ ಆಗಲಾರದು. ಅದು ಹೋಗಲಿ! ಈಗ ತಾವು ಸುರಕ್ಷಿತವಾಗಿ ತಮ್ಮ ಊರನ್ನು ಸೇರಿದರೆ ಸಾಕು! ನನ್ನ ಭಾರವನ್ನು ಇಳಿಸಿಕೊಂಡಂತಾಗುವುದು” ಎಂದು ದೈನ್ಯದಿಂದ ಬೇಡಿಕೊಂಡನು.

ಶಿವಾಜಿಯು ಈ ಮಾತಗಳ ಸೂಕ್ಷ್ಮಾರ್ಧವನ್ನು ಗ್ರಹಿಸಿಕೊಂಡು, ತನಗೋಸ್ಕರ ಅಣಿಮಾಡಿದ್ದ ಮಂದಿರವನ್ನು ಸೇರಿದನು. ಈ ರೀತಿಯಾಗಿ ಕ್ರಿ. ಶಕೆಯ೧೬೬೬ರಲ್ಲಿ ಶಿವಾಜಿಯು ಬಾದಶಹನಿಗೆ ಮೊತ್ತ ಮೊದಲು ಕೊಟ್ಟ ಸಂದರ್ಶನವು ಕಟ್ಟ ಕಡೆಯದಾಯಿತು.

ಯಾವ ದಿವಸದಲ್ಲಿ ಶಿವಾಜಿಯು ಅವರಂಗಜೀಬನ ಸಂದರ್ಶನಾರ್ಥವಾಗಿ ಹೋಗಿದ್ದನೋ ಆ ದಿವಸವೇ ಶೈಲಿನಿಯು ಕೋಟೆಯೊಳಗೆ ರಾಜಸಿಂಹನಿಗೋಸ್ಕರ ಸಜ್ಜುಗೊಳಿಸಿದ್ದ ಮಂದಿರದ ಉಪ್ಪರಿಗೆಯನ್ನು ಏರಿದ್ದಳು. ಶಿವಾಜಿಯು ಶಿಬಿರವನ್ನು ಮುಟ್ಟಿದನು. ಬಾದಶಹನ ಆಜ್ಞಾನುಸಾರವಾಗಿ ರಾಜಸಿಂಹನು ಅರಮನೆಗೆ ಹಿಂದೆರಳಿದನು. ಆದರೂ ಶೈಲಿನಿಯು ಮಹಡಿಯಿಂದ ಕೆಳಕ್ಕೆ ಇಳಿಯಲಿಲ್ಲ. ರಾತ್ರಿದೇವಿಯು ತನ್ನ ಭಯಾನಕ