ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 49 -

ಇತಿಹಾಸವು ಬೇರೊಂದು ರೂಪವನ್ನು ಹೊಂದುತಿತ್ತು. ಮುಆಜಮನು ನೆಟ್ಟನೆ ಶಿವಾಜಿಯ ಶಿಬಿರದ ಕಡೆಗೆ ನಡೆಯುವ ಬದಲಾಗಿ-ತೆರೆಮಸಗಿದ ಕಡಲಿನಲ್ಲಿ ಚುಕ್ಕಾಣಿ ಇಲ್ಲದ ನಾವೆಯಂತೆ-~ಕಂಡಕಡೆಗೆ ಅಳೆದನು. ಕೊನೆಗೆ ಈ ನಾವೆಯು ರಾಜಸಿಂಹನ ಮಂದಿರದ ಬಳಿಯಲ್ಲಿ ಬಂದು ನಿಂತಿತು. ರಾಜಸಿಂಹನನ್ನು ಈಗ ತಾನೇ ಅರಮನೆಯಲ್ಲಿ ಸ್ವತಃ ನೋಡಿದ್ದರೂ, ಮುಆಜಮನು ಅವನನ್ನು ಕುರಿತು ಮನೆಯೊಳಕ್ಕೆ ವಿಚಾರಿಸಿದನು. ರಾಜಸಿಂಹನು ಮನೆಯಲ್ಲಿ ಇಲ್ಲದಿದ್ದರೂ ಒಳಹೋಗುವುದಕ್ಕೂ, ಶೈಲಿನಿಯೊಡನೆ ಮಾತುಕಥೆಯಾಡುವುದಕ್ಕೂ, ಮುಆಜಮನು ಸಂಪೂರ್ಣ ಅಧಿಕಾರವನ್ನು ಪಡೆದಿದ್ದನು. ಮುಂಜಮನು ಅನೇಕ ಸಲ ಶೈಲಿನಿಯ ಚಿಕ್ಕ ಮನೆಗೆ ಬಂದು ಹೋಗುತ್ತಿದ್ದನು. ಜೈಲಿನಿಯ ಪ್ರಣಯವನ್ನು ಸಾಧಿಸುವುದಕ್ಕೆ ನಾನಾ ಉಪಾಯಗಳನ್ನು ಮಾಡಿದ್ದನು. ಒಂದು ಸಲ ನೂರಾರು ಸುರಪೂರಿತ ಸೀಸೆಗಳನ್ನು ತರಿಸಿಕೊಂಡು ಬಂದನು. ಜೈಲಿನಿಯು ಪ್ರಸನ್ನಳಾಗದೆ ಸುರೆಯನ್ನು ತಂದವನೊಡನೆ, ಇವುಗಳು ನಮ್ಮಲ್ಲಿ ಬಿಕರಿಯಾಗವು, ಅವಕ್ಕೆ ಬಾದಶಹನ ಅಂತಃಪುರದಲ್ಲಿ ಬೆಲೆ ಬರುವುದು” ಎಂದು ಮುಂಜಮನು ಕೇಳುವಂತೆ ಹೇಳಿ ನಡೆದುಬಿಟ್ಟಳು. ಮು೦ಜಮನು ಸಿಟ್ಟು ಕೊಂಡು ತನ್ನ ಪರಾಕ್ರಮವನ್ನು ತೋರಿಸುವುದಕ್ಕೆ ಮತ್ತಾವುದನ್ನೂ ಕಾಣದ ಸೀಸೆಗಳ ಕೊರಲುಗಳನ್ನು ಮುರಿದು, ಕೆನ್ನೀರನ್ನು ಪಾನಮಾಡಿಬಿಟ್ಟನು. ಇನ್ನೊಮ್ಮೆ ಮು೦ಜಮನು ಸ್ವತಃ ಹೋಗದೆ ತನ್ನ ಮೊಂದು ತಸಬೀರನ್ನೂ ಪ್ರಣಯ ಪತ್ರಿಕೆಯನ್ನೂ ಕಳುಹಿಸಿದನು. ಜೈಲಿನಿಯು ಪ್ರತಿಯಾಗಿ “ನಿನ್ನ ಪ್ರಣಯ ಪಾತ್ರಳ ತಸಬೀರು ಇಲ್ಲದೆ ಇದ್ದುದರಿಂದ, ಅದರ ಮಾತೃಕೆಯನ್ನು (original copy) ಕಳುಹಿಸಿರುವೆನು” ಎಂದು ಪತ್ರ ಬರೆದು ಸಿಪಾಯಿಯ ಒಡನೆ ಒಂದು ದೊಡ್ಡ ನಾನರಿಯನ್ನು ಕಳುಹಿಸಿದಳು. ಮತ್ತೊಮ್ಮೆ ಮುಜಮನು ಶಿವಾಜಿಯ ವೇಷವನ್ನು ಅಳವಡಿಸಿಕೊಂಡು, ಶೈಲಿನಿಯ ಮಂದಿರಕ್ಕೆ ಹೋದನು. ಶೈಲಿನಿಯು ಬಂದವನನ್ನು ಕುಳ್ಳಿರಿಸಿ, “ಸಿಂಹ- ಚರ್ಮದಲ್ಲಿ ಕತ್ತೆ” ಎಂಬ ಪಾರಸೀ ಕಥೆಯನ್ನು ಅವನಿಗೆ ಓದಲು ಕೊಟ್ಟು, ನನ್ನ ದಾಸಿಯನ್ನು ಕರೆದು, ಬಂದವನನ್ನು ಸತ್ಕರಿಸೆಂದು ಹೇಳಿ ಹೋಗಿ ಬಿಟ್ಟಳು. ಜೈಲಿನಿಯ ತಿರಸ್ಕಾರವನ್ನು ಮುಆಜಮನು ರಾಜಸಿಂಹನಿಗೆ