ಪುಟ:ಐನ್‌ಸ್ಟೀನ್ ಬಾಳಿದರಿಲ್ಲಿ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

xii ಐನ್‌ಸ್ಟೈನ್ ಬಾಳಿದರಿಲ್ಲಿ ದರೆ ಪ್ಲೇಟೋ ಹೇಳುವ ಪಂಡಿತರ ಆಳಿಕೆಯ ಸಾಧುತ್ವದ ಬಗ್ಗೆಯೇ ಗಂಭೀರ ಸಂದೇಹ ಹುಟ್ಟು ತದೆ. ಈ ದಿವ್ಯದ ಕಾಲದಲ್ಲಿ ಅವರ ಬೆಂಬಲಕ್ಕೆ ನಿಂತ ಧೀರ ವಿಜ್ಞಾನಿಗಳ ಸಂಖ್ಯೆ ಕೈ ಬೆರಳುಗಳಲ್ಲಿ ಎಣಿಸುವಷ್ಟೇ ಇತ್ತೆಂಬುದು ಗಮನಾರ್ಹ. 'ದೇಶಭಕ್ತ' ವಿಜ್ಞಾನಿಗಳು ಎಷ್ಟು ಅವಿವೇಕಿಗಳಾದ ರೆಂದರೆ, ಐನ್‌ಸ್ಟೈನ್ ಯೆಹೂದ್ಯರಾಗಿದ್ದುದರಿಂದ ಅವರ ಸಾಪೇಕ್ಷತಾಸಿದ್ಧಾಂತವೂ ಅಸ್ಪೃಶ್ಯ ಮತ್ತು ಸುಳ್ಳೆಂಬ ನಿಲುಮೆಯನ್ನು ತಾಳಿ, ಅದು ಪ್ರಾಯೋಗಿಕವಾಗಿ ಪ್ರಮಾಣಿತವಾದ ಮೇಲೂ ಅದನ್ನು ಅಸತ್ಯವೆಂದು ಸಾಧಿಸಲು ತಮ್ಮ ವೇಳೆ ಮತ್ತು ಬುದ್ಧಿಶಕ್ತಿಯನ್ನು ವೆಚ್ಚಮಾಡಿದರು. ಐನ್‌ಸ್ಟೈನರು ಜರ್ಮನ್ ಪೌರತ್ವವನ್ನು ಕೇಳಿ ಪಡೆದು ಜರ್ಮನ್ನರೊಡನೆ ತಮ್ಮ ಸಮಹಿತವನ್ನು ತೋರಿಸಿದ್ದರೂ ಅದು ಅವರನ್ನು ಮತ್ಸರಿಗಳಿಂದ ಕಾಪಾಡಲಿಲ್ಲ. ಅವರನ್ನು ಕೆಲಕಾಲ ಕಾಪಾಡಿದ್ದು ಅವರ ಕೀರ್ತಿ ಮತ್ತು ಸ್ವಿಸ್ ಪೌರತ್ವ. ಆದರೆ ಒಂದೇ ಸಮನೆ ಯೆಹೂದ್ಯರ ವಿರುದ್ಧ ಪ್ರಚಾರಸತ್ರ ನಡೆಯುತ್ತಿರುವಾಗ ತಾವು ಮನಃಸ್ತಿಮಿತದಿಂದ ತಮ್ಮ ವಿಜ್ಞಾನಕಾರ್ಯವನ್ನು ನಡೆಸುವುದು ಅಶಕ್ಯ ವೆಂದೆನಿಸಿ ಅವರು ದೇಶತ್ಯಾಗ ಮಾಡಿದರು. ಈ ನಿರ್ಣಯ ಕೈಗೊಳ್ಳುವುದಕ್ಕೆ ಇನ್ನು ತುಸು ತಡ ಮಾಡಿದ್ದರೆ ಕಾಲ ಮಿಂಚಿ ಹೋಗಬಹುದಿತ್ತು. ಅವರು ಈ ನಿರ್ಣಯ ಮಾಡಿದ್ದರೋ ಇಲ್ಲವೋ ಎನ್ನುವಷ್ಟರಲ್ಲಿ ಜರ್ಮನಿಯಲ್ಲಿದ್ದ ಅವರ ಆಶ್ರಮ ನಾಟ್ಟಿಗಳ ದಾಳಿಗೆ ತುತ್ತಾಗಿ ಹೋಯಿತು. ಕೊನೆಯಲ್ಲಿ ಐನ್‌ಸ್ಟೈನರು ಅಮೆರಿಕದಲ್ಲಿ ವಸತಿ ಹೂಡಿ ಅಲ್ಲಿಯ ಗೌರವಾನ್ವಿತ ವಿಜ್ಞಾನಿಗಳಾ ದರು. ಅನೇಕ ವರ್ಷಗಳ ಅನಂತರ ಸಿಂಹಾವಲೋಕನ ಮಾಡುವಾಗ ಆದದ್ದೆಲ್ಲ ಒಳಿತೇ ಆಯಿತೆಂದು ತೋರುತ್ತದೆ. ಐನ್‌ಸ್ಟೈನ್ ಸಿದ್ಧಾಂತಗಳ ಬಗ್ಗೆ ಜರ್ಮನ್ ವಿಜ್ಞಾನಿಗಳೂ ಅಧಿಕಾರಿ ಗಳೂ ಬೆಳೆಸಿಕೊಂಡ ವಿರೋಧವಲ್ಲದಿದ್ದರೆ ಅವರ ಪ್ರಸಿದ್ಧ E = mcಿ ಎಂಬ ದ್ರವ್ಯ-ಶಕ್ತಿ ಸಮೀಕರಣದ ಪ್ರಾಯೋಗಿಕ ಅನ್ವಯದಿಂದ ಉದ್ಭವಿಸಿದ ಪರಮಾಣು ಬಾಂಬನ್ನು ಅಮೆರಿಕ ಕ್ಕಿಂತ ಮೊದಲು ನಿರ್ಮಿಸಲು ಜರ್ಮನ್ನರು ಯತ್ನಿಸಬಹುದಾಗಿತ್ತೆಂದು ತೋರುತ್ತದೆ. ಒಂದು ವೇಳೆ ಹಾಗಾಗಿದ್ದಿದ್ದರೆ ಜಗತ್ತಿನಲ್ಲಿ ನಾರ್ಡಿಕ್ ರಕ್ತದಲ್ಲದ ಜನಾಂಗಗಳಲ್ಲಿ ಹುಟ್ಟಿದವರ ಗತಿ ಏನಾಗುತ್ತಿತ್ತೋ ದೇವರೇ ಬಲ್ಲ. ಇಲ್ಲಿ ನಾವು ಐನ್‌ಸ್ಟೈನ್ ಜೀವನದ ಎರಡು ಮಹಾ ದುರಂತಗಳ ಸಂಧಿಗೆ ಬರುತ್ತೇವೆ. ಮೊದಲನೆಯದೆಂದರೆ ಪರಮಾಣುಬಾಂಬಿನ ನಿರ್ಮಾಣ. ಅದಕ್ಕೆ ಆಧಾರವಾದದ್ದು ಅವರ ದ್ರವ್ಯ-ಶಕ್ತಿ ಸಮೀಕರಣ. ಅಲ್ಲದೆ, ಪರಮಾಣುಭೇದನದಿಂದ ಅಪಾರ ಶಕ್ತಿಯನ್ನು ಬಿಡುಗಡೆ ಮಾಡುವುದು ವ್ಯವಹಾರಸಾಧ್ಯ ಎಂದು ಪ್ರಯೋಗಶಾಲೆಯಲ್ಲಿ ಸಿದ್ಧವಾದ ಸುದ್ದಿ ತಿಳಿದೊಡನೆ ಅದನ್ನು ಉಪಯೋಗಿಸಿ ಜರ್ಮನಿ ಪರಮಾಣುಬಾಂಬನ್ನು ನಿರ್ಮಿಸಿ ಮಾನವಕುಲವನ್ನೇ ಪಾದಾ ಕ್ರಾಂತ ಮಾಡಿಕೊಳ್ಳಬಹುದೆಂದು ನಡುಗಿದ ಪರಮಾಣುವಿಜ್ಞಾನಿಗಳು, ಅದಕ್ಕೆ ಮೊದಲೇ ಆ ಆಯುಧವನ್ನು ಅಮೆರಿಕ ತಯಾರಿಸಬೇಕೆಂದು ಭಾವಿಸಿದರು. ಇದಕ್ಕೆ ಅಮೆರಿಕನ್ ಸರಕಾರವನ್ನು ಪ್ರಚೋದಿಸಿದ ಪತ್ರಕ್ಕೆ ಐನ್‌ಸ್ಟೈನರು ತಮ್ಮ ಮಿತ್ರರ ಸಲಹೆಯಂತೆ ಅಂಕಿತವಿಕ್ಕಿದರು. ಈ ಪತ್ರದ ಫಲವಾಗಿ ಪರಮಾಣುಬಾಂಬು ಸಿದ್ಧವಾದದ್ದೂ ಅದು ಮಾಡಿದ ಅಪಾರ ನಾಶ ಮತ್ತು ಅದರಿಂ ದಾಗಿ ಉದ್ಭವಿಸಿದ ಜಾಗತಿಕ ಪರಮಾಣು ಅಸ್ತ್ರ ಸ್ಪರ್ಧೆಯೂ ಐನ್‌ಸ್ಟೈನರ ಶಾಂತಿವಾದಿ ಆತ್ಮಕ್ಕೆ ಶಾಶ್ವತವಾದ ಪಶ್ಚಾತ್ತಾಪ ಶಲ್ಯವಾಗಿ ಬಿಟ್ಟಿತು. ಎರಡನೇ ದುರಂತ ಇಸ್ರೇಲ್ ರಾಷ್ಟ್ರದ ನಿರ್ಮಾಣಕ್ಕೆ ಸಂಬಂಧಿಸಿದ್ದು. ಶತಮಾನಗಳಿಂದ ಯೂರೋಪಿನ ಯೆಹೂದ್ಯರ ಮೇಲಾಗುತ್ತಿದ್ದ ದಬ್ಬಾಳಿಕೆಯ ಚರಿತ್ರೆಯನ್ನರಿತ ಐನ್‌ಸ್ಟೈನರು ಯೆಹೂದ್ಯರಿಗಾಗಿ ಅವರ ಪುರಾತನ ತಾಯ್ಯಾಡಾದ ಪ್ಯಾಲೆಸ್ಟೈನಿನಲ್ಲಿ ಒಂದು 'ತಾಯ್ಯಾಡ'ನ್ನು