ಪುಟ:ಕಂಬನಿ-ಗೌರಮ್ಮ.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ನೀವು ಇಷ್ಟೊಂದು ಅವಸರ ಮಾಡದಿದ್ದರೆ ನಾನೇ ಅಲ್ಲಿಗೆ ಬಂದು ಎಲ್ಲಾ ಹೇಳುತ್ತಿದ್ದೆ' ಎಂದ. ಅಷ್ಟು ಹೊತ ನಾನೂ ಪಾವನ ನಿಂತೇ ಇದ್ದೆವು. ಅವನು ಹಾಗೆಯೇ ಬಿದ್ದುಕೊಂಡಿದ್ದ. ನನ್ನನ್ನು ಕೂರಲು ಹೇಳಿದೊಡನೆ ನಾನು ಕೂತುಕೊಳ್ಳುತ್ತಾ ಬಾಗಿಲ ಹತ್ತಿರ ನೀರವವಾಗಿ ನಿಂತಿದ್ದ ಪಾನನ್ನ ಕೂಗಿ ಬಾ, ಇಲ್ಲಿ ಕೂತುಕೋ ' ಎಂದೆ. ಅವಳು ಬರಲಿಲ್ಲ; ಅಲ್ಲೇ ನಿಂತಿದ್ದಳು.

"ಅದನ್ನು ಲಕ್ಷಿಸದೆ ಅವನು “ನೋಡು ಮಹೇಶ, ನಿನ್ನ ತಂಗಿ ಯನ್ನು ಮದುವೆಯಾದಾಗ ನಾನಿನ್ನೂ ಚಿಕ್ಕವನು. ಸೋದರ ಮಾವನ ಮಾತನ್ನು ಮೀರಲಾರದೆ ಮದುವೆಯಾದೆ. ಆಗ ನನ್ನ ಮನಸ್ಸೇ ನನಗೆ ತಿಳಿದಿರಲಿಲ್ಲ. ಈಗ ನೋಡು, ನಾನೂ ಒಬ್ಬ ಮನುಷ್ಯನಾಗಿದ್ದೇನೆ; ನನಗೂ ಬುದ್ದಿಯಿದೆ, ಆತ್ಮವಿದೆ. ನನಗೆ ಬುದ್ದಿ ಬರುವ ಮೊದಲು ಆದ ಒಂದು ವಿಷಯಕ್ಕಾಗಿ ಇಡೀ ಜೀವನವನ್ನೆಲ್ಲಾ ನಾನೇಕೆ ಹಾಳುಮಾಡಿಕೊಳ್ಳ ಬೇಕು ? ಒತ್ತಾಯದ ಮದುವೆ ಏನೋ ಎಂದೋ ನಡೆದುಜೋಯಿತು. ಈಗೇನು ಮಾಡುವಂತೆಯೂ ಇಲ್ಲ, ಈಗ ನಾನೊಂದು ನಿಶ್ಚಯ ಮಾಡಿ ದ್ವೇನೆ. ನಿನ್ನ ತಂಗಿ ನಿಮ್ಮನೆಯಲ್ಲೇ ಇರಲಿ, ನಾನವಳ ಖರ್ಚಿಗೆ ಬೇಕಾ ಗುವ ಹಣವನ್ನು ಕೊಡಲು ತಯಾರಾಗಿದ್ದೇನೆ. ಇದಕ್ಕೂ ಹೆಚ್ಚಾಗಿ ನಾನಿನ್ನೇನು ಹೇಳಲಿ ?' ಎಂದು ಬೆಳಿದ.

"ಅಷ್ಟು ಹೊತ್ತೂ ತಡೆದಿದ್ದ ಕೋಪ ಅವನ ಮಾತು ಕೇಳಿ ಉಕ್ಕಿ ಬಂತು. ' ಪಾಪನ ಖರ್ಚನ್ನು ಪೂರೈಸಲಾರದೆ ಅವಳನ್ನಿಲ್ಲಿ ಬಿಡಲು ಕರೆತರ ಲಿಲ್ಲ. ನಿನಗೆ ಅವಳು ಬೇಡವಾದರೆ, ಅವಳ ಹಣದಿಂದ ವಿದ್ಯೆಗಳಿಸಿ ಸಂಸಾ ದಿಸಿದ ನಿನ್ನ ಹಣವೂ ಅವಳಿಗೆ ಬೇಡ' ಎಂದು 'ಬಾ ಪಾಪ, ಇಲ್ಲಿ ನಮ್ಮ ಗಿನ್ನೇನು ಕೆಲಸ' ಎಂದು ಹೊರಟೆ. ಅವನೂ ತಡೆಯಲಿಲ್ಲ. ಬಹಳ ಸುಲಭ ಎಇ ಗೆದ್ದೆ ಎಂದು ಹಿಗ್ಗುತ್ತಿದ್ದನೋ ಏನೋ! ಪಾಪ ಬಾಗಿಲ ಹತ್ತಿರ ದಿಂದ ಕದಲಲಿಲ್ಲ, ನಾನು ಹತ್ತಿರ ಹೋಗಿ ಕೈ ಹಿಡಿದು ಬಾ, ಪಾಪ, ನೀನು ನನಗೇನೂ ಹೆಚ್ಚಾಗಿಲ್ಲ. ಬಾ, ಹೋಗೋಣ' ಎಂದೆ. ಪಾಪ ಕೈಕ ಕೊಸರಿಕೊಂಡು ಅವನೆಡೆಗೆ ಹೋ, ಅವನ ಕಾಲುಗಳನ್ನು ಕಣ್ಣೀರಿನಿಂದ

೧೨೧

16