ಪುಟ:ಕಂಬನಿ-ಗೌರಮ್ಮ.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ನನ್ನ ವಿಷಯದಲ್ಲಿ ತಮ್ಮ ಅಭಿಪ್ರಾಯಪಟ್ಟುಕೊಳ್ಳುವುದನ್ನು ನಾನು ಸಹಿಸಲಾರೆ. ಅದರಿಂದಲೇ ಬೇರೆಯವರೊಡನೆ ಹೇಳಲು ಹಿಂಜರಿಯುವ ಈ ವಿಷಯಗಳನ್ನೆಲ್ಲಾ ನಿನಗೆ ಬರೆದಿರುವೆನುನೀನಿದನ್ನು ಓದಿದ ಮೇಲೂ ನನ್ನ ವಿಷಯದ ನಿನ್ನ ಭಾವನೆಯು ಬದಲಾಗದಿದ್ದರೆ ಇದೇ ನಿನಗೆ ನನ್ನ ಕೊನೆಯ ನಮಸ್ಕಾರ-

ಮಹೇಶ"

ಮಧ್ಯರಾತ್ರಿಯಾಗಿದೆ ಎಂಬ ಅರಿವು ಸಹ ಇಲ್ಲದೆ ತನ್ನ ಕಣ್ಣೀರಿ ನಿಂದ ತೊಯ್ದ ಕಾಗದವನ್ನು ಕೈಯ್ಯಲ್ಲಿ ಹಿಡಿದುಕೊಂಡೇ ವಸಂತ ಮಹೇಶನ ರೂಮಿಗೆ ಓಡಿದ.

ಎಪ್ರಿಲ್ ೧೯೩೮

೧೨೫