ಪುಟ:ಕಂಬನಿ-ಗೌರಮ್ಮ.pdf/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಮನುವಿನ ರಾಣಿ

ನಗೆ ಆ ಊರಿಗೆ ವರ್ಗವಾಗಿ ಬರೇ ಎರಡು ತಿಂಗಳುಗಳಾಗಿ ದು, ಆಷ್ಟೆ. ಆದಿನ ನನಗೆ ತುಂಬಾ ಕೆಲಸವಿತ್ತು. ಬೆಳಗ್ಗೆ ಆರು ಗಂಟೆಗೆ ಹೋದವನು ಅದೇ ಆಗ ಮನೆಗೆ ಬಂದಿದ್ದೆ. ನಾನು ಮನೆಯ ಮೆಟ್ಟಿಲು ಗಳನ್ನು ಹತ್ತುವಾಗ ಆಸ್ಪತ್ರೆಯ ಗಡಿಯಾರವ ಹನ್ನೊಂದು ಹೊಡೆ ಯಿತು. ಮಕ್ಕಳೂ ಕೆಲಸದವರೂ ಮಲಗಿ ನಿದ್ರೆ ಮಾಡಿಬಿಟ್ಟಿದ್ದರು. ಪಾರ್ವತಿ ಮಾತ್ರ ನನ್ನ ಪ್ರತೀಕ್ಷೆಯಲ್ಲೇ ಕೂತಿದ್ದಳು. ಒಳಗೆ ಹೋಗಿ ಬಟ್ಟೆ ಬದಲಾಯಿಸಿ ಕೈಕಾಲು ತೊಳೆದು ಇನ್ನೇನು ಊಟಕ್ಕೆ ಕೂರಬೇಕು; ಅಷ್ಟರಲ್ಲಿ ಮುಂಬಾಗಿಲನ್ನು ತಟ್ಟುವ ಶಬ್ದ ಕೇಳಿಸಿತು. ಪಾರ್ವತಿಗೆ ರೇಗಿ ಹೋಳು; 'ಧು, ಇದೇನಿದು ಬೆಳಗಿನ ಜಾವಕ್ಕೆ ಹೋದವರು ಈಗ ಬಂದಿದ್ದಾರೆ. ಒಂದಿಷ್ಟು ಊಟ ಮಾಡುವದಕ್ಕೂ ಪುರಸೊತ್ತಿಲ್ಲ-ಆಷ್ಟರಲ್ಲಿ ಬಂದರು ಇನ್ನೊಬ್ಬರು ಕದ ತಟ್ಟುತ್ತಿರಲಿ; ನಾನೇನೂ ಬಾಗಿಲು ತೆರೆಯುವು ದಿಲ್ಲ' ಎಂದಳು. ಹೌದು-ನಾನು ಬೆಳಗಿನಿಂದ ಹಸಿದಿದ್ದೆ. ಆದರೆ... ಆದರೆ ನನಗೆ ಮನಸ್ಸು ತಡೆಯಲಿಲ್ಲ. 'ಹೋಗಲಿ ಬಿಡು ಪಾರ್ವತಿ, ಬಾಗಿಲು ತೆರೆದು ಯಾರೆಂದು ವಿಚಾರಿಸು' ಎಂದೆ. ಅವಳಿಗೆ ಇನ್ನಷ್ಟು ಕೋಪ ಬಂತು: 'ನಿಮ್ಮ ದಮ್ಮಯ್ಯ, ಬೆಳಗಿನಿಂದಲೂ ಹೊಟ್ಟೆಗೇನೂ ಇಲ್ಲ. ಮೊದಲು ಊಟ ಮಾಡಿ, ಆಮೇಲೆ ನೋಡೋಣ' ಎಂದಳು. ಈ ಮಧ್ಯೆ ಬಾಗಿಲ ತಟ್ಟುವುದು ಬಹಳ ಜೋರಾದ, ಮನುಷ್ಯ ಪ್ರಾಣಿ ಯೊಂದು ಜೀವನ ಮರಣಗಳ ಮಧ್ಯೆ ಹೊರಳಾಡುತ್ತಿರುವಾಗ ನಾನು