ಪುಟ:ಕಥಾವಳಿ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ ಥಾ ನ ಳಿ. - ಪಿ ಠಿ ಕೆ. ಬಾಲವಿದ್ಯಾಭ್ಯಾಸವು ಈಚೆಗೆ ಬಾಲಲೀಲೆಯಾಗಿ ಪರಿಣಮಿಸಿರುವುದು. ಇದಕ್ಕೆ ಪಾಶ್ಚಾತ್ಯರಲ್ಲಿ ಪ್ರಸಿದ್ಧರಾದ ಉಪಾಧ್ಯಾಯರ ನವೀನ ಪಾಠಕ್ರಮವೇ। ಕಾರಣವು, ಈ ಪಾಠಕ್ರಮವು ಮಕ್ಕಳ ಚಿತ್ತವೃತ್ತಿಯನ್ನು ಅನುಸರಿಸಿರು ವುದು, ಮಕ್ಕಳ ಚಿತ್ರವು ಆಟದಲ್ಲಿ ಅನುರಕವಾಗಿರುವುದೆಂಬುದನ್ನು ತಿಳಿದು ಜ್ಞಾನೇಂದ್ರಿಯವಿಕಾಸಕ್ಕೆ ಆಟಪಾಟದಲ್ಲಿಯೇ ಅನೇಕಸಾಧನೆಗಳನ್ನು ಕಲಿ ಸಿರುವರು. ಹೀಗೆ ಕಲ್ಪಿಸಿರುವ ಸಾಧನಗಳಲ್ಲಿ ಕಥೆ ಹೇಳುವುದೂ ಒಂದು. ಕಥೆ ಹೇಳುವುದಕ್ಕೆ ಯಾರಿಗೆ ತಾನೆ ಬಾರದು' ಎಂದು ಹೇಳಬಹುದು. ಆದರೆ ಒಂದು ಸನ್ನಿವೇಶವನ್ನು ವರ್ಣಿಸಿ, ಅಲ್ಲಿ ನಡೆವ ವಿಚಾರವನ್ನು ವಿವರಿ ಸುತಿದ್ದರೆ, ಕಥೆಯನ್ನು ಕೇಳುವವರು ಆ ಸಂದರ್ಭದಲ್ಲಿದ್ದುಕೊಂಡು, ಅಲ್ಲಿ ಸಂಭವಿಸುವ ಸುಖದುಃಖಗಳಿಗೆ ಭಾಗಿಗಳಾಗಿ ' ಮುಂದೇನುಗತಿ ? ಹೇಗೆ ಪರಿಣಮಿಸುವದು? ಸಖವ ಎಂದಿಗೆ ಉಂಟಾದೀತು ?” ಎಂಬ ರೀತಿಯಲ್ಲಿ ಕಾತರಪಡುವಂತೆ ಕಥೆಯನ್ನು ಹೇಳುವದು ಜನಸಾಮಾನಕೆ ಸುಲಭವಲ್ಲ. ಕಥೆಯನ್ನು ಮನೋಹರವಾಗಿ ಹೇಳುವುದೂ ಒಂದು ವಿದ್ಯೆಯೇ ಸರಿ, ಇದು ಎಲ್ಲರಲ್ಲಿಯ ಸಾಮಾನ್ಯವಾಗಿ ಇಲ್ಲದ ವಿದ್ಯೆ ಯಾದರೂ ಕಥೆಯನ್ನು ಹೇಳು ವವರು ಹೇಳಬೇಕೆಂದಿರುವುದನ್ನು, ತಿಳಿದಂತೆ ಹೇಳುವುದಲ್ಲದೆ ಕೂಡಿದ ಮಟ್ಟಿ ಗೂ ಮನೋಹರವಾಗಿರುವಂತೆ ಹೇಳಲ ಇತಿ ಸಬೇಕು. ಒಂದು ಕಥೆಯಲ್ಲಿ ಹೇಳಬೇಕಾದುದನ್ನೆಲ್ಲಾ ಇಸ್ತಕದಲ್ಲಿ ಬರೆದು ಸಾಧ್ಯವಲ್ಲ; ಪುಸ್ತಕದಲ್ಲಿ ಬರೆವುದನ್ನೆಲ್ಲಾ ಹೇಳಬೇಕಾದ ಅವಶ್ಯವೂ ಇಲ್ಲ. ಆದುದರಿಂದ ಕಥೆಗೆ ಬೇಕಾದ ಸಾಮಗ್ರಿಗಳನ್ನು ಕೂಡಿದಮಟ್ಟಿಗೆ ಇಲ್ಲಿ ಒದ ಗಿಸಿದೆ. ಇವನ್ನು ತೆಗೆದುಕೊಂಡು ರುಚಿಯದ ಪಾಕವನ್ನು ಇಳಿಸುವ ಜಾಣ್ನೆಯು ಉಪಾಧ್ಯಾಯರದಾಗಿರು ವದು. ಈ ಪುಸ್ತಕವನ್ನು ಉಪಯೋ ಗಿಸುವರು ಇಲ್ಲಿರುವ ಕಥೆಗಳನ್ನು ಗಟ್ಟಿ ಮಾಡಿ ಬಾಲಕರ ಮುಂದೆ ಒಪ್ಪಿಸದೆ ಕಥಾವಿಷಯವನ್ನು ಮಾತ್ರ ತೆಗೆದುಕೊಂಡು, ಬಾಲಕರ ಯೋಗ್ಯತೆಯನ್ನು ಅರಿತು, ಅವರಿಗೆ ರುಚಿಸಬಹುದಾದ ಕಥೆಯನ್ನು, ಸಾಧಾರಣವಾಗಿ ಮಾತ ನಾಡುವ ರೀತಿಯಲ್ಲಿ ಹೇಳಬೇಕು, ಕಥೆ ಹೇಳೊಣದರಲ್ಲಿ ಕಥಾವಿಷಯ ವನ್ನು ತಿಳಿಸುವುದೇ ಮುಖ್ಯವಾದುದರಿಂದ ಭಾಷೆಗೆ ಅಷ್ಟು ಗಮನಕೊಡ