vi
ಬೇಕಾದುದಿಲ್ಲ. ಕಥೆಯನ್ನು ಹೇಳುವದೇ ಆಗಲಿ ಕೇಳುವದೇ ಆಗಲಿ,ಅದೂ ಒಂದು 'ಪಾಠ' ವೆಂಬ ಬೇಸರವು ಯಾರಲ್ಲೂ ಉಂಟಾಗಬಾರದು.
ಕಥೆಯನ್ನುಹೇಳುವಾಗ ಉಪಾಧ್ಯಾಯರು ಮಕ್ಕಳ ಚಿತ್ತವೃತ್ತಿಯನ್ನು ಪರೀಕ್ಷಿಸುತ್ತಿರಬೇಕು. ಒಂದೇ ಮನಸ್ಸಿನಿಂದ ಮಕ್ಕಳು ಕೇಳುತ್ತಿದ್ದಾರೆಂಬುದನ್ನು ತಿಳಿಯಲು ಮಧ್ಯೇಮಧ್ಯೇ ಪ್ರಶ್ನೆಯನ್ನು ಹಾಕುತ್ತಿರಬೇಕು. ವಿಷಯವನ್ನು ಮಕ್ಕಳು ಚೆನ್ನಾಗಿ ಗ್ರಹಿಸಿದರೆಂದು ದೃಢಪಡಿಸಿಕೊಂಡಲ್ಲದೆ ಕಥೆಯನ್ನು ಮುಂದಕ್ಕೆ ಸಾಗಿಸಬಾರದು.ಮಕ್ಕಳಿಗೆ ತಿಳಿಯಲಿ, ತಿಳಿಯದಿರಲಿ, ಮುಗಿಸಿದರೆ ಆಯಿತೆಂದು ಭಾವಿಸಿ ಕಥೆಯನ್ನು ಮುಂದೆ ಮುಂದೆ ಸಾಗಿಸಿದ ಮಾತ್ರದಿಂದಲೇ ಪ್ರಯೋಜನವಿಲ್ಲ. ತಿಳಿಯದುದನ್ನು ಕೇಳಲು ಮಕ್ಕಳಿಗೆ ಅವಕಾಶಕೊಡಬೇಕು. ಅವರಿಗೆ ಅನುಭವವಿಲ್ಲದ ವಿಷಯಗಳನ್ನೂ (ಯುದ್ಧ ವಿಚಾರ, ಸೃಷ್ಟಿಯಚಮತ್ಕಾರ) ತಿಳಿಯದ ಶಬ್ದಗಳನ್ನೂ ವಿವರಿಸಿ ಮುಂದಕ್ಕೆ ಕಥೆಯನ್ನು ಸಾಗಿಸಬೇಕು. ಸಾಧ್ಯವಾದೆಡೆಯಲ್ಲೆಲ್ಲಾ ದೇವರ ಮಾಹಾತ್ಮ್ಯವನ್ನೂ, ಸೃಷ್ಟಿಯ ವೈಚಿತ್ಯ್ರ್ವನ್ನೂ,ಸಸ್ಯ ಮೃಗಾದಿಗಳ ಸ್ವಭಾವವನ್ನೂ ವ್ಯಕ್ತಗೊಳಿಸುತ್ತಿರಬೇಕು,ತಿರ್‍ಯಗ್ಜಂತುಗಳಲ್ಲಿ ದಯೆಯೂ,ದುಃಖೆಗಳಲ್ಲಿ ಅನುತಾಪವೂ,ಸದ್ವತ್ತಿಯಲ್ಲಿ ಅಭಿಲಾಷೆಯೂ,ನೃಪಜರಲ್ಲಿ ನಯವೂ,ಸಾಧುಜನರಲ್ಲಿ ಪ್ರೀತಿಯೂ,ಶೂರರಲ್ಲಿ ಸ್ನೇಹವೂ, ದೀನರಲ್ಲಿ ಕ್ಷಮೆಯ ಉಂಟಾಗುವ ಕಥಾಸಂದರ್ಭಗಳನ್ನು ಮಕ್ಕಳ ಲಕ್ಷ್ಯಕ್ಕೆ ಅವಶ್ಯವಾಗಿ ತರಬೇಕು. ಕಥೆಯನ್ನು ಹೇಳಿ ಪೂರೈಸಿದ ಅನಂತರ, ಅದರಿಂದ ತಿಳಿಯಬೇಕಾದ ಅ೦ಶಗಳನ್ನು ಮಕ್ಕಳಿಂದಲೇ ಹೇಳಿಸಬೇಕು. ಮೇಲಣ ತರಗತಿಗಳಲ್ಲಿ ಕಥೆಯ ಛಾಯೆಯನ್ನು ಪಾತ್ರ ಕೊಟ್ಟು ಕಥಾ ಸಂದರ್ಭವನ್ನೆಲ್ಲಾ ಪುಷ್ಟೀಕರಿಸಿ ವಿವರಿ ಸುವಂತೆ ಬಾಲಕರಿಗೆ ಹೇಳಬೇಕು.
ಕಥಾವಳಿಯ ಮೊದಲನೆಯ ಭಾಗದಲ್ಲಿ ಬಾಲಕರು ಸಾಮಾನ್ಯವಾಗಿ ನೋಡಿರುವ ಜೀವಜಂತು, ಸಸಿ,ಹಿಂದೂಜನರು ಆಚರಿಸುವ ಮುಖ್ಯವಾದ ಹಬ್ಬ ಹಾಡಿಯ, ಇವುಗಳ ವಿಚಾರವಾದ ಕಥೆಗಳೂ, ಕಲ್ಪಿತ ಕಥೆಗಳೂ, ನೀತಿ ಕಥೆಗಳೂ, ಇತಿಹಾಸಗಳೂ, ಜೀವಿತಚರಿತ್ರೆಗಳೂ ಕೆಲಕೆಲವ್ರು ಇರುವುವು. ಇವುಗಳನ್ನು ಇಲ್ಲಿ ಕೊಟ್ಟಿರುವ ಕ್ರಮದಲ್ಲಿಯೇ ಹೇಳಬೇಕಾದ ಆವಶ್ಯಕತೆ ಏನೂ ಇಲ್ಲ. ಒಂದೊಂದು ದಿನ ಒಂದೊಂದರ ಮೇರೆ, ಬಾಲಕರ ಯೋಗ್ಯತೆಯನ್ನರಿತು, ಪುಸ್ತಕಭಾಷೆಯನ್ನು ಮರೆತು, ಸಾಧಾರಣವಾಗಿ