ವಿಷಯಕ್ಕೆ ಹೋಗು

ಪುಟ:ಕಥಾವಳಿ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಣ್ಣು ಬಿಟ್ಟು ನೋಡಲು ಮರುದಿನ ಸೂರ್ಯನು ಪಶ್ಚಿಮದಿಕ್ಕಿನಲ್ಲಿ ಸೌಮ್ಯವಾಗಿ ಕಾಣುತ್ತಿದ್ದನು, ಅವಳು ಆಯಾಸದಿಂದ, ಎಷ್ಟೊಂದುಹೊತ್ತು ಮೈ ಮರೆತು ಮಲಗಿರಬಹುದು! ನೀವೇ ಯೋಚಿಸಿ, ಎಚ್ಚರಗೊಂಡ ಮೇಲೆ ತಿರುಗಿ ಶ್ರಮವು ತೋರುವುದಕ್ಕೆ ಮೊದಲಾಯಿತು, ತಡೆಯಲಾರದಷ್ಟು ಹಸಿವು, ಬಾಯಾರಿಕೆ, ಎಲ್ಲಾದರೂ ಹೋಗಿ ಅಲ್ಲಲ್ಲಿ ಉದುರಿರುವ ಹಣ್ಣನ್ನಾದರೂ ತಿನ್ನಬೇಕೆಂದರೆ ಹಜ್ಜೆ ಇಡುವುದಕ್ಕೆ ಆಗದು. ಆದರೂ ಅವಳು ಹಾಗೆಯೆ ಸ್ವಲ್ಪ ಚೇತರಿಸಿಕೊಂಡು ಮೆಲ್ಲಮೆಲ್ಲನೆ ಹೊರಟಳು.

ಅಷ್ಟರಲ್ಲಿಯೇ ಸೂರ್ಯನು ಮುಳುಗಿದನು. ಕತ್ತಲೂ ಆಯಿತು. ಹುಲಿಗಳ ಆರ್ಭಟ, ನರಿಯ ಕೂಗು, ಹೆದರಿಕೆ, ಹಾಗೆಯೆ ಅವಳು ಮು೦ದೆ ಮುಂದೆ ಹೋಗುತ್ತಿರಲು, ನಕ್ಷತ್ರಗಳಂತೆ ಥಳಥಳಿಸುವ ಮಿಣಕು ಹುಳುಗಳಿಂದ ಬೆಳಕಾಗಿದ್ದ ಒಂದು ಪ್ರದೇಶವು ಕಾಣಬಂದಿತು. ಅಲ್ಲಿಗೆ ಹೋಗಿ ನೋಡಿದಳು. ಅಲ್ಲಿ ಒಂದು ದೊಡ್ಡ ಹುತ್ತವು ಇದ್ದಿತು. ಹುತ್ತವನ್ನು ನೋಡಿದೊಡನೆ ತನ್ನ ಸ್ವಪ್ನವು ಜ್ಞಾಪಕಕ್ಕೆ ಬಂದಿತು. “ ಇದೇನು ! ಆಶ್ಚರ್ಯವಾಗಿರುವುದು, ಒಳ್ಳೆಯದು ! ಈ ಹುತ್ತದಲ್ಲಿ ಯಾವ ರಾಜಕುಮಾ ರನಾದರೂ ಇರುತ್ತಾನೆಯೋ ನೋಡೋಣ ' ಎಂದು, ಆ ಹುತ್ತದ ಹತ್ತಿರ ಹೋಗಿ ; ' ಹಾ ! ದೈವವೆ ! ಮುದುಕರಾದ ತಂದೆ ತಾಯಿಗಳನ್ನು ಬಿಟ್ಟು ನನ್ನ ಇಷ್ಟಜನರಿಂದ ಅಗಲಿ ಕಾಡುಪಾಲಾಗಿ ಹಸಿದು ಬಾಯಾರಿಕೆ ಸಂಕಟ ಪಡುತ್ತಾ, ದು‍‌ಷ್ಟಮೃಗಗಳ ಬಾಯಿಗೆ ತುತ್ತಾಗಿರುವ ನನ್ನನ್ನು ಕಾಪಾಡುವ ಮಹಾತ್ಮರು ಯಾರಾದರೂ ಇಲ್ಲಿ ಇರುವರೆ ?” ಎಂದು ಬೇಡಿದಳು. ಕೂಡಲೆ ಆ ಹುತ್ತದೊಳಗಿನಿಂದ ಒಂದು ಧ್ವನಿಯು ಕೇಳಿಸಿತು.

ಆ ಧ್ವನಿಯನ್ನು ಕಿವಿಗೊಟ್ಟು ಕೇಳಿ, “ ಏನು! ನಾನು ನಾಗರಾಜನ ಮಗನು. ಭೂಲೋಕವನ್ನು ನೋಡುವುದಕ್ಕೆ ಬಂದಿರುವೆನು. ನೀನು ನನ್ನನ್ನು ಮದುವೆಯಾಗುವುದಾದರೆ ನಾನು ನಿನಗೆ ಸಹಾಯ ಮಾಡುವೆನು ” ಎಂದೋ, ಚೆನ್ನಾಯಿತು? ಈ ಹುತ್ತದಲ್ಲಿ ಹಾವಿರುವುದೋ ಚೇಳೇ ಇರುವುದೋ ? ಕ೦ಡವರಾರು ? ನಾನೇನುಮಾಡಲಿ ? ಕಾಣದವರನನ್ನು ನಾನು ಮದುವೆಯಾಗುವುದು ಹೇಗೆ ? ಅಯ್ಯೋ ? ಈಸಲಹೆಗೆ ಒಪ್ಪದಿದ್ದರೆ ನಾನು ಭಯಂಕರವಾದ ಈ ಕಾಡನ್ನು ಬಿಟ್ಟು ಊರು ಸೇರುವ ಬಗೆ ಹೇಗೆ?