೫. ಆ ನವಿಲನ್ನು ಹಿಡಿಯಬೇಕೆಂದು ನಾಗವಲ್ಲಿಯು ತನ್ನ ಜತೆಗಾತಿಯ ರೊಡನೆ ಓಡಿದಳು. ಆ ನವಿಲು, ನಾಗವಲ್ಲಿಯ ಕೈಗೆ ಸಿಕ್ಕಿಯ ಸಿಕ್ಕದಹಾಗೆ ಓಡುತ್ತಾ ಕಾಡಿಗೆ ನುಗ್ಗಿತು. ಅಷ್ಟು ಹೊತ್ತಿಗೆ ಸ್ವಲ್ಪ ಕತ್ತಲಾದುದರಿಂದ ಜತೆಗಾತಿಯರು ಮುಂದೆ ಹೋಗದೆ ಅಲ್ಲಲ್ಲಿಯೇ ನಿಂತು ನಾಗವಲ್ಲಿಯನ್ನು ಹಿಂದಿರುಗೆಂದು ಕೂಗುತಿದ್ದರು. ನಾಗವಲ್ಲಿಯು ಮಾತ್ರ ಎಷ್ಟು ಹೊತ್ತಾ ದರೂ ಆ ನವಿಲನ್ನು ಹಿಡಿದುಕೊಂಡೇ ಬರುವೆನೆಂದು ಕಾಡಿಗೆ ನುಗ್ಗಿದಳು. ಆ ವೇಳೆಗೆ ಚೆನ್ನಾಗಿ ಕತ್ತಲಾಯಿತು. ನವಿಲ ಧ್ವನಿಯು ಕೇಳಬರು ತಿದಿತೇ ಹೊರತು ನವಿಲು ಬೇರೆ ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಅದರ ಧ್ವನಿ ಯನ್ನೇ ಹಿಡಿದು ಮುಂದೆ ಮುಂದೆ ಹೋಗುವಲ್ಲಿ ಕಾಡು ನಿಬಿಡವಾಗುತ ಬಂದಿತು. ಎಲ್ಲೆಲ್ಲ ಗಿಡ, ಇದರ ಮೇಲೆ ಗಾಢಾಂಧಕಾರ, ದಾರಿಯೇ ತೋರದು, ಮುಂದೆ ನಾಗವಲ್ಲಿಯು ಏನು ಮಾಡಬೇಕು ? ಏನುಮಾಡು ವದಕ್ಕೂ ತೋರದೆ ಗಟ್ಟಿಯಾಗಿ ಅಳುವುದಕ್ಕೆ ಮೊದಲು ಮಾಡಿದಳು. ಕಾಡಿನಲ್ಲಿ ಅತ್ತರೆ ಕೇಳುವವರು ಯಾರು : ಅತ್ತು ಅತ್ತು ಸಾಕಾಯಿತು. ಮತ್ತೆ ದಾರಿ ಹುಡುಕಿದಳು. ದಾರಿ ಹುಡುಕಿ ತಡಿಕಿ ಸಾಕಾಯಿತು, ಕೈ ಕಾಲುಗಳೆಲ್ಲಾ ಮುಳ್ಳು ಮುರಿದು ಹೆಜ್ಜೆ ಇಡಲು ಆಗದೆ ಹೋಯಿತು. ನಿಂತ ಕಡೆಯೆ ನೆಲಕ್ಕೆ ಬಿದ್ದು ಬಿಟ್ಟಳು. ೬, ನಾಗವಲ್ಲಿಯ ಕಥೆ-(೨ ನೆಯ ಭಾಗ) ಕಾಡಿನಲ್ಲಿ ಬಿದ್ದ ಹಾಗೆಯೇ ನಾಗವಲ್ಲಿಗೆ ನಿದ್ದೆ ಬಂದಿತು, ನಿದ್ದೆಯ ಲ್ಲಿದ್ದಾಗ ಅವಳು ಒಂದು ಕನಸು ಕಂಡಳು. ಕನಸಿನಲ್ಲಿ ತಾನು ಮಲಗಿ. ರುವ ಸ್ಥಳಕ್ಕೆ ಸವಿಾಪದಲ್ಲಿಯೇ ಒಂದು ದೊಡ್ಡ ಹುತ್ತ ಇರುವಂತೆಯ, ಆ ಹುತ್ತದಲ್ಲಿ ಬಹು ಸುಂದರನಾದ ಒಬ್ಬ ದೊರೆ ಮಗನು ಇರುವಂತೆಯೂ, ಆ ದೊರೆ ಮಗನ ಸಹಾಯದಿಂದ ತಾನು ತನ್ನ ಮನೆಯನ್ನು ಸೇರಿದಂ ತೆಯೂ, ಆ ದೊರೆ ಮಗನು ಎಲ್ಲೋ ಬೇಗ ಮಾಯವಾದಂತೆಯೂ ಆಗಿ ಅವಳಿಗೆ ಎಚ್ಚರವಾಯಿತು.
ಪುಟ:ಕಥಾವಳಿ.djvu/೨೦
ಗೋಚರ