ಆ ಇಬ್ಬರು ಮಂಕರೂ ಆ ದೊಡ್ಡ ಭೇರಿಯೊಳಗೆ ಯಾರೋ ಇರುವ ರೆಂದೂ ಗಟ್ಟಿಯಾಗಿ ಹೊಡೆದ ಹಾಗೆಲ್ಲಾ ಅವರು ಕೂಗಿಕೊಳ್ಳುವರೆಂದೂ ತಿಳಿದುಕೊಂಡರು. ತರುವಾಯ ಹೇಗಾದರೂ ಮಾಡಿ ಅದರ ಒಳಗೆ ಇರು ವವರನ್ನು ಬಿಡಿಸಬೇಕೆಂದು ಎಣಿಸಿ ಅವರಿಬ್ಬರೂ ಆ ಮೆರವಣಿಗೆಯ ಜತೆ ಯಲ್ಲಿಯೇ ಹೊರಟರು. ಸ್ವಲ್ಪ ದೂರ ಹೋದಮೇಲೆ, ಭೇರಿಯನನು ಹುಲ್ಲು ಕಸ ಕಡ್ಡಿ ಯನು ಹಚ್ಚಿ, ಭೇರಿಯನ್ನು ಕಾಯಿಸಲಿಕ್ಕೆ ಇಳಿಸಿ, ದೀಪದ ಕಡ್ಡಿಯನ್ನು ತರಲಿಕ್ಕೆ ಸ್ವಲ್ಪ ಹಿಂದಕ್ಕೆ ಹೋದನು. ಅದೇ ಸರಿಯಾದ ಸಮಯವೆಂದು ಆ ಮ೦ಕರು ಒಂದೊಂದು ಕಡೆಯ ಚರ್ಮವನ್ನು ಒಬ್ಬೊಬ್ಬನು ಹರಿದು ಹಾಕಿ ಒಳಗೆ ಕೈ ನೀಡಿ ಯಾರು ಇರುವರೆಂದು ತಡಕಾಡುತಿದ್ದರು. ಅಲ್ಲಿ ಒಬ್ಬನ ಕೈ ಇನ್ನೊಬ್ಬ ನಿಗೆ ಸಿಕ್ಕಲು, ನನ್ನ ಕೈಗೆ ಸಿಕ್ಕಿದನೆಂದು ಒಬ್ಬ ಮಂಕನೂ, ತನ್ನ ಕೈಗೆ ಸಿಕ್ಕಿದನೆಂದು ಮತ್ತೊಬ್ಬ ಮ೦ಕನ ಕೂಗಿಕೊಳ್ಳುತಿದ್ದರು. ಆತ್ಮರಲ್ಲಿಯೆ ಭೇರಿಯನ್ನು ಬಾರಿಸುವವನು ಬಂದು ನೋಡಿ ಕೋಪ ಗೊ೦ಡು, ಇವನಿಗೆ ಒಂದು ಏಟು ಅವನಿಗೆ ಒಂದು ಏಟು ಕೊಟ್ಟು, ಇಬ್ಬ ರನ್ನೂ ಓಡಿಸಿದನು. ೫, ನಾಗವಲ್ಲಿಯ ಕಥೆ-(೧ನೆಯ ಭಾಗ.) ನಾಗವಲ್ಲಿಯು ನಕುಲರಾಯನೆಂಬ ಒಬ್ಬ ದೊರೆಯ ಒಬ್ಬಳೇ ಮಗಳು. ಇವಳು ಒಂದು ದಿನ ಸಾಯಂಕಾಲ ತನ್ನ ಜತೆಗಾತಿಯರೊಡನೆ ಊರಿಗೆ ಹತ್ತಿರದಲ್ಲಿದ್ದ ಒಂದು ಉದ್ಯಾನವನಕ್ಕೆ ಹೋಗಿ ಹೂಗಳನ್ನು ಕೊ ಯ್ಯುತಲಿರಲು, ಎಲ್ಲೋ ದೂರದಲ್ಲಿ ಒಂದು ನವಿಲು) ಕೇಗುಹಾಕಿದಂತೆ ಕೇಳಬಂದಿತು, ಒಡನೆಯ ಸುತ್ತಲೂ ನೋಡಿದಳು, ಹತ್ತಿರದಲ್ಲಿಯೆ ಕಾಮನ ಬಿಲ್ಲಿನಂತೆ ಗರಿಯನ್ನು ಎತ್ತಿಕೊಂಡು ಆಡುತಿದ್ದ ಬಹು ಸುಂದರವಾದ ಒಂದು ನವಿಲನ್ನು ಕಂಡಳು.
ಪುಟ:ಕಥಾವಳಿ.djvu/೧೯
ಗೋಚರ