ವಿಷಯಕ್ಕೆ ಹೋಗು

ಪುಟ:ಕಥಾವಳಿ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿರುಗಿ ರಾತ್ರಿ ಬಂದು ನೋಡುವಲ್ಲಿ ಕೆಲವು ಕಡಿಮೆಯಾಗಿರುತ್ತಿದ್ದುವು. ಈ ಕಳ್ಳತನವನ್ನು ಕಂಡು ಹಿಡಿಯಬೇಕೆಂದು ಒಂದು ದಿನ ಆ ಒಕ್ಕಲಿಗನು ಸ್ವಲ್ಪ ಮರೆಯಾಗಿ ಅಲ್ಲಿಯೇ ಕಣ್ಣಿಟ್ಟು ನೋಡುತಿದ್ದನು. ಸ್ವಲ್ಪ ಹೊತ್ತಿನಲ್ಲಿಯೇ, ಒಂದು ಇಲಿಯು ಬಂದು ಸುತ್ತು ಮುತ್ತೂ ನೋಡಿ, ಮೆಲ್ಲನೆ ಮೊಟ್ಟೆ ಗಳ ಹತ್ತಿರಕ್ಕೆ ಹೋಗಿ, ಹಿಂದಿರುಗಿ ಬುಡು ಬುಡನೆ ಓಡಿ ಬಿಲವನ್ನು ಸೇರಿತು, ಆಮೇಲೆ ಮೂರು ನಾಲ್ಕು ಇಲಿಗಳು ಒಟ್ಟಿಗೆ ಬಂದುವು. ಒಂದು ಇಲಿಯು ಮೆತ್ತಗೆ ಒಂದು ಮೊಟ್ಟೆ ಯ ಹತ್ತಿರ ಹೋಗಿ ಮಲಗಿಕೊಂಡು ತನ್ನ ಬಾಲವನ್ನು ಆ ಮೊಟ್ಟೆಯ ಸುತ್ತಲೂ ಬೀಸಿತು. ಆಮೇಲೆ, ಮೊಟ್ಟೆಯ ಸುತ್ತೂ ಬಂದಿದ್ದ ತನ್ನ ಬಾಲದ ತುದಿಯನ್ನು ಬಾಯಿಯಿಂದ ಕಚ್ಚಿಕೊಂಡಿತು, ಆ ಬಳಿಕ ಉಳಿದ ಇಲಿಗಳು ಮೊಟ್ಟೆ ಯೊ ಡನೆ ಇದ್ದ ಆ ಇಲಿಯ ಕುತ್ತಿಗೆಯನ್ನು ಕಚ್ಚಿಕೊಂಡು ಹೊರಟುವ, ಹೀಗೆ ಮೊಟ್ಟೆಯು ಸುಲಭವಾಗಿ ಬಿಲಕ್ಕೆ ಸಾಗಿಹೋಗುತಿದ್ದಿತು. ಅದನ್ನು ನೋಡಿ ಒಕ್ಕಲಿಗನು- ಓಹೋ ! ಕಳ್ಳರು ಸಿಕ್ಕಿದರು ! ಕಳ್ಳರು ಸಿಕ್ಕಿದರು ! ಎಂದು ಎದ್ದು ಚಪ್ಪಾಳೆಯನ್ನು ತಟ್ಟಿ ದನು. ಕಡಲೆ ಮೊಟ್ಟೆ ಯನ್ನು ಅಲ್ಲಿಯೇ ಬಿಟ್ಟು ಇಲಿಗಳೆ ಲ್ಲಾ ಓಡಿಹೋದುವು. ೪, ಮಂಕರೂ- ಭೇರಿಯೂ. ಒಂದು ರಾತ್ರಿ ಹಾಲು ಚೆಲ್ಲಿದಹಾಗೆ ಬೆಳದಿಂಗಳು ಬಂದಿತು. ಆ ರಾತ್ರಿ ಇಬ್ಬರು ಮಂಕರು ಜತೆಯಾಗಿ ಎಲ್ಲೂ ಹೋಗುತಿದ್ದರು, ಅವರಿಗೆ ಇದಿರಾಗಿ ಒಂದು ಮೆರವಣಿಗೆ ಬರುತಿದ್ದಿತು. ಅದರ ಮುಂದುಗಡೆಯಲ್ಲಿ ಭೇರಿಯನ್ನು ಬಾರಿಸುತ ಒಬ್ಬನು ಬರುತಿದ್ದನು. ಈ ಇಬ್ಬರು ಮಂಕರ ಆ ಭೇರಿಯ ಶಬ್ದವನ್ನು ಕೇಳಿ ಅದನ್ನೇ ನೋಡುತ್ತ ನಿಂತರು. ಛೇರಿ ಯನ್ನು ಗಟ್ಟಿಯಾಗಿ ಬಾರಿಸಿದಹಾಗೆಲ್ಲಾ ಶಬ್ದವು ಹೆಚ್ಚಾಗಿ ಆಗುತಿದ್ದಿ ತು.