ವಿಷಯಕ್ಕೆ ಹೋಗು

ಪುಟ:ಕಥಾವಳಿ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨, ಕೋತಿಯ ಬೆಕ್ಕಿನ ಮರಿಯ. ಒಬ್ಬ ಹುಡುಗನು ಒಂದು ಕೋತಿಯನ್ನೂ ಒಂದು ಬೆಕ್ಕಿನ ಮರಿ ಯನ್ನೂ ಸಾಕುತ್ತಿದ್ದನು. ಆ ಕೋತಿಯು ಬೆಕ್ಕಿನ ಮರಿಯೊಂದಿಗೆ ಬಹಳ ಸ್ನೇಹವಾಗಿದ್ದಿತು. ಒಂದು ದಿವಸ ಇವೆರಡೂ ಆಡುತ್ತಿರುವಾಗ ಕೋತಿಯು ಬೆಕ್ಕಿನ ಬಾಲವನ್ನು ಹಿಡಿದು ಎಳೆಯಿತು. ಬೆಕ್ಕಿಗೆ ಕೋಪಬಂದು ಕೋತಿಯನ್ನು ಪರಚಿತು. ಬೆಕ್ಕಿನ ಉಗುರು ಸಾಧಾರಣವಾಗಿ ಒಳಗೆ ಇರುವದರಿಂದ ಬೆಕ್ಕಿಗೆ ಮೊನಚಾದ ಉಗುರುಗಳು ಇರುವವಂದು ಕೋತಿಗೆ ತಿಳಿದೇ ಇರಲಿಲ್ಲ. ಆದುದರಿಂದ ಕೋತಿಯು ಬೆಕ್ಕಿನ ಕಾಲುಗಳನ್ನು ಹಿಡಿದುಕೊಂಡು ಯಾವುದರಿಂದ ತನಗೆ ನೋವ ಆಯಿತೆಂದು ಚೆನ್ನಾಗಿ ನೋಡಿತು. ಆಗ ಒಳಗೆ ಸೆಳೆದುಕೊಂಡಿದ್ದ ಉಗುರುಗಳನ್ನು ಕಂಡುಹಿಡಿದು ಅವೇ ತನ್ನನ್ನು ಪರಚಿದುವೆಂದು ತಿಳಿದು ಒಂದೊಂದಾಗಿ ಅವುಗಳನ್ನೆಲ್ಲಾ ಹಲ್ಲಿನಿಂದ ಸೆಳೆದು ಕಿತ್ತುಹಾಕಿತು. ಅದು ಮೊದಲು ಬೆಕ್ಕು ಕೋತಿಯ ಮೇಲೆ ಬಿದ್ದು ಪರಚಿದಾಗೆಲ್ಲಾ ಕೋತಿಯು ಅದನ್ನು ಹಿಡಿದುಕೊಂಡು ಮತ್ತೆ ಮತ್ತೆ ಬೆಳೆದ ಉಗುರನ್ನು ಕಿತ್ತು ಹಾಕುತ್ತಿದ್ದಿತು. ಇದರಿಂದ ಉಂಟಾದ ನೋವನ್ನು ತಡೆಯಲಾರದೆ ಬೆಕ್ಕು ಪರಚುವುದನ್ನು ಬಿಟ್ಟು ಬಿಟ್ಟಿತು. ಕೋತಿಯು ಬೆಕ್ಕಿನ ಉಗುರು ಮುರಿದುಹಾಕುವುದನ್ನೂ ಬಿಟ್ಟು ಬಿಟ್ಟಿತು. ೩, ಇಲಿಗಳ ಉಪಾಯ. ಇಲಿಗಳಿಗೆ ಕೋಳಿಯ ಮೊಟ್ಟೆ ಗಳನ್ನು ಕಂಡರೆ ಬಹಳ ಆಶೆ, ಅವು ಮೊಟ್ಟೆ ಗಳಿರುವ ಸ್ಥಳವನ್ನು ಹುಡುಕಿ, ಅವನ್ನು ಬಹು ಉಪಾಯದಿಂದ ತಮ್ಮ ಬಿಲಕ್ಕೆ ಸಾಗಿಸಿ, ಅಲ್ಲಿ ತಿನ್ನು ವುವು. ಒಬ್ಬ ಒಕ್ಕಲಿಗನ ಮನೆಯಲ್ಲಿ ಇಪ್ಪತ್ತು ಮೂವತ್ತು ಕೋಳಿಗಳಿದ್ದುವು. ಅವ್ರ ಇಟ್ಟ ಮೊಟ್ಟೆಗಳನ್ನು ಅವನು ಬೆಳಗ್ಗೆ ಎಣಿಸಿಕೊಂಡು ಹೋಗಿ