ಪುಟ:ಕಥಾವಳಿ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ನಾಗವಲ್ಲಿಯು ಹಿಂದಿರುಗಿ ಬಂದು ತನ್ನ ತಂದೆ ತಾಯಿಗಳನ್ನು ಸಂತೋಷಪಡಿಸಿ ಹೋಗುವುದರಲ್ಲಿ ಒಂದು ಗಳಿಗೆ ಹೆಚ್ಚಾದುದರಿಂದ, ತನ್ನ ಪ್ರಿಯನಿದ್ದೆಡೆಗೆ ಓಡಿ ಓಡಿ ಹೋದಳು. ಅಲ್ಲಿ ರಾಜಕುಮಾರನೇ ಇರಲಿಲ್ಲ, ತಾನು ಸ್ವಲ್ಪ ಹೊತ್ತಾಗಿ ಬಂದು ದರಿಂದ ರಾಜಕುಮಾರನು ಮಾಯವಾದನೆಂದು ಚಿಂತಿಸಿ, ಅವನನ್ನು ಹುಡುಕಿಕೊಂಡು ಕಾಡಿನಲ್ಲಿಯೇ ಹೊರಟಳು, ಗೆಡ್ಡೆ ಗೆಣಸುಗಳನ್ನು ತಿಂದು ಪ್ರಾಣವನ್ನುಳಿಸಿಕೊಂಡು ಕಾಡಿನಲ್ಲೆಲ್ಲಾ ಅಲೆದಳು. ಎಲ್ಲಿಯೂ ತನ್ನ ಪ್ರಿಯನು ಸಿಕ್ಕಲಿಲ್ಲ. ಬಹು ಶಾಂತಳಾಗಿ ಒಂದು ಮರದ ನೆರಳಲ್ಲಿ ಕುಳಿ ತುಕೊಂಡಳು, ಹತ್ತಿರದಲ್ಲಿಯೆ ಒಂದು ಗುಡಿಸಲು ಕಾಣಬಂದಿತು. ಪ್ರಿಯನು ಆ ಗುಡಿಸಲಿನಲ್ಲಿಯಾದರೂ ಇರುವನೋ ಎಂದು ತಟ್ಟನೆ ಹೊರಟು ಗುಡಿ ಸಲನ್ನು ಸೇರಿದಳು. ಆ ಗುಡಿಸಲಿನಲ್ಲಿ ಕುಳಿತಿದ್ದವನು, ರತ್ನದ ಕವಚವನ್ನು ತೊಟ್ಟು ವಜ್ರದ ಕಿರೀಟವನ್ನು ಇಟ್ಟು ಥಳಥಳಿಸುತಿದ್ದ ಪ್ರಿಯನೆ ? ಅಲ್ಲ, ಕಾವಿಯ ಬಟ್ಟೆಯನ್ನುಟ್ಟು, ಬಿಳಿಯ ಗಡ್ಡವನ್ನು ಬಿಟ್ಟು ಕಂಗೊಳಿಸುತ್ತಿದ್ದ ಒಬ್ಬ ಋಷಿಯು, ನಾಗವಲ್ಲಿಯು ಆ ಋಷಿಯ ಪಾದಕ್ಕೆರಗಿ ಕೈ ಮುಗಿದು ನಿಂತಳು, ಋಷಿಯು ನಾಗವಲ್ಲಿಯ ವೃತ್ತಾಂತವನ್ನೆಲ್ಲಾ ತಿಳಿದು, ಅವಳಿಗೆ ಧೈಲ್ಯವನ್ನು ಹೇಳಿ, ಮಂತ್ರಿಸಿ ನಾಲ್ಕು ಪದಾರ್ಥಗಳನ್ನು ಕೊಟ್ಟ ' ನಿನ್ನ ಪ್ರಿಯನು ಸಿಕ್ಕುವನು ಹೋಗು ' ಎಂದು ಆಶೀರ್ವದಿಸಿ ಕಳುಹಿಸಿದನು. ನಾಗವಲ್ಲಿಯು ಆ ಋಷಿಗೆ ನಮಸ್ಕರಿಸಿ, ನಾಗರಾಜನ ಮಗನನ್ನು ಹುಡುಕಿಕೊಂಡು ಆಕಾಡಿನಲ್ಲ ಯೇ ಹೊರಟಳು. ದಾರಿಯಲ್ಲಿ ಒಂದುದೊಡ್ಡ ಬೆಟ್ಟವು ಸಿಕ್ಕಿತು. ಆ ಬೆಟ್ಟವ ಬಹು ಇಳಿಜಾರಾಗಿಯೂ, ನುಣು ಪಾ ಗಿಯೂ ಇದ್ದುದರಿಂದ, ಹತ್ತು ಇದಕ್ಕೆ ಅಸಾಧ್ಯವಾಗಿ ತೋರಿತು. ಆಗ ಋಷಿಯ ಕೊಟ್ಟಿದ್ದ ಪದಾರ್ಥಗಳಲ್ಲಿ ಮೂರು ವಜ್ರದ ಸೂಜಿಗಳು ಇದ್ದು ದನ್ನು ನೋಡಿ ಅವುಗಳನ್ನು ಚುಚ್ಚಿ ಮೆಟ್ಟಿಲುಗಳಂತೆ ಮಾಡಿ ಕೊಂಡು ಆ ಬೆಟ್ಟವನ್ನು ದಾಟಿದಳು.