೧೧ ಅಲ್ಲಿಂದ ಮುಂದೆ ಹೋಗುತ್ತಿರುವಾಗ, ಒಂದು ಇಕ್ಕಟ್ಟಾದ ಸ್ಥಳವ ಸಿಕ್ಕಿತು, ಆ ಸ್ಥಳದಲ್ಲಿ ಹರಿತವಾದ ಮೂರು ಕತ್ತಿಗಳು ತಕತಕನೆ ಕುಣಿ ದಾಡುತ್ತಿದ್ದು , ಅವನ್ನು ನೋಡುವುದಕ್ಕೇ ಭಯವಾಗುತ್ತಿದ್ದಿತು. ಇನ್ನು ದಾಟುವುದು ಹೇಗೆ ? ನಾಗವಲ್ಲಿಯು ಧೈರವನ್ನು ತಾಳಿ ಋಷಿಯು ಕೊ ಟ್ವಿದ್ದುದರಲ್ಲಿ ಒಂದು ಚಕ್ರವಿದ್ದುದನ್ನು ನೋಡಿ, ಅದೂ ಸೂಜಿಯಂತಯೇ ಮಂತ್ರಸಿದ್ದವಾದ ಚಕ್ರವಿರಬಹುದೆಂದು, ಅದರ ಮೇಲೆ ಕುಳಿತು, ಕತ್ತಿಯ ಹತ್ತಿರ ಉರುಳಿಸಿದಳು, ಕತ್ತಿಗಳ ಮೇಲೆ ಚಕ್ರವ ಸರನೆ ಹೊರಟ ಅವ ಇನ್ನು ಆಚೆಗೆ ದಾಟಿಸಿತು. ಅವಳು ಮುಂದೆ ಮುಂದೆ ಹೋಗುತ, ಕಾಡು ಭಯಂಕರವಾಗುತ ಬಂದಿತೇ ಹೊರತು, ಊರು ಬೇರೆ ಸಿಕ್ಕಲಿಲ್ಲ. ಹುಲಿಗಳ ಆಲ್ಬಟ, ಆನೆಗಳ ಕೂಗು, ಸಿಂಹದ ಗರ್ಜನೆ, ಇವ್ರ ಬಾರಿ ಬಾರಿಗೂ ಅವಳ ಮೈಯನ್ನೆಲ್ಲಾ ನಡುಗಿಸುತ್ತಿದ್ದು ವ. ಆದರೆ ಅಲ್ಲಲ್ಲಿ ಸಿಕ್ಕುತಿದ್ದ ಹುಲ್ಲಿಗಳ ಹಿಂಡು, ನವಿ ಲುಗಳ ಸಮೂಹ, ಕೋಗಿಲೆಗಳ ಗುಂಪು, ಇವ, ಅವಳಿಗೆ ಸಮಾಧಾನವ ನ್ನುಂಟುಮಾಡುತಿದ್ದುವ, ಹಾಗೆಯೇ ಹೊರಟಳು. ಮುಂದೆ ಒಂದು ದೊಡ್ಡ ಮೈದಾನವೂ ಸಿಕ್ಕಿತು ಆ ಮೈದಾನದಲ್ಲಿ ಒಂದು ಸೊಗಸಾದ ಕೊಳ. ಆ ಕೊಳದಲ್ಲಿ ನೀರು ಕುದಿಯುತ್ತಿದ್ದಿತು. ಅದನ್ನು ನೋಡಿ ಅವಳಿಗೆ ಆಶ್ಚರ್ಯವಾಯಿತು. ಖುಷಿಯು ಕೊಟ್ಟಿದ್ದ ಪದಾರ್ಥಗಳಲ್ಲಿ ಒಂದು ಗೋಲಿ ಯಿದ್ದಿತು. ಅದನ್ನು ಎಲ್ಲಿ ಯಾವಾಗ ಉಪಯೋಗಿಸಬಹುದೆಂದು ಯೋಚಿಸುತ, ಆ ಕೊಳದ ಮೇಲುಗಡೆಯ ಮೆಟ್ಟಲಮೇಲೆ ಕುಳಿತಿದ್ದಾಗ, ಮಂತ್ರಸಿದ್ದವಾದ ಆ ಗೋಲಿಯು ಅವಳ ಕೈಯಿಂದ ಉರುಳಿಹೋಗಿ ಆ ಕುದಿವ ನೀರಿಗೆ ಬಿದ್ದಿತು. ಅದು ಬಿದ್ದೊಡನೆ ಕುದಿಯುತ್ತಿದ್ದ ನೀರು ತಣ್ಣಗೆ ಆಗಿ ತಿಳಿಯಿತು. ತಿಳಿದ ನೀರಿನಲ್ಲಿ ಏಳುಪ್ಪರಿಗೆಯ ಅರಮನೆಯೊಂದು ಕಾಣಿಸಿಕೊಂಡಿತು. ಆ ಅರಮನೆಯ ಮೇಲುಗಡೆಯ ಬಿಸಿಲು ಮಚ್ಚಿನಲ್ಲಿ ನಾಗರಾಜ ಕುಮಾರನು ಯೋಚಿಸುತ ಕುಳಿತಿದ್ದಂತೆ ಕಾಣಿಸಿತು. ತನ್ನ ಪ್ರಿಯನನ್ನು ನೋಡಿದ ಸಂತೋ ಷಕ್ಕೆ ನಾಗವಲ್ಲಿಯು ಅಲ್ಲಿಯೇ ಮೂರ್ಛಿತಳಾದಳು.
ಪುಟ:ಕಥಾವಳಿ.djvu/೨೬
ಗೋಚರ