೧೬ ಸ್ವಲ್ಪ ಕೆಳಗಡೆ ಸಮನಾದ ಸ್ಥಳದಲ್ಲಿ ಹುಟ್ಟಿತಾದುದರಿಂದ ಅಲ್ಲಲ್ಲಿ ನಿಂತು ಮೆಲ್ಲಮೆಲ್ಲನೆ ಹರಿಯುತಿದ್ದಿ ತು. ಸರಸರನೆ ಹರಿದು ಹೋಗುತ್ತಿದ್ದ ನದಿಯು, ಇನ್ನೊಂದನ್ನು ನೋಡಿ “ ಏನು ! ಸೋಮಾರಿಯಂತೆ ತೆವಳಿಕೊಂಡು ಮೆಲ್ಲಗೆ ಹೋಗುತಿದ್ದೀಯ ? ನನ್ನನ್ನು ನೋಡು ! ಇನ್ನು ಸ್ವಲ್ಪ ದೂರ ಹೀಗೆ ಹೋಗಿ ದೊಡ್ಡ ಹೊಳೆ ಯಾಗಿ ಹರಿದು, ಅನೇಕ ದೇಶಗಳಲ್ಲಿ ಪ್ರವಹಿಸಿ, ಕಾಲುವೆಗಳನ್ನು ಕೊಟ್ಟು ರೈತರಿಗೆ ಬೇಕಾದುದನ್ನೆಲ್ಲಾ ಬೆಳೆಯಲೂ ಸಹಾಯವಾಗಿ, ಅನೇಕ ಸಣ್ಯ ಸಣ್ಣ ನದಿಗಳೊಡನೆ ಕೂಡಿ ಸಮುದ್ರವನ್ನು ಸೇರು ವೆನು ' ಎಂದು ಹರಿದು ಮುಂದೆ ಮುಂದೆ ಹೋಗುತಿದ್ದಿತು. ಮೆಲ್ಲಗೆ ಹರಿಯುತಿದ್ದ ನದಿಯು ಯಾವ ಉತ್ತರವನ್ನು ಕೊಡದೆ ತನ್ನ ಪಾಡಿಗೆ ತಾನು ಮೆಲ್ಲನೆ ಹರಿದು ಬಯಲಿಗೆ ಬೀಳಲು, ಇತರ ಸಣ್ಣ ಸಣ್ಣ ನದಿಗಳು ಬಂದು ಇದರೊಡನೆ ಸೇರಿದುವು. ಆಗ ಇದು ದೊಡ್ಡ ಹೊಳೆ ಯಾಗಿ, ಜನರಿಗೆ ಬಹು ಉಪಯೋಗವಾಗಿ, ಗಂಭೀರವಾಗಿ ಹರಿಯುತಿ ದ್ವಿತು, ಮೊದಲು ಡಂಭವನ್ನು ಮಾಡಿಕೊಂಡು ಮುಂದಾಗಿ ಬಂದ ನದಿಯ ಸ್ವಲ್ಪ ದೂರದಲ್ಲಿಯೇ ಇದನ್ನು ಸೇರಿ, ಇದರ ಮೇಲೆ ಹೋಗುತಿದ್ದ ಹಡಗು ಗಳನ್ನೂ ಇದಕ್ಕೆ ಕಟ್ಟಿದ್ದ ಅಣೆಕಟ್ಟು ಸೇತುಗಳನ್ನೂ ನೋಡಿ ನಾಚಿಕೊಂಡು ಈ ದೊಡ್ಡ ಹೊಳೆಯಲ್ಲಿಯೆ ಅಡಗಿಹೋಯಿತು. ೧೩, ಸುಳ್ಳು ಹುಡುಗ. ಒಂದು ಕಾಡಿನ ಹತ್ತಿರ ಒಂದು ಸಣ್ಣ ಊರು ಇದ್ದಿತು. ಆ ಊರಿನ ದನಗಳನ್ನು ಅಟ್ಟಿ ಕೊಂಡು ಸವಿಾಪವಾಗಿದ್ದ ಒಂದು ಹುಲ್ಲುಗಾವಲಿಗೆ ಒಬ್ಬ ಹುಡುಗನು ಪ್ರತಿದಿನವೂ ಹೋಗುತಿದ್ದನು. ಒಂದು ದಿವಸ ಸಾಯಂಕಾಲದ ಹೊತ್ತಿನಲ್ಲಿ ಆ ಹುಡುಗನು ಊರ ಬಿಳಿಗೆ ಬಂದು * \ : ಹುಲಿ ಬಂದಿತು ; ಬಂದಿತೋ ; ಎಂದು ಬಿಡದೆ
ಪುಟ:ಕಥಾವಳಿ.djvu/೩೧
ಗೋಚರ