ವಿಷಯಕ್ಕೆ ಹೋಗು

ಪುಟ:ಕಥಾವಳಿ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭ ಗಟ್ಟಿಯಾಗಿ ಅರಚಿಕೊಂಡನು, ಊರಜನರು ಅವನ ಕೂಗನ್ನು ಕೇಳಿ ಮಾ ಡುತ್ತಿದ್ದ ಕೆಲಸವನ್ನು ಹಾಗೆಯೇ ಬಿಟ್ಟು, ಈಟಿದೊಣ್ಣೆಗಳನ್ನು ತೆಗೆದು ಕೊಂಡು ಅಲ್ಲಿಗೆ ಓಡಿಬಂದರು. ಜನರು ಬೇಗ ಬೇಗ ಬರುವುದನ್ನು ನೋಡಿ ಆ ಹುಡುಗನು ನಗುತ ನಿಂತನು. ಜನರೆಲ್ಲರೂ ಅವನನ್ನು ಬೈಯ್ಯುತ್ತಾ ಹಿಂದಿರುಗಿದರು. - ಇನ್ನೊಂದು ದಿನ ಸಂಜೆಯಲ್ಲಿ ನಿಜವಾಗಿಯ ಹುಲಿಬಂದಿತು. ಅದೇ ಹುಡುಗನು ಆ ಹೊತ್ತೂ ಒಂದೇ ಉಸಿರಿನಲ್ಲಿ ಗಟ್ಟಿಯಾಗಿ ಕಿರಿಚಿಕೊ೦ ಡನು, ಊರ ಜನರೆಲ್ಲರೂ ಹೇಳಿದರು. ಆದರೂ ಅದು ಸುಳ್ಳಿರಬಹುದೆಂದು ಯಾರೂ ಅತ್ತಲಾಗಿ ಹೋಗಲೇ ಇಲ್ಲ. ಹುಲಿಯು ಬಂದು ಅವನ ಹಸು ವನ್ನು ಎತ್ತಿಕೊಂಡು ಹೊರಟೇಹೋಯಿತು. ೧೪, ಚಿಕ್ಕ ದೇವರಾಜ ವೊಡೆಯರು. ನಮ್ಮ ಈ ಮಹಿಸೂರು ಸಂಸ್ಥಾನವನ್ನು ಹಿಂದೆ ಮಹಾಶೂರರಾದ ಅನೇಕ ರಾಜರುಗಳು ಆಳಿರುವರು. ಅವರಲ್ಲಿ ಚಿಕ್ಕದೇವರಾಜ ಒಡೆಯರೆಂ ಬವರೊಬ್ಬರು, ಇವರು ಬಹು ಸಮರ್ಥರು, ಇವರ ಕಾಲದಲ್ಲಿಯೇ ಬೆಂಗ ಟೂರು, ತುಮಕೂರು, ಚಿಕ್ಕಮಗಳೂರು, ಮದ್ದಗಿರಿ ಇವು ಮಹಿಸೂರು ಸಂಸ್ಥಾನಕ್ಕೆ ಸೇರಿದುವು. ಊರಿಂದೂರಿಗೆ ಕಾಗದ ಪತ್ರಗಳನ್ನು ಸಾಗಿಸುವ ಅಂಚೆ (ಪೋಸ್ಟ್) ಕಛೇರಿಯನ್ನು ಏರ್ಪಡಿಸಿದವರೂ ಇವರೇ, ರಾತ್ರಿ ವೇಳೆ ಕಳ್ಳರು ಕಾಕರು ಪ್ರಜೆಗಳಿಗೆ ಹಿಂಸೆಕೊಡದಂತೆ ನೋಡಿಕೊಳ್ಳಲು ಕೊತ್ಕಾಲ, ಕಳ್ಳಭಂಟ, ದಂಡಿ ಮುಂತಾದವರನ್ನು ಇವರೇ ಮೊದಲು ಗೊತ್ತು ಮಾಡಿ ದವರು, ರೈತರೆಲ್ಲರೂ ಕ್ರಮವಾಗಿ ತಾವು ಬೆಳೆದ ಬೆಳೆಯಲ್ಲಿ ಒಂದು ಪಾಲನ್ನು ಸರಕಾರಕ್ಕೆ ಕೊಡಬೇಕೆಂದು ಕಟ್ಟು ಮಾಡಿದವರೂ ಇವರೇ. ಹೀಗೆ ಕಟ್ಟು ಮಾಡಲು, " ಕಾಡು ಭೂಮಿಯನ್ನು ಬಸವಣ್ಣ ಉಳುತ್ತಾನೆ, ದೇವೇಂದ್ರ ಮಳೆಯನ್ನು ಕರೆಯುತ್ತಾನೆ; ನಾವು ಕಷ್ಟಪಟ್ಟು ಬೆಳೆಮಾಡಿ ದೊರೆಗೇಕೆ