೧೮ ಕೊಡಬೇಕು ?” ಎಂದು ಕೆಲವು ಮಂದಿ ಪುಂಡು ಜನರು ಕೂಗಲಿಕ್ಕೆ ಆರಂ ಭಿಸಿದರು. ದೊರೆಗಳು ಇ೦ತಹವರನ್ನೆಲ್ಲಾ ಅಡಗಿಸಿದರು. ಹೀಗೆ ಪುಂಡರನ್ನು ಅಡಗಿಸಿ ಒಳ್ಳೆಯವರನ್ನು ಕಾಪಾಡಿ, ಕಳ್ಳರುಕಾಕರಿಗೆ ಆಸ್ಪದ ಕೊಡದೆ ಈ ದೇಶವನ್ನು ಧದಿಂದ ಆಳುತ್ತಿದ್ದರು. ಆಗ ದೇಶದಲ್ಲಿ ಎಲ್ಲೆಲ್ಲಿ ನೋಡಿದರೂ ಸುಭಿಕ್ಷವು ನೆಲೆಗೊಂಡಿತು. ಹೀಗಿರಲು, ಮಹಿಸೂರ ಸಂಸ್ಥಾನದಲ್ಲಿ ಬಹಳವಾಗಿ ಹಣ ಸಿಕ್ಕುವು ದೆಂದು, ಕೊಳ್ಳೆ ಹೊಡೆವದರಲ್ಲಿ ನಿಪ್ಪಣರಾದ ಮರಾಟೆಯವರು ಒಂದು ದೊಡ್ಡ ದಂಡನ್ನು ತೆಗೆದುಕೊಂಡು ಬಂದು ಶ್ರೀರಂಗಪಟ್ಟಣದ ಬಳಿಯಲ್ಲಿ ಇಳಿದರು. ಆಗ ಪಟ್ಟಣದಲ್ಲಿ ಮಹಿಸೂರು ಸೈನ್ಯವಿರಲಿಲ್ಲ. ಶ್ರೀರಂಗಪಟ್ಟ ಣವು ಮರಾಟಿಯವರ ಕೊಳ್ಳೆಗೆ ತುತ್ತಾಯಿತು. ಅಷ್ಟರಲ್ಲಿಯೆ ಮಹಾ ರಾಜರ ಸೈನ್ಯವೊಂದು ಬಂದು ಬಹು ಉಪಾಯದಿಂದ ಮರಾಟೆಯವ ರನ್ನು ಓಡಿಸಿ ಶ್ರೀರಂಗಪಟ್ಟಣವನ್ನು ಕಾಪಾಡಿತು. - ಮಹಿಸೂರಿನ ದಳವಾಯಿಯು ಆಗ ಮಾಡಿದ ಉಪಾಯವನ್ನು ಹೇಳುವೆನು ಕೇಳಿ:- ಶ್ರೀರಂಗಪಟ್ಟಣಕ್ಕೂ ಮಹಿಸೂರ ಸೈನ್ಯಕ್ಕೂ, ಮದ್ದೇ ಮರಾಟಿ ಸೈನ್ಯವು ಇಳಿದಿದ್ದಿತು.ರಾತ್ರಿಯಾಗುವವರೆಗೂ ದಳವಾಯಿಯು ಸುಮ್ಮನಿದ್ದು ಮಧ್ಯರಾತ್ರಿಯಲ್ಲಿ ಎತ್ತಿನ ಕೊಂಬುಗಳಿಗೆ ಸ೦ಜುಗಳನ್ನು ಕಟ್ಟಿಸಿ ದೀಪವನ್ನು ಹಚ್ಚಿಸಿ, ಮರಾಟೆಯವರ ಮೇಲೆ ಹೊರಡಿಸಿದನು. ಮರಾಟಿಯವರು, ದೀವಟಿಗೆಗಳು ಬರುತ್ತಿದ್ದ ದಿಕ್ಕಿನಿಂದ ಮೈಸೂರ ಸೈನ್ಯವು ಬರುತ್ತಿರುವುದೆಂದು ಇದಿರು ನೋಡುತ್ತಿರಲು, ದಳವಾಯಿಯು ಸುತ್ತಿ ಕೊಂಡು ಬಂದು ಹಿಂದುಗಡೆಯಿಂದ ಮರಾಟೆಯವರ ಮೇಲೆ ಬಿದ್ದು, ಅವ ರನ್ನು ದಿಕ್ಕಾಪಾಲಾಗಿ ಓಡಿಸಿದನು, ಮರಾಟಿಯವರು ಚದರಿಹೋದರು. ಶ್ರೀರಂಗಪಟ್ಟಣವ ಉಳಿಯಿತು. ಈ ಚಿಕ್ಕದೇವರಾಜ ಒಡೆಯರವರು ಪ್ರತಿದಿನವೂ ಬೊಕ್ಕಸಕ್ಕೆ ಎರಡು ಸಾವಿರ ವರಹಗಳು ಬಂದಲ್ಲದೆ ಊಟಮಾಡುತ್ತಿರಲಿಲ್ಲ. ಹೀಗೆ ಇವರು ಬಹಳ ಹಣವನ್ನು ಸೇರಿಸಿದ್ದುದರಿಂದ ಇವರನ್ನು ' ನವಕೋಟಿ ನಾರಾಯಣ' ಎಂದು ಜನರು ಕರೆಯುತಿದ್ದರು.
ಪುಟ:ಕಥಾವಳಿ.djvu/೩೩
ಗೋಚರ