೧೯ ಇವರ ಸಾಹಸಕ್ಕೂ ಆಳುವಿಕೆಗೂ ಮೆಚ್ಚಿ ದೆಹಲೀ ಚಕ್ರವರ್ತಿಯು ಇವರಿಗೆ 'ರಾಜಾ ಜಗದೇಕ್ ' ಎಂಬ ಬಿರುದನ್ನು ಕೊಟ್ಟನಲ್ಲದೆ, ನಗಾರಿ ನವಪತ್ತು ಮತ್ಯಾದೆಗಳನ್ನೂ ಜಂತದ ಒಂದು ಸಿಂಹಾಸನವನ್ನೂ ಕಳುಹಿಸಿ ಕೊಟ್ಟನು ಇವರು ಬಹುಕಾಲ ಸುಖವಾಗಿ ಮಹಿಸೂರರಾಚ್ಯವನ್ನಾಳಿದರು. ೧೫, ಬಕಾಸುರನ ಕಥೆ. ಮಕ್ಕಳಿರಾ, ನೀವೂ ಬಕಾಸುರನ ಹೆಸರನ್ನು ಕೇಳಿರಬಹುದು, ಎಷ್ಟು ತಿಂಡಿಯನ್ನು ಕೊಟ್ಟರೂ ಬಕಬಕನೆ ಮುಕ್ಕಿಬಿಟ್ಟು, ಇನ್ನಿಷ್ಟು ಕೊಡು, ಮತ್ತಿಷ್ಟು ಕೊಡು, ಎಂದು, ಚಂಡಿ ಹಿಡಿವ ಹುಡುಗರಿಗೆ ( ಇದೇನು ಬಕಾ ಸುರನ ಹಾಗೆ ಆಡುತ್ತಾನೆ ? ' ಎನ್ನುವುದನ್ನು ನೀವು ಕೇಳಲಿಲ್ಲವೆ ? ಆ ಬಕಾಸುರನ ಕಥೆಯನ್ನು ಈಗ ಹೇಳುವೆನು ಕೇಳಿ:- ಆ ಬಕಾಸುರನು ಒಬ್ಬ ದೊಡ್ಡ ರಾಕ್ಷಸನು. ಅಬ್ಬಬ್ಬ ! ಅವನ ಹೆಸರನ್ನು ಕೇಳಿದರೆ ಮೈ ನಡು ಗುತ್ತಿದೆ ! ಆ ರಾಕ್ಷಸನು ಒಂದಾನೊಂದು ಕಾಲದಲ್ಲಿ ಏಕಚಕ್ರ ಸರಿ ಎಂಬ ಒಂದು ಊರಿನ ಹತ್ತಿರ ಒಂದು ಗವಿಯಲ್ಲಿ ವಾಸಮಾಡಿಕೊಂಡಿದ್ದನು. ಅವನು ಪ್ರತಿದಿವಸವೂ ಏಕಚಕ್ರ ಸ್ತಬಗೆ ಬಂದು ಬೇಕಾದುದನ್ನೆಲ್ಲಾ ತಿಂದು ಜನರನ್ನು ಕೊಂದು ರಕ್ತವನ್ನು ಹೀರಿ ಹೋಗುತ್ತಿದ್ದನು. ಕೆಲವು ಕಾಲದ ಲ್ಲಿಯೇ ಊರು ಬರಿದಾಗುತ್ತಾ ಬಂದಿತು. ಆಗ ಉಳಿದ ಜನರೆಲ್ಲರೂ ಸೇರಿ ಗಡಗಡನೆ ನಡಗುತ್ತಾ, ಬಕಾಸುರನು ಬರುವ ವೇಳೆಗೆ ಸರಿಯಾಗಿ, ದೂರ ದಲ್ಲಿ ಅಡ್ಡಬಿದ್ದು ಹೋ ಎಂದು ಮೊರೆಯಿಟ್ಟರು. ಆ ಗೋಳನ್ನು ಕೇಳಿ, ರಾಕ್ಷಸನ ಮನಸ್ಸು ಸ್ವಲ್ಪ ಕರಗಿತು. ಆಗ ರಾಕ್ಷಸನು--ನಿತ್ಯವೂ ತಪ್ಪದೆ ನೀವು ಒಂದು ಗಾಡಿ ಅನ್ನ, ಒಂದು ಗಾಡಿ ತಿಂಡಿ, ಒಂದು ಭಂಡಿಯತುಂಬ ಪಾನಕ, ನೀರು ಮಜ್ಜಿಗೆ, ಒಬ್ಬ ಮನುಷ್ಯ ಇಷ್ಟನ್ನೂ ನನಗೆ ಕೊಡುವದಾ ದರೆ ನಿಮಗೆ ಈಗ ಕೊಡುತ್ತಿರುವ ತೊಂದರೆಯನ್ನು ತಪ್ಪಿಸುವೆನು ಎಂದನು. ಅದಕ್ಕೆ ಊರಿನವರೆಲ್ಲರೂ ಒಪ್ಪಿಕೊಂಡು ಅದೇ ರೀತಿಯಲ್ಲಿ ನಡಿಸುತ್ತಾ ಬರುತ್ತಿದ್ದರು.
ಪುಟ:ಕಥಾವಳಿ.djvu/೩೪
ಗೋಚರ