೨೦ ಒಂದು ದಿನದ ಸರದಿ ಒಬ್ಬ ಮುದುಕಿಯದಾಗಿದ್ದಿತು. ಆ ಮುದು ಕಿಗೆ ಒಬ್ಬನೇ ಒಬ್ಬ ಮಗನಿದ್ದನು, ಅವನಲ್ಲದೆ ಮತ್ತಾರೂ ಇರಲಿಲ್ಲ' ತಾನೇ ಹೋಗಿ ರಾಕ್ಷಸನಿಗೆ ತುತ್ತಾಗುವುದು ಎಂದರೆ, ಬಕನು ಮುದುಕಿ ಯರನ್ನೂ ಮಕ್ಕಳನ್ನೂ ಮುಟ್ಟುತಿರಲಿಲ್ಲ. ಮುಖ್ಯವೇನು ? ಅವರನ್ನು ತಿಂದರೆ ಅವನ ಹೊಟ್ಟೆ ತುಂಬುತ್ತಿರಲಿಲ್ಲ: ಮಗನನ್ನು ಕಳುಹಿಸಲು ಮು ದುಕಿಗೆ ಮನಸ್ಸಿಲ್ಲ, ಅವಳು ಗೊಳೋ ಎಂದು ಅಳುತ್ತಿದ್ದಳು, ಊರು ಜನರು, ಮಗನನ್ನು ಅಟ್ಟಿಬಿಡಬೇಕು, ಇಲ್ಲದಿದ್ದರೆ ಊರು ಹಾಳಾಗುವುದು ಎಂದು ಮುದುಕಿಯನ್ನು ಬಲಾತ್ಕರಿಸುತಿದ್ದರು. ಆ ಸಮಯಕ್ಕೆ ಸರಿಯಾಗಿ ಪಂಚ ಪಾಂಡವರಾದ ಧರ್ಮರಾಜ, ಭೀಮ, ಅರ್ಜುನ, ನಕುಲ, ಸಹದೇವ ಇವರು ತಾಯಿಯಾದ ಕುಂತಿ ದೇವಿಯೊಡನೆ ಬಂದು ಅಲ್ಲಿದ್ದರು. ಆಗ ಆ ಮುದುಕಿಯ ರೋದನವನ್ನು ಕೇಳಿ ಭೀಮನು, “ಅಮ್ಮಾ, ನಾನು ಹೋಗುವೆನು, ನಮ್ಮ ತಾಯಿಗೆ ನಾನ ಲ್ಲದೆ ಇನ್ನೂ ನಾಲ್ಕು ಮಂದಿ ಮಕ್ಕಳಿರುವರು. ನಾನು ಸತ್ತರೂ ಚಿಂತೆ ಯಿಲ್ಲ, ನೀನು ಎಲ್ಲವನ್ನೂ ಸಿದ್ಧಪಡಿಸು, ನಾನು ಹೋಗಿಬರುವೆನು' ಎಂದನು. ಮಗನ ಸಾಮರ್ಥ್ಯವನ್ನು ತಿಳಿದಿದ್ದ ಕುಂತಿಯು ಭೀಮನು ಬಕಾಸುರನಿಗೆ ತುತ್ತಾಗಿ ಹೋಗುವುದಕ್ಕೆ ಸಮ್ಮತಿಸಿದಳು, ನಾನಾ ವಿಧ ವಾದ ಹುಳಿಯನ್ನ, ಮೊಸರನ್ನ ಇವೆಲ್ಲಾ ಸಿದ್ಧವಾದುವ; ಕಡುಬು ಕಜ್ಜಾ ಯ ಇವೂ ಒದುಗಿದವ, ಪಾನಕ, ನೀರುಮಜ್ಜಿಗೆ ಇವೂ ಅಣಿಯಾದುವು. ಭಂಡಿಗಳು ಸಿದ್ದವಾದುವು. ಭೀಮನೂ ಹೊರಟನು. ಹೋಗು ಹೋಗುತ ಹಸಿದಿದ್ದ ಭೀಮನು ಒಂದೊಂದುಬಗೆಯಅನ್ನವನ್ನಾಗಿ ತಿಂದು ಮುಗಿಸಿ, ಕಡುಬು ಕಜ್ಜಾಯಗಳನ್ನು ನಿಧಾನವಾಗಿ ಮೆದ್ದು, ಗಟ ಗಟನ ಪಾನಕ ನೀರುಮಜ್ಜಿಗೆಗಳನ್ನು ಕುಡಿದು ತೃಪ್ತನಾಗುವ ಹೊತ್ತಿಗೆ ಮಧ್ಯಾಹ್ನವಾಗಿ ಹೋಯಿತು. ಬಕಾಸುರನಿಗೆ, ಆಹಾರವು ಅಂದು ಅಷ್ಟು ಹೊತ್ತಾದರೂ ಬರಲಿಲ್ಲವೆಂದು, ಬಹು ಕೋಪಬಂದಿತು. ಹಸಿವಿನಿಂದ ಕೊ ಪವು ಅತಿಯಾಗಿ, ಅವನು ಭೂಮಿಯನ್ನು ಅಪ್ಪಳಿಸುತ್ತಿದ್ದನು. ಅಷ್ಟು ಹೊತ್ತಿಗೆ ಭಂಡಿಗಳು ನಿಧಾನವಾಗಿ ಬರುತ್ತಿದ್ದುದನ್ನು ನೋಡಿ ಒಂದುಸಲ ಗರ್ಜನಮಾ ಡಿದನು. ಆ ಗರ್ಜನೆಗೆ ಭೀಮನು ಹೆದರಲಿಲ್ಲ, ಭೀಮನು ತಿಂದು ಹೊ
ಪುಟ:ಕಥಾವಳಿ.djvu/೩೫
ಗೋಚರ