ಪುಟ:ಕಥಾವಳಿ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಬಂದ ತನ್ನ ಮರಿಗಳೊಡನೆ ದೊಡ್ಡ ದೊಡ್ಡ ಹಜ್ಜೆಯನ್ನಿಟ್ಟುಕೊಂಡು ಬೇಗನೆ ಆ ಸ್ಥಳಕ್ಕೆ ಹೋಗಿ, ಕಾಲಿನಿಂದ ಕೆದಕಿ, ಥಳಥಳಿಸುತ್ತಿದ್ದುದನ್ನು ಕೊಕ್ಕಿನಿಂದ ತೆಗೆದುಕೊಂಡಿತು. ಅಯ್ಯೋ ಪಾಪ ! ಅದು ಒಂದು ರತ್ನ ! ಅದರ ಬೆಲೆಯನ್ನು ಕೊಳ್ಳಿ ಏನು ಬಲ್ಲದು ? ಅದನ್ನು ನೋಡಿ ಕೋಳಿಗೆ ಬಹು ದುಃಖವಾಯಿತು. ಆ ಥಳಥಳಿಸುತ್ತಿದ್ದ ಕೆಂಪನ್ನು ಉಗುಳಿ ಇದಕ್ಕಿಂತಲೂ ಒಂದು ಕಡಲೆ ಕಾಳಾ ಗಲಿ ಹೆಸರು ಕಾಳಾಗಲಿ ಸಿಕ್ಕಿದ್ದರೆ ನನಗೆ ಸಂತೋಷವಾಗುತ್ತಿತ್ತು? ಎಂದು ಕೊಳ್ಳುತ್ತಾ ಆ ತಿಪ್ಪೆಯಲ್ಲಿಯೆ ಕಾಳು ಕಡ್ಡಿಯನ್ನು ಹುಡುಕಾಡುತಿದ್ದಿತು. ೧೮, ಇರುವೆಯೂ- ಚಿಮ್ಮಂಡೆ ಹುಳುವೂ. ಚಳಿಗಾಲದಲ್ಲಿ ಒಂದು ದಿನ ಇರುವೆಗಳು ತಾವ ತಿಂಡಿಯನ್ನು ಕೂಡಿ ಹಾಕಿದ್ದ ಗೂಡಿಗೆ ಹೋಗಿದ್ದುವ, ಅಲ್ಲಿಗೆ ಒಂದು ತಾರಿ ಬಡಕಲಾದ ಚಿಮ್ಮಂಡೆ ಹುಳುವ ಬಂದು ' ನಾನು ಹಸಿವಿನಿಂದ ಸಂಕಟಪಡುತ್ತಿದ್ದೇನೆ. ತಿನ್ನುವುದಕ್ಕೆ ಏನಾದರೂ ಸ್ವಲ್ಪ ಕೊಡಿ' ಎಂದು ಇರುವೆಗಳನ್ನು ಕೇಳಿ ಕೊಂಡಿತು. ಇರುವೆಗಳು-' ಏಕೆ ! ನೀನು ಕೂಡಿಹಾಕಿದ್ದುದು ಏನಾಯಿತು ? ನೀನು ಬೇಸಗೆಯಲ್ಲಿ ಕಾಳು ಕಡ್ಡಿಯನ್ನು ಕೂಡಿಹಾಕಲಿಲ್ಲವೆ ?” ಎಂದು ಕೇಳಿದುವ, ಅದಕ್ಕೆ ಚಿಮ್ಮಂಡೆ ಹುಳವ- ಅಯ್ಯೋ ! ನನಗೆ ಹೊತ್ತೇ ಇರಲಿಲ್ಲ. ಬೇಸಗೆಯು ಬಹು ಚೆನ್ನಾಗಿದ್ದಿತು. ನಾನು ಮೂರು ಹೊತ್ತೂ ಹಾಡುತ್ತಲೆ ಕಾಲವನ್ನು ಕಳೆದೆನು ” ಎಂದಿತು. “ ಓಹೋ ! ಸರಿ, ಸರಿ : ಬೇಸಗೆಯಲ್ಲೆಲ್ಲಾ ಹಾಡಿದುದಾಯಿತು. ಈಗ ಚಳಿಗಾಲದಲ್ಲಿ ಹೊಟ್ಟೆಗಿ ಲ್ಲದೆ ಕುಣಿವುದಕ್ಕೆ ಹೊರಟಿದ್ದೀಯೆ ? ' ಎಂದು ಇರುವೆಗಳು ಅಪಹಾಸ್ಯ ಮಾಡಿ ನಕ್ಕುವು.