೨೫
೧೯, ಅಭಿಮನ್ಯುವಿನ ಕಥೆ.
ಅಭಿಮನ್ಯುನ ಅರ್ಜುನನ ಮಗನು. ಅರ್ಜುನನು ಪಂಚಪಾಂಡವರೆಂಬ ಐದುಮಂದಿ ಅಣ್ಣ ತಮ್ಮಂದಿರಲ್ಲಿ ಒಬ್ಬನು. ಧರ್ಮರಾಯ, ಭೀಮ, ಅರ್ಜುನ, ನಕುಲ, ಸಹದೇವ, ಇವರೇ ಪಂಚಪಾಂಡವರು. ಇವರಿಗೂ ಇವರಿಗೂ ಇವರ ದಾಯಾದಿಗಳಾದ ರಾಜ್ಯಕ್ಕಾಗಿ ದೊಡ್ಡ ಯುದ್ಧವು ನಡೆಯಿತು. ಆ ಯುದ್ಧದಲ್ಲಿ ಒಂದು ದಿನ ಮಗುವಾದ ಅಭಿಮನ್ಯುವು ತೋರಿಸಿದ ಪರಾ ಕ್ರಮವನ್ನು ಈ ಹೊತ್ತು ಹೇಳುವೆನು ಕೇಳಿ.
ಕೌರವರಿಗೆಲ್ಲಾ ದುರ್ಯೋಧನನು ದೊರೆಯು. ದುರ್ಯೋಧನನ ಕಡೆ ಬಹು ಶಕ್ತರಾದ ದ್ರೋಣ, ಕೃಪ, ಅಶ್ವತ್ಥಾಮ, ಕರ್ಣ, ಶಲ್ಯ, ಸೈಂಧವ ಇವರೇ ಮುಂತಾದ ಮಹಾ ಶೂರರೂ, ಅನೇಕಸೈನಿಕರೂ ಇದ್ದರು, ಯುದ್ಧವು ನಡೆಯುತ್ತಿದ್ದಿತು. ದ್ರೋಣಾಚಾರ್ಯರು ಸೇನಾಧಿಪತಿಯಾಗಿದ್ದರು. ಅಂದು ಪಾಂಡವರನ್ನು ಸೋಲಿಸುವೆನೆಂದು ಹಟವನ್ನು ಮಾಡಿದ್ದರು. ಅದಕ್ಕಾಗಿ ಸೈನ್ಯದಿಂದಲೆ ಒಂದುಬಲವಾದ ಕೋಟೆ ಕಟ್ಟಿದ್ದರು. ಆ ಕೋಟೆಯೊಳಗೆ ನುಗ್ಗಿ ಹೆಡೆಯಲು ಅರ್ಜುನನಿಗೂ, ಅವನ ಸಾರಥಿ ಶ್ರೀ ಕೃಷ ನಿಗೂ ಗೊತ್ತು ಇದ್ದಿತು; ಧರ್ಮರಾಜ ಭೀಮರಿಗೆ ತಿಳಿದಿರಲಿಲ್ಲ. ಕೌರವರು ಉಪಾಯದಿಂದ ಅರ್ಜುನನನ್ನು ಬೇರೆ ಕಡೆ ಯುದ್ಧಕ್ಕೆ ಸೆಳೆದು,ಧರ ರಾಜಭೀಮರಿಗೆ ಈ ಕೋಟೆಯೊಳಕ್ಕೆ ಬಂದು ಯುದ್ಧ ಮಾಡುವಂತೆ ಹೇಳಿ ಕಳುಹಿಸಿದರು, ಕ್ಷತ್ರಿಯರು ಯುದ್ಧಕ್ಕೆ ಬರಲಾರೆವೆಂದು ಹೇಳಿ ಕಳುಹಿಸಲು ಆದೀತೆ? ಆಗ ಏನು ಮಾಡಬೇಕು?ಅರ್ಜುನನಾದರೋ ಬೇರೆ ಹೋಗಿದ್ದನು. ಭೀಮನಿಗೆ ಗದೆ ತಿರುಗಿಸಿ ಶತ್ರುಗಳನ್ನು ಕೊಲ್ಲಲು ಬರುತ್ತಿದ್ದಿತೇ ಹೊರತು ಅ೦ತಹ ಕೋಟೆಯನ್ನು ಬಾಣದಿಂದ ಭೇದಿಸಲು ಬಾರದು.ನಕುಲ ಸಹದೇವರು ಅಷ್ಟು ಸಮರ್ಥರಾಗಿರಲಿಲ್ಲ. “ಏನು ಮಾಡುವುದು?” ಎಂದು ಧರರಾಯನು ಯೋಚಿಸುತ್ತಿದ್ದಾಗ, ಅಲ್ಲಿ ಓಡಾಡುತ್ತಿದ್ದ ಅಭಿಮನ್ಯುವ, ಧರ್ಮರಾಯನಿಗೆ ನಮಸ್ಕರಿಸಿ, “ನನಗೆ ಅಪ್ಪಣೆಯನ್ನು ಕೊಡಬೇಕು, ನಾನು ಆ ಕೋಟೆಯನ್ನು ಮುರಿದು ಕೌರವ ಸೈನ್ಯವನ್ನು ಧ್ವಂಸವಾಡಿ, ಅತಿರಥ ಮಹಾರಥರನ್ನು ಸೋಲಿಸಿ, ಜಯಶಾಲಿಯಾಗಿ ಬರುವೆನು, ಎಂದನು. ಅದಕ್ಕೆ ಧರ್ಮರಾಯ ನೀನು ಮಗು, ನಿನಗೆ ಸಾಧ್ಯವೆ ? ಯುದ್ದದಲ್ಲಿ